ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ
Team Udayavani, Oct 17, 2021, 6:40 AM IST
ಮಂಗಳೂರು/ಉಡುಪಿ:ಕರಾವಳಿಯಾದ್ಯಂತ ಶನಿವಾರ ಅಪರಾಹ್ನ ಮತ್ತು ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ರಾತ್ರಿ ವೇಳೆಗೆ ಭಾರೀ ಮಳೆ ಸುರಿದಿದ್ದು, ವಿವಿಧ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.
ಸುಳ್ಯ, ಪುತ್ತೂರು ವಿಟ್ಲದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹಗಲು ಹೊತ್ತು ಮೋಡ ಕವಿದ ವಾತಾವರಣ ಇತ್ತು. ಉಡುಪಿ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಉಡುಪಿ, ಮಣಿಪಾಲ, ಕಾಪು, ಶಿರ್ವ, ಕಟಪಾಡಿ, ಕಲ್ಯಾಣಪುರ ಸಂತೆಕಟ್ಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆ ಬಂದಿದೆ. ನಗರದ ರಸ್ತೆಗಳಲ್ಲಿಯೂ ಭಾರೀ ಪ್ರಮಾಣ ದಲ್ಲಿ ನೀರು ಹರಿಯಿತು. ವಾರಾಂತ್ಯ ಮತ್ತು ಭಾರೀ ಮಳೆಯ ಕಾರಣ ಉಡುಪಿಯ ಕಲ್ಸಂಕ, ಕರಾವಳಿ ಜಂಕ್ಷನ್ ಮೊದಲಾದೆಡೆ ವಾಹನಗಳ ದಟ್ಟಣೆ ಹೆಚ್ಚಿಗೆ ಕಂಡುಬಂದು ಟ್ರಾಫಿಕ್ ಜಾಮ್ ಆಯಿತು. ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಯಿತು.
ಬಂಟ್ವಾಳ, ಧರ್ಮಸ್ಥಳ: ಹೆದ್ದಾರಿಯಲ್ಲಿ ನೀರು ಬಂಟ್ವಾಳ ತಾ| ಕೇಂದ್ರ ಬಿ.ಸಿ. ರೋಡು ಸೇರಿದಂತೆ ತಾಲೂಕಿನ ಹಲವೆಡೆ ಶನಿವಾರ ರಾತ್ರಿ ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕೈಕಂಬದಿಂದ ಫರಂಗಿಪೇಟೆ ವರೆಗೆ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಸುಗಮ ವಾಹನ ಅಡಚಣೆಯಾ ಯಿತು. ಧರ್ಮಸ್ಥಳ ಸ್ನಾನ ಘಟ್ಟ ದಿಂದ ಮುಂದೆ ಸಾಗುವಾಗ ಮಣ್ಣ ಪಳ್ಳದ ಕಿರು ಸೇತುವೆಯ ಮೇಲೆ ನೀರು ಹರಿದ ಕಾರಣ ಒಂದೂವರೆ ತಾಸಿಗೂ ಅಧಿಕ ಸಮಯ ರಸ್ತೆ ಸಂಚಾರಕ್ಕೆ ತಡೆಯಾಯಿತು.
ಅಂಗಡಿಗಳಿಗೆ ನೀರು
ರಾತ್ರಿ ವೇಳೆ ದಿಢೀರ್ ಮಳೆ ಬಂದ ಕಾರಣ ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕೊಟ್ಟಾರ, ಫೋರ್ತ್‌ಮೈಲ್ ಪ್ರದೇಶ ಗಳಲ್ಲಿ ಚರಂಡಿಯಲ್ಲಿ ನೀರು ತುಂಬಿ ಅಂಗಡಿಗಳಿಗೆ ನುಗ್ಗಿದೆ.
ಇದನ್ನೂ ಓದಿ:ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ
ಪಡೀಲ್ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಕೊಡಿಯಾಲಬೈಲ್ ಅಕ್ಕಪಕ್ಕದ ಕೆಲವು ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದೆ. ತಡರಾತ್ರಿ ವರೆಗೂ ಮಳೆ ಮುಂದುವರಿದಿತ್ತು.
ಮತ್ತಷ್ಟು ಮಳೆ ಸಂಭವ
ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ರವಿವಾರವೂ ಗುಡುಗು ಸಹಿತ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
3 ವಿಮಾನ ಇಳಿಯದೆ ವಾಪಸ್ ಬೆಂಗಳೂರಿಗೆ
ಮಂಗಳೂರಿಗೆ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9ರ ನಡುವೆ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ಆಗಮಿಸಿದ 3 ವಿಮಾನಗಳು ಮಳೆ ಕಾರಣ ಇಳಿಯಲಾಗದೆ ಬೆಂಗಳೂರಿಗೆ ವಾಪಸಾಗಿವೆ.
ಪರಿಸ್ಥಿತಿ ಯಥಾ ಸ್ಥಿತಿಗೆ ಮರಳಿದರೆ ತಡರಾತ್ರಿ ಈ ವಿಮಾನಗಳು ಮಂಗಳೂರಿಗೆ ಹಿಂದಿರುಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ರವಿವಾರ ಬರಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಶಾರದೆ ವಿಸರ್ಜನೆಗೂ ಸಮಸ್ಯೆ
ಮಂಗಳೂರು ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಸಂತ ಮಂಟಪದಲ್ಲಿ 99ನೇ ವರ್ಷದ ಶಾರದ ಮಹೋತ್ಸವದಲ್ಲಿ ಪೂಜಿಸಿದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಶನಿವಾರ ರಾತ್ರಿ ಜರಗಿತು. ಭಾರೀ ಮಳೆಯಿಂದಾಗಿ ಮೆರವಣಿಗೆ ವಿಳಂಬವಾಗಿ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.