ಬಾಲಕಿಗೆ ಕಿರುಕುಳ: ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ
Team Udayavani, Jul 31, 2023, 10:40 PM IST
ಉಳ್ಳಾಲ: ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ನಿಲ್ದಾಣದ ಬಳಿ ಸೋಮವಾರ ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35)ನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಎಸೆಸೆಲ್ಸಿಸಿ ವಿದ್ಯಾರ್ಥಿನಿ ಶಾಲೆಯಿಂದ ವಾಪಸಾಗಿ ತಲಪಾಡಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದಿಳಿದು ಸಹೋದರಿಗಾಗಿ ಕಾಯುತ್ತ ನಿಂತಿದ್ದಳು. ಇದೇ ವೇಳೆ ಅದೇ ನಿಲ್ದಾಣದಲ್ಲಿ ನಿಂತಿದ್ದ ಮುವಾದ್ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿ ಮನೆಗೆ ಬಿಡುವುದಾಗಿ ಹೇಳಿ ಕೈಹಿಡಿದು ಎಳೆದಿದ್ದಾನೆ.
ತತ್‌ಕ್ಷಣ ವಿದ್ಯಾರ್ಥಿನಿ ಬೊಬ್ಬಿಟ್ಟಾಗ ಸ್ಥಳೀಯ ರಿಕ್ಷಾ ಚಾಲಕರು ಮುವಾದ್‌ನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.