ಕರಪತ್ರದೊಂದಿಗೆ ಕರ ವಸ್ತ್ರವೂ ಬೇಕು!
ಬಿಸಿಲ ಬೇಗೆಗೆ ಪಕ್ಷಗಳ ಕಾರ್ಯಕರ್ತರು ಹೈರಾಣು
Team Udayavani, Apr 10, 2019, 6:00 AM IST
ಸವಣೂರು: ಈ ಬಾರಿಯ ಬಿಸಿಲಿನ ತೀವ್ರತೆ ಈ ಹಿಂದಿಗಿಂತಲೂ ಹೆಚ್ಚಿದೆ. ಜತೆಗೆ ಲೋಕಸಭಾ ಚುನಾವಣೆಯ ದಿನ ಸಮೀಪಿಸುತ್ತಿರುವುದರಿಂದ ಚುನಾವಣೆಯ ಕಾವು ತುಸು ಬಿರುಸಾಗಿದೆ.
ಕಳೆದ ಬಾರಿ ವಿಧಾನ ಸಭಾ ಚುನಾವಣೆಯೂ ಬೇಸಗೆಯಲ್ಲೇ ಬಂದಿತ್ತು. ಆದರೆ ಕಳೆದ ಬಾರಿಯ ಬಿಸಿಲಿಗಿಂತಲೂ ಈ ಬಾರಿ ಬಿಸಿಲಿನ ಝಳ ಹೆಚ್ಚಿದೆ. ಎಲ್ಲ ಪಕ್ಷದ ಕಾರ್ಯಕರ್ತರು ಹೆಚ್ಚಾಗಿ ಬೆಳಗ್ಗೆ 7ರಿಂದ 11ರ ತನಕ ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಸಂಜೆ 5ರ ಬಳಿಕ ರಾತ್ರಿಯವರೆಗೂ ಮನೆ ಮನೆ ಭೇಟಿ ನಡೆಸುತ್ತಿದ್ದಾರೆ.
ಚುನಾವಣೆಯ ರಂಗೇರಲು ಬಿಸಿಲು ಅಡ್ಡಿಯಾಗಿದೆ. ಆದರೂ ಸಮಯ ಹೊಂದಾಣಿಕೆ ಮಾಡಿಕೊಂಡು ಎಲ್ಲ ಮತದಾರರನ್ನು ಭೇಟಿಯಾಗುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಕರಪತ್ರದ ಜತೆಗೆ ಕರವಸ್ತ್ರವೂ ಬೇಕಾಗಿದೆ. ಈ ಬಾರಿಯ ಚುನಾವಣೆ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಪ್ರಚಾರ ನಡೆಸುತ್ತಿರುವ ಕಾರ್ಯಕರ್ತರು ನೆತ್ತಿ ಸುಡುವಂತೆ ಸೂರ್ಯ ಚೆಲ್ಲುತ್ತಿರುವ ಬಿಸಿಲಿನ ಬಾಣಗಳಿಗೆ ತುತ್ತಾಗಿ ಅಕ್ಷರಶಃ ಬಸವಳಿಯುತ್ತಿದ್ದಾರೆ.
ಎಲ್ಲ ಪಕ್ಷಗಳ ಕಾಯಕರ್ತರೂ ಬಿಸಿಲಿಗೆ ವಿಪರೀತ ಬಳಲಿದ್ದಾರೆ. ಮಾತ್ರವಲ್ಲ, ಇದರಿಂದ ಪಾರಾಗಲು ಹಣ್ಣು, ಜೂಸ್, ಕ್ಯಾಪು, ಕೂಲಿಂಗ್ ಗ್ಲಾಸ್ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಈ ಸೂರ್ಯನ ಆಟ ರಾಜಕಾರಣಿಗಳ ಮಂಡೆಯನ್ನು ಬಿಸಿಯಲ್ಲಿ ಕುದಿಯುವಂತೆ ಮಾಡಿರುವುದು ನಿಜ. ಪ್ರಚಾರಕ್ಕೆ ಕರಪತ್ರದ ಜತೆ ಕರವಸ್ತ್ರ ಬೇಕೆ ಬೇಕು ಎನ್ನುವ ಸ್ಥಿತಿ ಎಲ್ಲರದ್ದಾಗಿದೆ.
“ಸನ್ ಸ್ಟ್ರೋಕ್’!
ಚುನಾವಣ ಆಯೋಗದ ನೀತಿ ಸಂಹಿತೆಯ ಸಂಕಟಕ್ಕಿಂತ ಹೆಚ್ಚಾಗಿ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಈ ಬಿಸಿಲಿನ ಸಮಸ್ಯೆ. ಈ ಬಿಸಿಲು ಸಾಕಷ್ಟು ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ “ಸನ್ ಸ್ಟ್ರೋಕ್’ ಹೊಡೆಸಿದೆ. ಹಲವರು ಕೆಂಡ ಕಾರುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನದ ಪ್ರಚಾರವನ್ನೇ ಕೈಬಿಟ್ಟಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರದ ಜತೆಯಲ್ಲೇ ಸೂರ್ಯನ ಕಿರಣಗಳ ಏರಿಳಿತವೂ ಈ ಚುನಾವಣೆಯಲ್ಲಿ ಪ್ರಾಮುಖ್ಯ ಪಡೆದುಕೊಂಡಿದೆ.
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.