ಆರೋಗ್ಯವರ್ಧಕ ಎಕ್ಕ
Team Udayavani, May 15, 2018, 3:37 PM IST
ಎಕ್ಕವನ್ನು ಅರ್ಕವೆಂದೇ ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಎಕ್ಕ ಎನ್ನಲಾಗುತ್ತದೆ. ಅರ್ಕ ಎಂದರೆ ಪೂಜನೀಯವೆಂದರ್ಥ. ಹಿಂದೂ ಸಂಸ್ಕೃತಿ ಪ್ರಕಾರ ಕೆಲವು ಮರ ಗಿಡಗಳಿಗೆ ಪವಿತ್ರ ಸ್ಥಾನವಿದೆ. ಈ ಎಕ್ಕ ಗಿಡಕ್ಕೆ ದೇವ ವೃಕ್ಷ ಎಂಬ ಭಾವನೆ ಇರುವುದರಿಂದ ಭಾರತದಲ್ಲಿ ಇದನ್ನು ಪೂಜಿಸಲಾಗುತ್ತದೆ.
ಎಕ್ಕದಲ್ಲಿ ಎರಡು ವಿಧ ಬಿಳಿ ಹಾಗೂ ನೇರಳೆ ಎಕ್ಕ. ಬಿಳಿ ಎಕ್ಕ ಬಹಳ ಶ್ರೇಷ್ಠವೆಂದು ಪ್ರತೀತಿ. ದೇವರ ಪೂಜೆಗೆ ಶ್ರೇಷ್ಠವಾದ ಈ ಎಕ್ಕದ ಗಿಡದ ಬೇರು, ತೊಗಟೆ, ಎಲೆ, ಹೂ ಅನ್ನು ಔಷಧಗಳಿಗೂ ಬಳಸಲಾಗುತ್ತದೆ. ಅಪಾರ ಔಷಧೀಯ ಗುಣವಿರುವ ಎಕ್ಕದಿಂದ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.
ಪ್ರಯೋಜನಗಳು
· ಕೀಲು ನೋವಿಗೆ ರಾಮಬಾಣ ಎಕ್ಕದ ಗಿಡದ ಎಲೆಗಳನ್ನು ಕೆಂಡದ ಮೇಲೆ ತಾಗಿಸಿ ನೋವು ಇರುವ ಕಡೆ ಶಾಖ ಕೊಟ್ಟರೆ ಸ್ವಲ್ಪ ದಿನಗಳಲ್ಲಿ ಕೀಲು ನೋವು ಗುಣಮುಖವಾಗುತ್ತದೆ.
· ಮೂಲವ್ಯಾದಿ ನಿವಾರಣೆ.
.ಮೂಲವ್ಯಾಧಿಯಿಂದ ಬಳಲುತ್ತಿರುವವರು ಎಕ್ಕದ ಗಿಡದ ಹಾಲಿಗೆ ಸ್ವಲ್ಪ ಅರಿಸಿನ ಬೆರೆಸಿ ಹಚ್ಚಿದರೆ ಬೇಗ ಗುಣವಾಗುತ್ತದೆ.
· ಹಲ್ಲು ನೋವಿನ ನಿವಾರಣೆ.
. ಎಕ್ಕದ ಗಿಡದ ಕಾಂಡವನ್ನು ಹಲ್ಲುಜ್ಜಲು ಬಳಸಿದರೆ ಹಲ್ಲುನೋವು ಬಹುಬೇಗ ಮಾಯವಾಗುತ್ತದೆ.
· ಗಾಯವನ್ನು ವಾಸಿ ಮಾಡುತ್ತದೆ.
. ಚರ್ಮದ ಮೇಲೆ ಆಗಿರುವ ಸಣ್ಣ ಪುಟ್ಟ ಗಾಯಗಳಿಗೆ ಎಕ್ಕದ ಗಿಡದ ಹಾಲನ್ನು ಹಚ್ಚಿದರೆ ಗಾಯವು ಬಹುಬೇಗ ವಾಸಿಯಾಗುತ್ತದ.
· ಚೇಳು ಕಚ್ಚಿದರೆ ಔಷಧ
.ಚೇಳು ಕಚ್ಚಿದಾಗ ಔಷಧ ಮಾಡಲು ಎಕ್ಕದ ಗಿಡದ ಎಲೆ ಮತ್ತು ಹಾಲನ್ನು ಬಳಸಲಾಗುತ್ತದೆ.
· ಕಾಲಾರಕ್ಕೆ ಔಷಧ.
ಎಕ್ಕದ ಬೇರಿನ ತೊಗಟೆ ಮತ್ತು ಮೆಣಸಿನ ಕಾಳು ಸಮತೂಕ ನುಣ್ಣಗೆ ಚೂರ್ಣ ಮಾಡಿ, ಹಸುರು ಶುಂಠಿ ರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸಿ ಪ್ರತಿ ಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸಿದರೆ ಕಾಲಾರ ನಿವಾರಣೆಯಾಗುವುದು. ಬಹುಬೇಗ ವಾಸಿಯಾಗುತ್ತದೆ .
ಚುಚ್ಚಿದ ಮುಳ್ಳು ತೆಗೆಯುತ್ತದೆ
ಕಾಲಿಗೆ ಮುಳ್ಳು ಚುಚ್ಚಿಕೊಂಡಾಗ ಎಕ್ಕದ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬಂದು ತೆಗೆಯಲು ಸುಲಭವಾಗುತ್ತದೆ. ಎಕ್ಕದ ಗಿಡದಲ್ಲಿರುವ ಹಾಲಿನಂತಹ ದ್ರವ ಕಣ್ಣಿಗೆ ಬಿದ್ದರೆ ಕಣ್ಣು ಹಾನಿಯಾಗುವುದು ಎಂಬ ನಂಬಿಕೆ ಇದೆ. ಹೀಗಾಗಿ ಇದನ್ನು ಬಳಸುವಾಗ ಹೆಚ್ಚು ಎಚ್ಚರಿಕೆಯಿಂದ ಇರುವುದು ಉತ್ತಮ.
ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.