ಗೆಲುವು ಅಭಿವೃದ್ಧಿ ಪರ ಆಶಯಕ್ಕೆ ಸಿಕ್ಕ ಜನಾದೇಶ: ಡಿ.ವಿ.
Team Udayavani, Mar 13, 2017, 3:31 PM IST
ಪುತ್ತೂರು : ದೇಶದ ಅತೀ ದೊಡ್ಡ ರಾಜ್ಯ ಹಾಗೂ ರಾಜಕೀಯ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದ ದೊಡ್ಡ ಗೆಲುವು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಪರ ಆಶಯಕ್ಕೆ ಸಿಕ್ಕಿದ ಜನಾದೇಶ ಎಂದು ಕೇಂದ್ರ ಸಾಂಖೀÂಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಬಣ್ಣಿಸಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಫಲಿತಾಂಶ ಈವರೆಗೆ ಸಮಸ್ಯೆಯಾಗಿ ಕಾಡಿದ್ದ ರಾಜ್ಯಸಭೆಯಲ್ಲಿನ ಬಲವನ್ನೂ ಹೆಚ್ಚಿಸಿದೆ. 2019ರ ಲೋಕಸಭೆ ಚುನಾವಣೆಗೂ ದಿಕ್ಸೂಚಿಯಾಗಿ ಬಿಜೆಪಿಗೆ ಶಕ್ತಿ ತುಂಬಿದೆ ಎಂದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 3 ವರ್ಷ ಪೂರೈಸಿದ ಸಂದರ್ಭ ದೇಶದ ವಿವಿಧ ಭಾಗಗಳಲ್ಲಿ ನಡೆದ ಚುನಾವಣೆಗಳು ಸರಕಾರದ ಆಡಳಿತ ವೈಖರಿಯನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದನ್ನು ತಿಳಿಸಿಕೊಟ್ಟಿದೆ. ಇದು ಒಂದು ರೀತಿಯ ಮೌಲ್ಯಮಾಪನವೂ ಹೌದು. ಮುಂಬಯಿ ಮಹಾನಗರಪಾಲಿಕೆ ಗೆಲುವು, ಒರಿಸ್ಸಾ ಜಿ.ಪಂ. ಕ್ಷೇತ್ರಗಳ ಗೆಲುವು ಸೇರಿದಂತೆ ಕೇಂದ್ರ ಸರಕಾರದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಕೋಡಿಂಬಾಡಿ ಅಶೋಕ್ ಕುಮಾರ್ ರೈ, ಅನೀಸ್ ಬಡೆಕ್ಕಿಲ, ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.ಮುಖಂಡ ಡಿ. ಶಂಭು ಭಟ್ ಸ್ವಾಗತಿಸಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.