ಕ್ರೀಡೆಯಿಂದ ಆರೋಗ್ಯ ವೃದಿ ಸಾಧ್ಯ: ಶಕುಂತಳಾ ಟಿ. ಶೆಟ್ಟಿ
Team Udayavani, Nov 4, 2017, 4:26 PM IST
ಕೊಂಬೆಟ್ಟು: ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿದರೆ ಸಾಧನೆಯ ಜತೆಗೆ ಆರೋಗ್ಯ ಹಾಗೂ ಮಾನಸಿಕ ವೃದ್ಧಿ ಸಾಧ್ಯವಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಕಬಕ ಪ.ಪೂ.ಕಾಲೇಜು ಆಶ್ರಯದಲ್ಲಿ ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾ| ಮಟ್ಟದ ಪ.ಪೂ.ಕಾಲೇಜು ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡೆಯ ಆಸಕ್ತಿ ಅಗತ್ಯ
ಪ್ರತಿ ಸ್ಪರ್ಧೆಯಲ್ಲಿ ಸ್ಪರ್ಧೆಯ ಮನೋಭಾವನೆ ಇರುತ್ತದೆ. ಸೋಲು- ಗೆಲ್ಲುವುದಕ್ಕಿಂತಲೂ ಜೀವನಕ್ಕೆ ಪೂರಕ ವಾಗುವ ಅನೇಕ ವಿಚಾರಗಳು ಕ್ರೀಡೆಯಲ್ಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಜತೆಗೆ ಕ್ರೀಡೆಯಲ್ಲೂ ಸಾಧನೆ ತೋರಬೇಕು ಎಂದು ಅವರು ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಉದ್ಘಾಟಿಸಿ, ಮಾತನಾಡಿ ಕ್ರೀಡೆಯಲ್ಲಿ ಆಸಕ್ತಿ, ಏಕಾಗ್ರತೆ ಮಹತ್ವದಾಗಿದೆ. ಸತತ ಅಭ್ಯಾಸದಿಂದ ಕ್ರೀಡಾಪಟುವಿನಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆಟಗಾರ ಯೋಚನ ಶಕ್ತಿ, ಸಮಯ ಪ್ರಜ್ಞೆ ಮತ್ತು ಎದೆಗುಂದದೆ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಇದ್ದರೆ ಯಶಸ್ಸು ಪಡೆಯಬಹುದು.
ಗೆಲುವಿಗಿಂತ ಮೇಲು
ಸೋಲು ಮತ್ತು ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದು ಆಟಗಾರನಿಗೆ ತಿಳಿದಿರುವ ಸಂಗತಿ. ಪ್ರಾಮಾಣಿಕತೆಯಿಂದ ಆಡಿದರೆ ಸಿಗುವ ಗೌರವ, ಮನ್ನಣೆ, ಗೆಲುವಿಗಿಂತ ಮೇಲು ಎನ್ನುವುದನ್ನು ಪ್ರತಿಯೊಬ್ಬರು, ಮಾರ್ಗದರ್ಶನ ಸಿಕ್ಕಿದರೆ ಉತ್ತಮ ಕ್ರೀಡಾಪಟುಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಸರಿಯಾದ ಕ್ರೀಡಾಂಗಣ ವ್ಯವಸ್ಥೆಯ ಕ್ರೀಡಾ ಪ್ರತಿಭೆಗಳಿಗೆ ಸಿಗಬೇಕು. ಪುತ್ತೂರಿನ ಅಭಿವೃದ್ಧಿಯಲ್ಲಿ ತಾಲೂಕು ಕ್ರೀಡಾಂಗಣವೂ ಸೇರಿಕೊಂಡಿದೆ. ಉತ್ತಮ ಕ್ರೀಡಾಂಗಣ ದೊರಕಿದರೆ ಅದರಿಂದ ಕ್ರೀಡಾಪಟುವಿಗೆ ಯಶಸ್ಸು ದೊರೆಯಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾ| ದೈಹಿಕ ಶಿಕ್ಷಣ ಪರಿವೀಕ್ಷಾಣ ಅಧಿಕಾರಿ ಸುಂದರ ಗೌಡ, ಕಬಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ ಎಂ. ಉಪಸ್ಥಿತರಿದ್ದರು. ಕಬಕ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿಧಿ, ರಂಸೀನಾ, ಸುಮಯ್ನಾ ಪ್ರಾರ್ಥಿಸಿದರು. ಧರ್ಣಪ್ಪ ಗೌಡ ಸ್ವಾಗತಿಸಿ, ವೆಂಕಟರಮಣ ಭಟ್ ವಂದಿಸಿದರು. ಉಪನ್ಯಾಸಕ ಗೋಪಾಲ ಗೌಡ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ
Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.