ಅವರು ಸತತ 10 ಚುನಾವಣೆಗಳಲ್ಲಿ ಸ್ಪರ್ಧಿಸಿದರು
Team Udayavani, Apr 29, 2018, 6:20 AM IST
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಈ ವರೆಗಿನ 66 ವರ್ಷಗಳ (1952-2018) ಚುನಾವಣಾ ಇತಿಹಾಸದಲ್ಲಿ ಕೆ. ಅಮರನಾಥ ಶೆಟ್ಟಿ ಅವರಿಗೆ ವಿಶೇಷವಾದ ಸ್ಥಾನವಿದೆ. ಅವರು ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಿಂದ ಒಟ್ಟು 10 ಬಾರಿ ಸ್ಪರ್ಧಿಸಿದ್ದಾರೆ. ಅದು ಕೂಡ 1972ರಿಂದ 2014ರ ವರೆಗೆ ಸತತವಾಗಿ.ಜನತಾ ಪರಿವಾರದ ಪಕ್ಷಗಳಿಂದಲೇ ಸ್ಪರ್ಧಿ ಸಿದ ಅವರು 3 ಬಾರಿ ಆಯ್ಕೆಯಾಗಿದ್ದರು. 1983 ಮತ್ತು 1985ರಲ್ಲಿ ಆಯ್ಕೆಯಾದ ಸಂದರ್ಭದಲ್ಲಿ ಕರ್ನಾಟಕ ಸರಕಾರದಲ್ಲಿ ಸಚಿವರಾ ಗಿಯೂ ಸೇವೆ ಸಲ್ಲಿಸಿದ್ದರು.
ಕೊಡಾ¾ಣ್‌ಗುತ್ತು ಅಮರನಾಥ ಶೆಟ್ಟಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದು 1972ರಲ್ಲಿ. ಆಗ ಸಂಸ್ಥಾಕಾಂಗ್ರೆಸ್ ಅಭ್ಯರ್ಥಿ. ಮುಂದೆ ಇದೇ ಪಕ್ಷ “ಜನತಾಪಕ್ಷ’ದಲ್ಲಿ ಮುಖ್ಯ ಘಟಕ ಪಕ್ಷವಾಯಿತು.
ಆಗ ಕಾಂಗ್ರೆಸ್ ಐಯ ಡಾ| ದಾಮೋದರ ಮೂಲ್ಕಿ ಜಯಿಸಿದ್ದರು. 1978ರಲ್ಲಿ ಇದೇ ಫಲಿತಾಂಶ ಮರುಕಳಿಸಿತು. ಶೆಟ್ಟಿ ಅವರು ಆಗಷ್ಟೇ ರೂಪುಗೊಂಡಿದ್ದ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು.
1983ರಲ್ಲಿ ಶೆಟ್ಟಿ ಅವರು ಜನತಾ ಪಕ್ಷದಿಂದ (24,433 ಮತ), ಕಾಂಗ್ರೆಸ್‌ನ ದೇವದಾಸ್ ಕಟ್ಟೆಮಾರ್ (19,676) ಎದುರು ಜಯ ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. 1985ರಲ್ಲಿ ಸತತ 2ನೇ ಬಾರಿಗೆ ಶೆಟ್ಟಿ ಜಯಿಸಿದರು.
1989ರಲ್ಲಿ ಕಾಂಗ್ರೆಸ್‌ನ ಕೆ. ಸೋಮಪ್ಪ ಸುವರ್ಣ ಗೆದ್ದರೆ, 1994ರಲ್ಲಿ ಅಮರನಾಥ ಶೆಟ್ಟಿ ಗೆದ್ದರು. ಮುಂದೆ 1994ರಿಂದ 2013ರ ವರೆಗಿನ ಎಲ್ಲ 4 ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕೆ. ಅಭಯಚಂದ್ರ ಜಯಿಸಿದರು. 1999 ಮತ್ತು 2004ರಲ್ಲಿ ಶೆಟ್ಟಿ ಅವರಿಗೆ 2ನೇ ಸ್ಥಾನ; 2008 ಮತ್ತು 2013ರಲ್ಲಿ ಮೂರನೇ ಸ್ಥಾನ.
ಗೆದ್ದ ಮೂರು ಬಾರಿಯೂ ಸಚಿವರಾಗಿದ್ದರು.”ಪ್ರಥಮ ಚುನಾವಣೆಯಿಂದ ಈಗಿನ ಚುನಾವಣೆ ವರೆಗೆ ನೀವು ಗಮನಿಸಿರುವ ಮಹತ್ವದ ಬದಲಾವಣೆಗಳೇನು ?’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು- “ಮೌಲ್ಯಗಳ ಪತನವಾಗುತ್ತಿರುವುದನ್ನು ಕಂಡಾಗ ದುಃಖ ವಾಗುತ್ತದೆ. ಆರಂಭಿಕ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಪವಿತ್ರ ಎಂಬಷ್ಟು ಬದ್ಧತೆಯನ್ನು ಹೊಂದಿದ್ದವು. ಪ್ರಾಮಾಣಿಕತೆ, ಸತ್ಯಸಂಧತೆ, ಪಾರದರ್ಶಕತೆ ಚುನಾವಣೆಗೆ ಹಬ್ಬದ ಸ್ವರೂಪ ಕೊಡುತ್ತಿದ್ದವು. ಆದರೆ ಈ ರೀತಿಯ ವಾತಾರಣ ಮರೆಯಾಗುತ್ತಿರುವುದು ಬೇಸರದ ಸಂಗತಿ’.
ಅಂದ ಹಾಗೆ …
ಎಚ್.ಡಿ. ದೇವೇಗೌಡ ಅವರ ನೇತೃತ್ವದ ಜೆಡಿಎಸ್ ಪಕ್ಷವು ಈ ಬಾರಿಯೂ (2018)ಅಮರನಾಥ ಶೆಟ್ಟಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಇದು 11ನೇ ಸ್ಪರ್ಧೆಯ ಇನ್ನೊಂದು ದಾಖಲೆಯೂ ಆಗಬಹುದಿತ್ತು. ಆದರೆ, ಶೆಟ್ಟಿ ಅವರು ಈ ಬಾರಿ ಸ್ಪರ್ಧಿಸಲು ಮುಂದಾಗಲಿಲ್ಲ. ಹೊಸಬರಿಗೆ ಅವಕಾಶ, ಆರೋಗ್ಯ ಮುಂತಾದ ಕಾರಣಗಳನ್ನು ಅವರು ನೀಡಿದ್ದಾರೆ. ಆದರೆ ಪಕ್ಷದ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
– ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.