ಜ. 14-16: ರಾ. ಹೆ. ಕೆಲಸ ಸ್ಥಗಿತ ಖಂಡಿಸಿ ಪಾದಯಾತ್ರೆ
Team Udayavani, Jan 13, 2019, 4:17 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಹಾಸನ- ಗುಂಡ್ಯ- ಬಿ.ಸಿ. ರೋಡ್ ನಡುವಣ ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೆಲ್ಯಾಡಿಯಿಂದ ಬಿ.ಸಿ. ರೋಡ್‌ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಜ. 14, 15, 16ರಂದು ನಡೆಯಲಿದೆ.
“ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ’ ಘೋಷಣೆಯೊಂದಿಗೆ ಈ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಜ. 14ರಂದು ಬೆಳಗ್ಗೆ 9 ಗಂಟೆಗೆ ನೆಲ್ಯಾಡಿ ಬಸ್ ತಂಗುದಾಣದ ಬಳಿ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಜಾವುಗಲ್, ಶಾಸಕರಾದ ಎಂ.ಇ. ಗೋಪಾಲ ಸ್ವಾಮಿ ಮತ್ತು ಎಚ್.ಕೆ. ಮಹೇಶ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ| ರಘು ಉಪಸ್ಥಿತರಿರುವರು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾದಯಾತ್ರೆಯು ಅಂದು ಸಂಜೆ 4.30ಕ್ಕೆ ಉಪ್ಪಿನಂಗಡಿ ತಲುಪಿ ಅಲ್ಲಿ ಪ್ರತಿಭಟನ ಸಭೆ ನಡೆಯಲಿದೆ. ಮಾಜಿ ಶಾಸಕರಾದ ವಸಂತ ಬಂಗೇರ, ಎಚ್.ಎಂ. ವಿಶ್ವನಾಥ್, ಜೆ.ಆರ್. ಲೋಬೊ, ಕೇರಳ ಪಿಸಿಸಿ ವಕ್ತಾರ ಹರೀಶ್ ಬಾಬು ಭಾಗವಹಿಸಲಿದ್ದಾರೆ ಎಂದರು.
ಜ. 15ರಂದು ಉಪ್ಪಿನಂಗಡಿಯಿಂದ ಹೊರಟು ಸಂಜೆ ಮಾಣಿ ಜಂಕ್ಷನ್ ತಲುಪಿ ಪ್ರತಿಭಟನ ಸಭೆನಡೆಯಲಿದೆ.
ಜ. 16ರಂದು ಮಾಣಿಯಿಂದ ಮುಂದುವರಿದು ಸಂಜೆ ಬಿ.ಸಿ. ರೋಡ್ ತಲಪುವುದು. ಬಸ್ ನಿಲ್ದಾಣದ ಬಳಿ ನಡೆಯುವ ಸಮಾರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾರಾಯಣ ರಾವ್, ಅರುಣ್ ಮಾಚಯ್ಯ, ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ, ಸವಿತಾ ರಮೇಶ್ ಭಾಗವಹಿಸುವರು.
ಮೂರು ದಿನಗಳಲ್ಲಿ ಒಟ್ಟು 42 ಕಿ.ಮೀ. ಪಾದಯಾತ್ರೆ ಸಂಚರಿಸಲಿದೆ. ಅಪೂರ್ಣ ಹೆದ್ದಾರಿಯ ಅವ್ಯವಸ್ಥೆ ಭೀಕರವಾಗಿದೆ. ಇದರ ವಿರುದ್ಧ ಪ್ರತಿಭಟಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಹೇಳಿಕೆ ನೀಡಿತ್ತು. ಅದರ ಪ್ರಕಾರ ಪಾದಯಾತ್ರೆ ರೂಪಿಸಲಾಗಿದೆ ಎಂದು ರಮಾನಾಥ ರೈ ವಿವರಿಸಿದರು.
ಕರಪತ್ರ ಬಿಡುಗಡೆ
ಪಾದಯಾತ್ರೆಗೆ ಸಂಬಂಧಿಸಿದ ಕರಪತ್ರಗಳನ್ನು ರಮಾನಾಥ ರೈ ಬಿಡುಗಡೆ ಮಾಡಿದರು. ಕೋಡಿಜಾಲ್ ಇಬ್ರಾಹಿಂ, ರಾಜಶೇಖರ ಕೋಟ್ಯಾನ್, ಮಾಧವ ಮಾವೆ, ಬಿ.ಎಚ್. ಖಾದರ್, ಸಂತೋಷ್ ಶೆಟ್ಟಿ, ಜೆ. ಅಬ್ದುಲ್ ಸಲೀಂ, ಜಯಶೀಲ ಅಡ್ಯಂತಾಯ, ಪ್ರವೀಣ್ ಚಂದ್ರ ಆಳ್ವ, ನಝೀರ್ ಬಜಾಲ್, ಟಿ.ಕೆ. ಸುಧೀರ್, ಅಬ್ಟಾಸ್ ಅಲಿ, ಬಿ. ಅಬೂಬಕರ್ ಉಪಸ್ಥಿತರಿದ್ದರು.
ತಪ್ಪು ಮಾಡಿದವರಿಗೆ ಜೀವ ಭಯ
ಮೂವರು ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಬಗ್ಗೆ ಪೊಲೀಸರು ತಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ನಾನೂ ಏನನ್ನೂ ಹೇಳಲಿಚ್ಛಿಸುವುದಿಲ್ಲ. ಆದರೆ ಒಂದು ಮಾತು ಹೇಳುತ್ತೇನೆ. “ತಪ್ಪು ಮಾಡಿದವರಿಗೆ ಜೀವ ಭಯ ಇದ್ದೇ ಇರುತ್ತದೆ. ಯಾವುದೇ ತಪ್ಪು ಮಾಡದ ಸಾಮಾನ್ಯ ನಾಗರಿಕರಿಗೆ ಯಾವುದೇ ಭಯ ಇರುವುದಿಲ್ಲ’ ಎಂದು ರಮಾನಾಥ ರೈ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.