ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ, ಹಲವೆಡೆ ಕೃಷಿ ಹಾನಿ, ಅಪಾರ ನಷ್ಟ
Team Udayavani, Apr 21, 2018, 9:25 AM IST
ಕಡಬ: ಪರಿಸರದಲ್ಲಿ ಗುರುವಾರ ಸಂಜೆ ಗಾಳಿ, ಗುಡುಗು, ಮಿಂಚಿನೊಂದಿಗೆ ಸುರಿದ ಭಾರೀ ಮಳೆಗೆ ಹಲವೆಡೆ ಕೃಷಿ, ಸೊತ್ತುಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಮರ್ದಾಳ ಪೇಟೆಯ ಜೈನ ಬಸದಿ ಸಮೀಪದ ತೆಂಗಿನಮರ ರಸ್ತೆಗೆ ಅಡ್ಡಲಾಗಿ ಮುರಿದುಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ತೆಂಗಿನ ಮರ ಮುರಿದು ಬೀಳುವ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜೀಪೊಂದು ಕೂದಲೆಳೆಯ ಅಂತರದಲ್ಲಿ ಮರದಡಿ ಸಿಲುಕುವುದರಿಂದ ಪಾರಾಗಿ ಸಂಭಾವ್ಯ ಅಪಾಯ ತಪ್ಪಿತು. ಮರ್ದಾಳದ ವಾಣಿಜ್ಯ ಕಟ್ಟಡದ ಮೆಲ್ಛಾವಣಿಯ ಸುಮಾರು 20ಕ್ಕೂ ಹೆಚ್ಚು ಸಿಮೆಂಟ್ ಶೀಟ್‌ಗಳು, ಹೊಟೇಲ್ ಕಟ್ಟಡದ ಛಾವಣಿಯ ಹೆಂಚುಗಳು ಗಾಳಿಯ ರಭಸಕ್ಕೆ ಹಾರಿ ಮುಖ್ಯರಸ್ತೆಗೆ ಬಿದ್ದು ಸಂಪೂರ್ಣ ನಾಶವಾಗಿದೆ. ಮರ್ದಾಳ ನಿವಾಸಿ ಸಂಜೀವ ಶೆಟ್ಟಿ ಅವರಿಗೆ ಸೇರಿದ ಅಡಿಕೆ ಶೇಖರಿ ಸಿಟ್ಟಿದ್ದ ಕೊಠಡಿಯ ಸಿಮೆಂಟ್ ಶೀಟ್ ಹಾರಿಹೋಗಿ ಮಳೆನೀರು ಒಳ ಬಂದು ಅಡಿಕೆ ಒದ್ದೆಯಾಗಿ ನಷ್ಟ ಸಂಭವಿಸಿದೆ. ಕಡಬ-ಪಂಜ ರಸ್ತೆಯ ಕೋಡಿಂಬಾಳ, ಓಂತ್ರಡ್ಕ, ವಿದ್ಯಾನಗರ ಮುಂತಾದೆಡೆ ರಸ್ತೆಗಡ್ಡವಾಗಿ ರಸ್ತೆ ಪಕ್ಕದ ಮರದ ಕೊಂಬೆಗಳು ಮುರಿದುಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಕೋಡಿಂಬಾಳ ಪರಿಸರದ ಪಾದೆ, ಪಟ್ನ, ದೊಡ್ಡಕೊಪ್ಪ ಪ್ರದೇಶಗಳಲ್ಲಿ ರಬ್ಬರ್ ಮರಗಳು, ಅಡಿಕೆ ಮರಗಳು ಹಾಗೂ ತೆಂಗಿನ ಮರಗಳು ಗಾಳಿಗೆ ಮುರಿದು ಬಿದ್ದಿವೆ. ಹಲವೆಡೆ ಮರದ ಕೊಂಬೆಗಳು ವಿದ್ಯುತ್ ಲೈನ್‌ಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಲೈನ್‌ಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.