ಕೂಳೂರು ಹಳೆ ಸೇತುವೆ: ಘನ ವಾಹನ ನಿಷೇಧ
Team Udayavani, Jun 5, 2019, 6:10 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರಿನ ಹಳೆಯ ಕಮಾನು ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ತಜ್ಞರ ವರದಿಯ ಆಧಾರದಲ್ಲಿ ಘನ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ಮಂಗಳವಾರ ಆದೇಶಿಸಿದೆ.
ಹೊಸ ಸೇತುವೆ ನಿರ್ಮಾಣ ಶೀಘ್ರ ಆರಂಭವಾಗ ಲಿದೆ. ಅದು ಪೂರ್ಣವಾಗುವವರೆಗೆ ತಾತ್ಕಾಲಿಕವಾಗಿ ಹಳೆ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಪರ್ಯಾಯ ಮಾರ್ಗ ಮತ್ತು ವ್ಯವಸ್ಥೆಗಳ ಹಿನ್ನೆಲೆಯಲ್ಲಿ ವಾರದೊಳಗೆ ವಾಹನ ಸಂಚಾರ ಸ್ಥಗಿತ ಆದೇಶ ಪಾಲಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಲೆಟ್ ಟ್ಯಾಂಕರ್; ಪರ್ಯಾಯ ಮಾರ್ಗ
ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬರುವ ಬುಲೆಟ್ ಟ್ಯಾಂಕರ್‌ಗಳು ಪಡುಬಿದ್ರಿ, ಕಾರ್ಕಳ- ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸಬೇಕಿದೆ. ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿಯಿಂದ ಕಾವೂರು- ಬಜಪೆ- ಕಾನ- ಸುರತ್ಕಲ್ ಮೂಲಕ ಸಂಚರಿಸಬೇಕು.
ಹೊಸ ಸೇತುವೆಯಲ್ಲಿ ಬಸ್-ಲಾರಿ
ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಹಳೆ ಸೇತುವೆಯಲ್ಲಿ ಲಾರಿ, ಬಸ್, ಟ್ಯಾಂಕರ್‌ಗಳಿಗೆ ಪ್ರವೇಶವಿಲ್ಲ. ಕೂಳೂರು ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.
ಹಳೆ ಸೇತುವೆಯಲ್ಲಿಲಘು ವಾಹನ
ಹಳೆ ಸೇತುವೆಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಾರು, ಜೀಪು, ಟೆಂಪೊ, ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖ ಸಂಚರಿಸಲು ಅವಕಾಶ ನೀಡಲಾಗಿದೆ. ಇತರ ವಾಹನಗಳಿಗೆ ಸಮೀಪದ ಮತ್ತೂಂದು ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ಈ ಭಾಗದಲ್ಲಿ ಸಂಚಾರ ಸಮಸ್ಯೆ ಎದುರಾಗುವ ಸಾಧ್ಯತೆ ಅಧಿಕ.
ಹಳೆಯ ಸೇತುವೆ; ಸಂಚಾರಕ್ಕೆ ಅಯೋಗ್ಯ
ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೈದರಾಬಾದ್‌ನ ‘ಮೆಸರ್ಸ್ ಆರ್ವಿ ಅಸೋಸಿ ಯೇಟ್ಸ್’ ಎಂಬ ಏಜೆನ್ಸಿ ನೇಮಕ ಮಾಡಿ ಹಳೆಯ ಸೇತುವೆಯ ತಪಾಸಣೆ, ದಾಖಲೆ ಮತ್ತು ಮಾದರಿ ಪರಿಶೀಲಿಸಿ ಸಂಚಾರಕ್ಕೆ ಅಯೋಗ್ಯ ಎಂದು ರಾ.ಹೆ. ಪ್ರಾಧಿಕಾರಕ್ಕೆ ವರದಿ ನೀಡಿತ್ತು. ಬಳಿಕ ಭಾರತ್‌ಮಾಲಾ ಯೋಜನೆ ಬಗ್ಗೆ ಸರ್ವೆ ನಡೆಸುತ್ತಿರುವ ತಜ್ಞರ ತಂಡ ಕೂಡ ಪೂರಕ ವರದಿ ನೀಡಿತ್ತು. ಹೀಗಾಗಿ ಇದರಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕು ಎಂದು ರಾ.ಹೆ. ಪ್ರಾಧಿಕಾರವು ಜಿಲ್ಲಾಡಳಿತಕ್ಕೆ ಕಳೆದ ಸೆ.27ರಂದು ವರದಿ ನೀಡಿತ್ತು. ಈ ಬಗ್ಗೆ ಸೆ.29ರಂದು ‘ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.