“75′ ಹರಿನಮನ: ಪುನರೂರು ಸೇವೆ ಅನುಕರಣೀಯ: ಡಾ| ಶೆಟ್ಟಿ
Team Udayavani, Sep 8, 2018, 9:57 AM IST
ಮಂಗಳೂರು: ಎಲ್ಲ ರಂಗಗಳಲ್ಲಿಯೂ ಸಂಘಟಕರಾಗಿ, ಪ್ರವರ್ತಕ ರಾಗಿ, ಪ್ರೋತ್ಸಾಹಕರಾಗಿ ಹರಿಕೃಷ್ಣ ಪುನರೂರು ನೀಡುತ್ತಿರುವ ಸೇವೆ ಮತ್ತು ಕೊಡುಗೆ ಅನುಕರಣೀಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಶ್ಲಾಘಿಸಿದರು.
ಕದ್ರಿಯ ನೃತ್ಯ ಭಾರತಿ ವತಿಯಿಂದ ಶುಕ್ರವಾರ ಪುರಭವನದಲ್ಲಿ ಜರಗಿದ ಹರಿಕೃಷ್ಣ ಪುನರೂರು ಜನ್ಮ ಅಮೃತ ಮಹೋತ್ಸವ- 75 ಹರಿನಮನ ಎಂಬ ಹರಿಕೃಷ್ಣ ಪುನರೂರು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣಗೈದರು.
ಸಾಹಿತ್ಯ, ಲಲಿತಕಲೆಗಳು, ಉದ್ಯಮ, ಸಮಾಜಸೇವೆ, ದಾನ, ಧಾರ್ಮಿಕ, ಶಿಕ್ಷಣ ಸಹಿತ ಎಲ್ಲ ಕ್ಷೇತ್ರಗಳಿಗೂ ಪುನರೂರು ಅವರು ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿ ದ್ದಾರೆಂದು ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಧರ್ಮಸ್ಥಳದ ಡಿ. ಹರ್ಷೇದ್ರ ಕುಮಾರ್ ಅವರು ಹರಿಕೃಷ್ಣ ಪುನ ರೂರು-ಉಷಾರಾಣಿ ದಂಪತಿಯನ್ನು ಸಮ್ಮಾನಿಸಿ ಶುಭ ಹಾರೈಸಿದರು.
ಸೇವಾಬದ್ಧತೆ: ಪುನರೂರು
ಸಮಾಜದ ಸರ್ವತೋಮುಖ ಏಳಿಗೆಯ ಸೇವಾಬದ್ಧತೆಯನ್ನು ಗುರುಹಿರಿಯರು, ಸ್ನೇಹಿತರ ಮಾರ್ಗದರ್ಶನ ದಿಂದ ರೂಢಿಸಿಕೊಂಡಿರುವುದಾಗಿ ಸಮ್ಮಾನ ಸ್ವೀಕರಿಸಿದ ಹರಿಕೃಷ್ಣ ಪುನರೂರು ಹೇಳಿದರು. ಶರವು ರಾಘವೇಂದ್ರ ಶಾಸಿŒ ಅಧ್ಯಕ್ಷತೆ
ವಹಿಸಿದ್ದರು. ಜಯಂತಿ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಶ್ರೀಪತಿ ಭಟ್ ಮೂಡಬಿದಿರೆ, ಲಕ್ಷ್ಮೀ ರಾವ್ ಆರೂರು, ಪ್ರಭಾ ಸುವರ್ಣ ಮುಂಬಯಿ ಅತಿಥಿಗಳಾಗಿದ್ದರು. ಶಾರದಾ ವಿದ್ಯಾಲಯ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿನಂದನಾ ಭಾಷಣ ಮಾಡಿದರು.
ನೃತ್ಯ ಭಾರತಿ ಸ್ಥಾಪಕಾಧ್ಯಕ್ಷೆ ವಿ| ಗೀತಾ ಸರಳಾಯ ಪ್ರಸ್ತಾವನೆಗೈದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿ
ದರು. ವಿ| ರಶ್ಮಿ ಚಿದಾನಂದ್ ಸಮ್ಮಾನಪತ್ರ ವಾಚಿಸಿದರು. ವಿ| ರಮ್ಯಾಚಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.