ಇಂದಿನಿಂದ ಮತ್ತೆ ಟೋಲ್‌ ಬಿಸಿ


Team Udayavani, Apr 1, 2019, 6:30 AM IST

toll

ಮಂಗಳೂರು/ ಕೋಟ: ಹೊಸ ಆರ್ಥಿಕ ವರ್ಷಾರಂಭದ ಜತೆಗೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೆದ್ದಾರಿ ಬಳಕೆದಾರರಿಗೆ ಸುಂಕ ಏರಿಕೆಯ ಬಿಸಿ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಐದು ಟೋಲ್‌ಪ್ಲಾಜಾಗಳಲ್ಲೂ ಎ. 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ದ.ಕ. ಜಿಲ್ಲೆಯ ಬ್ರಹ್ಮರ ಕೂಟ್ಲು ಹಾಗೂ ಸುರತ್ಕಲ್‌ ಎನ್‌ಐಟಿಕೆ ಟೋಲ್‌ ಪ್ಲಾಜಾಗಳು ನೇರವಾಗಿ ಎನ್‌ಎಚ್‌ಎಐ ವ್ಯಾಪ್ತಿಗೆ ಬರುತ್ತವೆ. ದ.ಕ. ಹಾಗೂ ಕೇರಳ ಗಡಿಭಾಗದ ತಲಪಾಡಿ ಹಾಗೂ ಉಡುಪಿ ಜಿಲ್ಲೆಯ ಗುಂಡ್ಮಿ ಮತ್ತು ಹೆಜಮಾಡಿಯ ಟೋಲ್‌ ಪ್ಲಾಜಾಗಳು ನವಯುಗ ಉಡುಪಿ ಟೋಲ್‌ವೇ ಪ್ರೈ.ಲಿ. ವ್ಯಾಪ್ತಿಗೆ ಬರುತ್ತವೆ.

ಸುರತ್ಕಲ್‌ ಎನ್‌ಐಟಿಕೆ ಟೋಲ್‌
ಸುರತ್ಕಲ್‌ ಟೋಲ್‌ ಪ್ಲಾಜಾದಲ್ಲಿ ಲಘು ವಾಹನದ ಏಕಮುಖ ಸಂಚಾರದ ಶುಲ್ಕ ಹಿಂದಿನಂತೆಯೇ 50 ರೂ. ಇದ್ದರೆ, ಅದೇ ದಿನ ಮರಳಿ ಬರುವ ಶುಲ್ಕ 5 ರೂ. ಹೆಚ್ಚಳವಾಗಿ 80 ರೂ. (ಹಾಲಿ ದರ 75) ರೂ.ಗೆ ಏರಿಕೆಯಾಗಲಿದೆ. ತಿಂಗಳ ಪಾಸ್‌ ಶುಲ್ಕ 1,670 ರೂ.ಗಳ ಬದಲು 1,740 ರೂ.ಗೆ ಏರಿಕೆಯಾಗಲಿದೆ. ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿ ನಂತೆ 25 ರೂ. ಇರುತ್ತದೆ. ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರ ದರ 85 ರೂ. (ಹಾಲಿ 80 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ 120 ರೂ.ಗಳ ಬದಲು 125 ರೂ. ಆಗಲಿದೆ. ಮಾಸಿಕ ಶುಲ್ಕ 2,695 ರೂ.ಗಳ ಬದಲು 2810 ರೂ.ಗೆ ಏರಿಕೆಯಾಗಲಿದೆ. ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ಹಿಂದಿನಂತೆ 40 ರೂ. ಇರುತ್ತದೆ.

ಬಸ್‌, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 175 ರೂ. (ಹಾಲಿ170 ರೂ.) ಪಾವತಿಸಬೇಕು. ಅದೇ ದಿನ ಮರಳಿ ಬರುವುದಿ ದ್ದರೆ 265 ರೂ. (255 ರೂ.), ಮಾಸಿಕ ಪಾಸ್‌ಗೆ 5,885 ರೂ (5,650 ರೂ.,) ಜಿಲ್ಲೆಯಲ್ಲಿ ನೋಂದಾಯಿತ ವಾಹನಗಳಿಗೆ ಶುಲ್ಕ 95 ರೂ. (85 ರೂ.)ಗಳಿಗೆ ಏರಿಕೆಯಾಗಲಿದೆ.

ಟೋಲ್‌ಪ್ಲಾಜಾ ದಿಂದ 20 ಕಿ.ಮೀ. ವಿಸ್ತೀರ್ಣ ದೊಳಗಿನ ಎಲ್ಲ ವಾಣಿಜ್ಯೇತರ ವಾಹನ ಗಳಿಗೆ 265 ರೂ. (ಹಾಲಿ 255ರೂ.)ಗಳ ತಿಂಗಳ ಪಾಸ್‌ ಪಡೆಯಬೇಕಿದೆ.

ಬ್ರಹ್ಮರಕೂಟ್ಲು ಟೋಲ್‌
ಲಘು ವಾಹನ ಗಳ ಏಕಮುಖ ಸಂಚಾರದ ಶುಲ್ಕ ಹಿಂದಿ ನಂತೆ 25 ರೂ., ಅದೇ ದಿನ ಮರಳಿ ಬರುವ ಶುಲ್ಕ 40 ರೂ.ಗೆ (ಹಾಲಿ 35 ರೂ.) ಏರಿಕೆಯಾಗಿದೆ. ತಿಂಗಳ ಪಾಸ್‌ ಶುಲ್ಕ 835 ರೂ.ಗೆ (800 ರೂ.) ಏರಿಕೆಯಾದರೆ, ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿನಂತೆ 10 ರೂ. ಇರುವುದು 15 ರೂ. ಆಗಲಿದೆ. ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ ಹಿಂದಿನಂತೆ 40 ರೂ. ಇರಲಿದ್ದು, ಅದೇ ದಿನ ಮರಳಿ ಬರುವ ದರದಲ್ಲೂ (60 ರೂ.) ಬದಲಾವಣೆ ಇಲ್ಲ. ಮಾಸಿಕ ಶುಲ್ಕ 1,295 ರೂ. ಇರುವುದು 1,350 ರೂ.ಗೆ ಏರಿಕೆಯಾಗಲಿದೆ. ಸ್ಥಳೀಯ ವಾಣಿಜ್ಯ ವಾಹನ ಶುಲ್ಕ ಹಿಂದಿನಂತೆ 20 ರೂ. ಇರುತ್ತದೆ. ಬಸ್‌, ಟ್ರಕ್‌ಗಳ ಏಕಮುಖ ಸಂಚಾರಕ್ಕೆ ಶುಲ್ಕ 80 ರೂ. ಇರುವುದು 85 ರೂ.ಗೆ, ಅದೇ ದಿನ ಮರಳಿ ಬರುವುದಕ್ಕೆ 120 ರೂ.ಗಳಿಂದ 125 ರೂ.ಗೆ ಏರಿಸಲಾಗಿದೆ. ಮಾಸಿಕ ಪಾಸ್‌ 2,710 ರೂ.  ಇದ್ದದ್ದು 2,825ಕ್ಕೆ ಏರಿದೆ. ಜಿಲ್ಲೆಯ ನೋಂದಣಿ ವಾಹನಕ್ಕೆ ಹಿಂದಿ  ನಂತೆಯೇ 40 ರೂ. ಇರುತ್ತದೆ.

ನವಯುಗದ 3 ಟೋಲ್‌ಗ‌ಳು
ನವಯುಗ ಟೋಲ್‌ಗ‌ಳಲ್ಲಿ ಏಕ ಮುಖ ಸಂಚಾರದ ಕಾರು ಜೀಪು ಅಥವಾ ಲಘು ವಾಹನ ಗಳಿಗೆ ಗುಂಡ್ಮಿಯಲ್ಲಿ 40 ರೂ. ಇರುವುದು 45 ರೂ.ಗೆ ಏರಿಕೆಯಾದರೆ, ಹಾಲಿ ದರದಂತೆ ತಲಪಾಡಿ (40 ರೂ.) ಹಾಗೂ ಹೆಜಮಾಡಿಯಲ್ಲಿ (35 ರೂ.)ದರ ಏರಿಕೆ ಇಲ್ಲ. ಅದೇ ದಿನ ಮರಳಿ ಬರುವುದಕ್ಕೆ ಗುಂಡ್ಮಿಯಲ್ಲಿ 65 ರೂ.ಗಳೇ ಇದ್ದು, ಹೆಜಮಾಡಿಯಲ್ಲಿ 55 ರೂ. (ಹಾಲಿ 50 ರೂ.) ಹಾಗೂ ತಲಪಾಡಿಯಲ್ಲಿ 60 ರೂ (ಹಾಲಿ 55 ರೂ.) ಆಗಲಿದೆ. ಮಾಸಿಕ ಪಾಸ್‌ನಲ್ಲಿ ಬದಲಾವಣೆಯಾಗಿದ್ದು ಗುಂಡ್ಮಿಯಲ್ಲಿ 1,450 ರೂ (ಹಾಲಿ 1,395 ರೂ.), ಹೆಜಮಾಡಿಯಲ್ಲಿ 1,195 ರೂ. (ಹಾಲಿ 1,145 ರೂ.) ಹಾಗೂ ತಲಪಾಡಿಯಲ್ಲಿ 1,305 ರೂ.ಗೆ (ಹಾಲಿ 1,255 ರೂ) ಏರಿಕೆಯಾಗಿದೆ.

ಲಘು ವಾಣಿಜ್ಯ, ಸರಕು ವಾಹನ ಹಾಗೂ ಮಿನಿ ಬಸ್‌ಗಳಿಗೆ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ ಕ್ರಮವಾಗಿ ಏಕಮುಖ ಸಂಚಾರಕ್ಕೆ ಹಾಲಿ ದರದಂತೆ 70 ರೂ., 60 ರೂ. (ಹಾಲಿ 55 ರೂ.) ಹಾಗೂ ಹಾಲಿ ದರದಂತೆ 60 ರೂ. ಇರಲಿದೆ. ಅದೇ ದಿನ ಮರಳಿ ಬರುವುದಕ್ಕೆ 105 ರೂ., (ಹಾಲಿ 100 ರೂ), ಹಾಲಿ ದರದಂತೆ 85 ರೂ., ಹಾಗೂ 85 ರೂ. ಇರುವುದು 90 ರೂ.ಗೆ ಏರಿಕೆಯಾಗಲಿದೆ. ಮಾಸಿಕ ಶುಲ್ಕ 2,345 ರೂ (ಹಾಲಿ 2,250 ರೂ.), 1,930 ರೂ. (ಹಾಲಿ 1,850 ರೂ.), ಹಾಗೂ 2,015 ರೂ. (ಹಾಲಿ 1,935ರೂ.) ಆಗಿರುತ್ತದೆ. ಜತೆಗೆ ಬಸ್‌ ಮತ್ತು ಟ್ರಕ್‌ಗಳಿಗೆ ಕ್ರಮವಾಗಿ ಏಕಮುಖ ಸಂಚಾರಕ್ಕೆ 140 ರೂ. ಇರುವುದು 145 ರೂ.ಗೆ, 115 ರೂ. ಇರುವುದು 120 ರೂ.ಗೆ, 120ರೂ. ಇರುವುದು 125 ರೂ.ಗೆ ಏರಿಕೆಯಾಗಲಿದೆ. ಅದೇ ದಿನ ಮರಳಿ ಬರುವುದಕ್ಕೆ 210 ರೂ. ಇರುವುದು 220 ರೂ., 175 ರೂ. ಇರುವುದು 180 ರೂ. ಹಾಗೂ 175 ರೂ. ಇರುವುದು 185 ರೂ.ಗೆ ಏರಿಕೆಯಾಗಲಿದೆ. ಮಾಸಿಕ ಶುಲ್ಕವೂ ಮೂರೂ ಟೋಲ್‌ಗ‌ಳಲ್ಲಿ ಕ್ರಮವಾಗಿ 4,910 ರೂ. (ಹಾಲಿ 4,715 ರೂ), 4,040 ರೂ. (ಹಾಲಿ 3,880 ರೂ.) ಹಾಗೂ 4,100 ರೂ.ಗೆ (ಹಾಲಿ 3,935 ರೂ.) ಏರಿಕೆಯಾಗಿದೆ.

ಮೂರೂ ಟೋಲ್‌ ಪ್ಲಾಜಾಗಳಿಂದ 20 ಕಿ.ಮೀ. ಅಂತರದಲ್ಲಿ ವಾಸಿಸುವವರ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಪ್ರತಿ ಟೋಲ್‌ ಪ್ಲಾಜಾಕ್ಕೆ ಮಾಸಿಕ ಪಾಸ್‌ ದರ 255 ರೂ. ಇರುವುದು 265 ರೂ.ಗೆ ಏರಿದೆ.

ಟಾಪ್ ನ್ಯೂಸ್

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವುMangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.