ಮಂಗಳೂರು, ಉಳ್ಳಾಲದ 9 ಕಡೆ ಹೆಲ್ತ್ ಕಿಯೋಸ್ಕ್
Team Udayavani, Mar 11, 2018, 6:15 AM IST
ಮಂಗಳೂರು: ಮಂಗಳೂರು ಪಾಲಿಕೆ ಹಾಗೂ ಉಳ್ಳಾಲ ನಗರಸಭಾ ವ್ಯಾಪ್ತಿಯ ಒಟ್ಟು 9 ಕಡೆಗಳಲ್ಲಿ ತಲಾ 4.5 ಲಕ್ಷ ರೂ. ವೆಚ್ಚದಲ್ಲಿ ಹೆಲ್ತ್ ಕಿಯೋಸ್ಕ್ ಅನುಷ್ಠಾನಗೊಳ್ಳುತ್ತಿದ್ದು, ವಾರದೊಳಗೆ ಎಲ್ಲ ಕಿಯೋಸ್ಕ್ಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಿಸಲಿವೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಶನಿವಾರ ನಗರದ ಸಕೀìಟ್ ಹೌಸ್ ಬಳಿ ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳ್ಳುವ ಹೆಲ್ತ್ ಕಿಯೋಸ್ಕ್ ಕುರಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಲಾಮ್ ನಬೀ ಆಜಾದ್ ಅವರು ಕೇಂದ್ರ ಆರೋಗ್ಯ ಸಚಿವರಾಗಿದ್ದ ವೇಳೆ ಎನ್‌ಎಚ್‌ಎಂ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಮಂಗಳೂರಿನ 10 ಕಡೆಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿತ್ತು. ಬಳಿಕ ಇದೇ ಎನ್‌ಎಚ್‌ಎಂ ಯೋಜನೆಯಲ್ಲಿ ಕೊಳೆಗೇರಿ ಪ್ರದೇಶ, ಜನನಿಬಿಡ ಪ್ರದೇಶದಲ್ಲಿ ಹೆಲ್ತ್ ಕಿಯೋಸ್ಕನ್ನು ತೆರೆಯುವ ಯೋಜನೆ ಹಾಕಿಕೊಳ್ಳಲಾಗಿತ್ತು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಇದೇ ರೀತಿಯ ಕೇಂದ್ರಗಳು ಆರಂಭಗೊಂಡಿವೆ. ಮಂಗಳೂರಿನಲ್ಲಿ ಡಿಎಚ್‌ಒ ತಂಡ ಪೂರ್ಣ ಪ್ರಮಾಣದ ಹೆಲ್ತ್ ಕಿಯೋಸ್ಕನ್ನು ತೆರೆಯಲು ಸಾಕಷ್ಟು ಪ್ರಯತ್ನ ಪಟ್ಟಿದೆ ಎಂದರು.
ಎಲ್ಲೆಲ್ಲಿ ?
ಪ್ರಸ್ತುತ ಮನಪಾ ವ್ಯಾಪ್ತಿಯ ಜಪ್ಪಿನಮೊಗರು, ಸರಿಪಳ್ಳ, ಕುದ್ರೋಳಿ, ಮೀನಕಳಿಯ, ಕೃಷ್ಣಾಪುರ ಹಾಗೂ ಉಳ್ಳಾಲದ ತೊಕ್ಕೊಟ್ಟು ಬಸ್ ನಿಲ್ದಾಣ, ಒಳಪೇಟೆಯ ಅಂಬೇಡ್ಕರ್ ಭವನದ ಬಳಿ, ಕೋಟೆಪುರ ಹಾಗೂ ಚೆಂಬುಗುಡ್ಡೆ ಪ್ರದೇಶದಲ್ಲಿ ಹೆಲ್ತ್ ಕಿಯೋಸ್ಕ್ ತೆರೆಯಲು ನಿರ್ಧರಿಸಲಾಗಿದೆ. ಪ್ರಸ್ತುತ ಸ್ಥಳೀಯಾಡಳಿತದಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡಿ, ವಾರದೊಳಗೆ ಕಿಯೋಸ್ಕ್ ಆರಂಭಗೊಳ್ಳಲಿದೆ ಎಂದರು.
ಮೀನುಗಾರರು, ರಿಕ್ಷಾ ಚಾಲಕರು ಹೀಗೆ ಎಲ್ಲ ವಿಧದ ಕಾರ್ಮಿಕ ವರ್ಗಕ್ಕೂ ಅನುಕೂಲವಾಗುವ ರೀತಿಯಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ನಿಮಿಷ ಕೇಂದ್ರಕ್ಕೆ ಬಂದು ತಮ್ಮ ಆರೋಗ್ಯ ಪರೀಕ್ಷೆ ಮಾಡಲು ಅನುಕೂಲವಾಗಲಿದೆ. ಡಿಎಚ್‌ಒ ನೇತೃತ್ವದಲ್ಲಿ ಇದು ಕಾರ್ಯನಿರ್ವಹಿಸಲಿದ್ದು, ನರ್ಸ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ಕೇಂದ್ರದಲ್ಲಿರುತ್ತಾರೆ.
ಜತೆಗೆ ಮೆಡಿಕಲ್ ಕಾಲೇಜುಗಳ ವೈದ್ಯರೂ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. 15 ದಿನಕ್ಕೊಮ್ಮೆ ವೈದ್ಯರು ಭೇಟಿ ನೀಡುವ ಕುರಿತು ಕೂಡ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಬೋರ್ಡ್ ಹಾಕಿ ಜನರಿಗೆ ಮಾಹಿತಿ ನೀಡಲಾಗುತ್ತದೆ. ಪ್ರಸ್ತುತ ಕೇಂದ್ರದ ಸಮಯ ಮಧ್ಯಾಹ್ನ 2.30ರಿಂದ 4.30ರ ವರೆಗೆ ನಿಗದಿ ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಯ ಬದಲಾಯಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮೇಯರ್ ಭಾಸ್ಕರ್ ಕೆ, ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಉಳ್ಳಾಲ ನಗರಸಭಾಧ್ಯಕ್ಷ ಕೆ. ಹುಸೈನ್, ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಡಿಎಚ್‌ಒ ಡಾ| ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಹೆಲ್ತ್ ಕಿಯೋಸ್ಕ್ ಕಾರ್ಯಗಳೇನು?
ಪ್ರಸವಪೂರ್ವ ಮತ್ತು ಪ್ರಸವದ ಅನಂತರದ ಸೇವೆ, ಚುಚ್ಚುಮದ್ದು ಸೇವೆ, ಐಯುಸಿಡಿ ಅಳವಡಿಕೆ, ನಿಶ್ಚಯ್ ಕಿಟ್ ಮೂಲಕ ಗರ್ಭಿಣಿ ಎಂದು ಗುರುತಿಸುವುದು, ರಕ್ತಹೀನತೆ ಮತ್ತು ಅಪೌಷ್ಟಿಕತೆಯ ಪತ್ತೆಹಚ್ಚುವಿಕೆ, ಅಸಾಂಕ್ರಾಮಿಕ ರೋಗಗಳಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಪತ್ತೆಹಚ್ಚುವಿಕೆ, ಕ್ಷಯರೋಗ ಪತ್ತೆಗೆ ಕಫ ಸಂಗ್ರಹಣೆ, ಮಲೇರಿಯಾ ಪತ್ತೆಗೆ ರಕ್ತಲೇಪನದ ಸಂಗ್ರಹ, ಮೂತ್ರ ಪರೀಕ್ಷೆ, ವಿವಿಧ ಆರೋಗ್ಯ ಯೋಜನೆಗಳ ಮಾಹಿತಿ ಹೆಲ್ತ್ ಕಿಯೋಸ್ಕ್ನಲ್ಲಿ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.