ಕುಕ್ಕೆ ದೇವರ ಗದ್ದೆಯ ಭತ್ತದ ತೆನೆ ಕಟಾವು


Team Udayavani, Oct 20, 2018, 10:49 AM IST

19-october-4.gif

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವರಗದ್ದೆಯಲ್ಲಿ ಬೆಳೆದ ತೆನೆಗಳನ್ನು ಕಟಾವು ಮಾಡುವ ಕಾರ್ಯ ಗುರುವಾರ ನಡೆಯಿತು. ಶ್ರೀ ದೇಗುಲದ ಪುರೋಹಿತರು ಗದ್ದೆಯಲ್ಲಿ ಬೆಳೆದು ನಿಂತ ಪೈರುಗಳಿಗೆ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿದರು. ಗದ್ದೆಗೆ ಮಂತ್ರಾಕ್ಷತೆ ಹಾಕಲಾಯಿತು. ಆನಂತರದಲ್ಲಿ ಬೆಳೆದು ನಿಂತ ತೆನೆಗಳನ್ನು ಕಟಾವು ಮಾಡಲಾಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌, ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಭಟ್‌, ಮಾಸ್ಟರ್‌ಪ್ಲಾನ್‌ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ದೇಗುಲದ ಹೆಬ್ಟಾರ್‌ ಷಣ್ಮುಖ ಉಪಾರ್ಣ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ಹಿರಿಯರಾದ ಸುಬ್ರಹ್ಮಣ್ಯ ಶಬರಾಯ, ಕೆ.ಎಸ್‌.ಎಸ್‌. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಆರ್‌. ಶೆಟ್ಟಿಗಾರ್‌, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮೋನಪ್ಪ ಮಾನಾಡು, ಶ್ರೀ ದೇಗುಲದ ನಾಗೇಶ್‌ ಎ.ವಿ., ಜಾನು, ಪದ್ಮನಾಭ ಶೆಟ್ಟಿಗಾರ್‌, ರಾಜಲಕ್ಷ್ಮೀ ಶೆಟ್ಟಿಗಾರ್‌, ಹರೀಶ್‌ ಕೋನಡ್ಕ, ಗ್ರಾ.ಪಂ. ಸದಸ್ಯ ಮೋಹನದಾಸ ರೈ, ಗ್ರಾ.ಪಂ. ಸದಸ್ಯೆ ಸೌಮ್ಯಾ, ರತ್ನಕುಮಾರಿ, ಲೋಕೇಶ್‌ ಬಿ.ಎನ್‌., ಉಪನ್ಯಾಸಕ ರತ್ನಾಕರ ಎಸ್‌., ಭರತ್‌ ಕಲ್ಲಗದ್ದೆ, ಶೋಭಿತ್‌ ನಾಯರ್‌, ತಾರನಾಥ್‌ ಸಹಿತ ಸ್ಥಳೀಯ ಭಕ್ತರು ಭತ್ತದ ತೆನೆಗಳನ್ನು ಕಟಾವು ಮಾಡಿದರು. ಕಟಾವು ಮಾಡಿದ ತೆನೆಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಆವಶ್ಯಕತೆಗೆ ತಕ್ಕಷ್ಟು ತೆನೆಗಳನ್ನು ಮಾತ್ರ ಕಟಾವು ಮಾಡಲಾಯಿತು.

ದೇವಸ್ಥಾನದ ಗದ್ದೆ
ಶ್ರೀ ದೇಗುಲದಲ್ಲಿ ನಡೆಯುವ ಹೊಸ್ತಾರೋಹಣದ ದಿನ ಬೇರೆ ಸ್ಥಳದಿಂದ ಕೊರಳು (ತೆನೆ) ತಂದು ಪೂಜೆ ಸಲ್ಲಿಸಿ ಭಕ್ತರಿಗೆ ವಿತರಿಸಲಾಗುತ್ತಿತ್ತು. ಇದರಿಂದಾಗಿ ಭಕ್ತರಿಗೆ ಬೆರಳೆಣಿಕೆಯ ತೆನೆಗಳು ದೊರಕುತ್ತಿತ್ತು. ಭಕ್ತರಿಗೆ ಸಾಕಷ್ಟು ತೆನೆಗಳು ದೊರಕಲಿ ಎನ್ನುವ ಉದ್ದೇಶದಿಂದ ಈ ವರ್ಷ ದೇವಸ್ಥಾನದ ಆಡಳಿತ ಮಂಡಳಿ ವಿನೂತನ ಯೋಜನೆಯನ್ನು ರೂಪಿಸಿ ದೇವಸ್ಥಾನದ ವತಿಯಿಂದ ಗದ್ದೆ ಮಾಡಿ ಅದರಲ್ಲಿ ಬಂದ ತೆನೆಗಳನ್ನು ಭಕ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿತ್ತು. ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲೂ ದೇವಸ್ಥಾನದ ವತಿಯಿಂದ ನಾಟಿ ಮಾಡಿದ ಭತ್ತದ ತೆನೆಯನ್ನು ವಿತರಿಸುವುದು ಶ್ರೇಷ್ಠ ಎನ್ನುವುದು ಕಂಡುಬಂದಿತ್ತು. ತೆನೆ ಬಲಿತು ದೊಡ್ಡದಾಗುವ ತನಕ ಈ ಬಾರಿ ಕಾದಿದ್ದರಿಂದ ಹೊಸ್ತಾರೋಹಣ ಕೂಡ ಈ ಬಾರಿ ವಿಳಂಬವಾಗಿತ್ತು. ಈ ಕುರಿತು ಒಂದಷ್ಟು ಅಪಸ್ವರಗಳು ಸಾರ್ವಜನಿಕರಿಂದ ವ್ಯಕ್ತಗೊಂಡಿತ್ತು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.