ಮಹಾಮಳೆಗೆ ಮಂಗಳೂರು ತತ್ತರ : ಜನಸಾಮಾನ್ಯರ ಬದುಕು ದುಸ್ತರ
Team Udayavani, May 29, 2018, 10:42 PM IST
ಮಹಾನಗರಿ ಮಂಗಳೂರು ಮಂಗಳವಾರ ಅಕ್ಷರ ಸಹ ತತ್ತರಿಸಿಹೋಗಿತ್ತು. ಸೋಮವಾರ ರಾತ್ರಿಯಿಂದಲೇ ಸುರಿಯಲಾರಂಭಿಸಿದ ಕುಂಭದ್ರೋಣ ಮಳೆ ಮಂಗಳವಾರವೂ ತನ್ನ ಬಿರುಸನ್ನು ಕಳೆದುಕೊಳ್ಳಲಿಲ್ಲ. ಪರಿಣಾಮವಾಗಿ ಮೊದಲೇ ಸೂಕ್ತ ಒಳಚರಂಡಿ ವ್ಯವಸ್ಥೆಗಳಿಲ್ಲದ ಮಂಗಳೂರು ನಗರ ಮತ್ತು ಅದರ ಸುತ್ತಮುತ್ತ ಬರೇ ನೀರು ನೀರು. ಚರಂಡಿಗಳೆಲ್ಲಾ ತುಂಬಿ ರಸ್ತೆಗಳ ಮೇಲೆ ಹರಿದು ಬಳಿಕ ತಗ್ಗು ಪ್ರದೇಶದ ಮನೆ-ಅಂಗಡಿಗಳಿಗೆಲ್ಲಾ ನುಗ್ಗಿದ ಮಳೆನೀರು ಕುಡ್ಲ ನಿವಾಸಿಗಳನ್ನು ಕಂಗಾಲಾಗಿಸಿತು. ಈತನ್ಮಧ್ಯೆ, ಅಗ್ನಿಶಾಮಕ ದಳ, ವಿವಿಧ ಸಂಘಸಂಸ್ಥೆಗಳ ಸ್ವಯಂಸೇವಕರು ಹಾಗೂ ನಾಗರಿಕರು ತಮ್ಮ ತಮ್ಮ ಪ್ರದೇಶಗಳಲ್ಲಿ ನೆರೆನೀರಿಗೆ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು, ಇತ್ತ ಕೆಲವರು ಸಂಚಾರ ನಿಯಂತ್ರಣ ಕಾರ್ಯದಲ್ಲೂ ಪೊಲೀಸರಿಗೆ ನೆರವು ನೀಡಿದರು.
ಒಟ್ಟಿನಲ್ಲಿ ಸರಿಯಾದ ರೀತಿಯ ಟೌನ್ ಪ್ಲ್ಯಾನಿಂಗ್ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಂಗಾರು ಮಳೆಯ ಪ್ರಾರಂಭದಲ್ಲೇ ಕರಾವಳಿ ಇತ್ತೀಚಿನ ದಿನಗಳಲ್ಲಿ ಕಾಣದಿದ್ದ ಕೃತಕ ನೆರೆ ಇಲ್ಲಿನ ಸಾಮಾನ್ಯ ಜನರ ಬದುಕನ್ನು ಅಕ್ಷರಸಹ ನರಕವನ್ನಾಗಿಸುತ್ತಿದೆ. ಸ್ಮಾರ್ಟ್ ಸಿಟಿಯಾಗುವತ್ತ ಸಾಗುತ್ತಿರುವ ಮಂಗಳೂರು ನಗರಕ್ಕೆ ಈ ರೀತಿಯ ಪ್ರಾಕೃತಿಕ ವಿಪತ್ತುಗಳು ಅಪ್ಪಳಿಸಿದಾಗ ನಗರ ಸ್ವರೂಪದ ಬಂಡವಾಳ ಬಯಲಾಗುತ್ತದೆ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಮಂಗಳೂರಿಗರ ಬದುಕನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.
Latest Updates:
– ಮಂಗಳೂರು ನಗರದಾದ್ಯಂತ ನೆರೆ ನೀರಿನಿಂದ ಸಾರ್ವಜನಿಕರು ತೊಂದರೆಗೊಳಗಾಗಿರುವುದರಿಂದ ನಗರವಾಸಿಗಳಿಗೆ ತುರ್ತು ಔಷಧಿಗಳು ಅಥವಾ ವೈದ್ಯಕೀಯ ನೆರವಿನ ಅಗತ್ಯವನ್ನು ಪೂರೈಸಲು ಟೀಂ ಹೆಲ್ತ್ –ಇ ಎಂಬ ಉತ್ಸಾಹಿಗಳ ತಂಡವು ಯಾವುದೇ ಸರ್ವಿಸ್ ಚಾರ್ಜ್ ಇಲ್ಲದೇ ನಿಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ. ದಯವಿಟ್ಟು ಈ ಸೇವೆಯ ಸದುಪಯೋಗವನ್ನು ಮಂಗಳೂರು ನಗರವಾಸಿಗಳು ಪಡೆದುಕೊಳ್ಳಿ, ನೀವು ಮಾಡಬೇಕಾಗಿರುವುದಿಷ್ಟೇ : ತುರ್ತು ಔಷಧಿಗಳಿಗೆ ನಿಮ್ಮ ಬಳೀಯಿರುವ ಮೆಡಿಕಲ್ ಪ್ರಿಸ್ಕ್ರಿಪ್ಷನ್ ಅನ್ನು 9148247777 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ. ಸಂಪರ್ಕ ವ್ಯಕ್ತಿಯ ಹೆಸರು: ನೀರವ್ ಭಂಡಾರಿ
– ನಗರಕ್ಕೆ ಬರಲಿದೆ NDRF ತಂಡ. ಬುಧವಾರದಂದು ನಗರಕ್ಕೆ ಕಾಲಿಡಲಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಇದರಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ವೇಗ ಪಡೆದುಕೊಳ್ಳುವ ಸಾಧ್ಯತೆ.
– ಬಾರೀ ಮಳೆಯ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಞೆಗಳು ಮಂದೂಡಿಕೆ.
– ಈಗಾಗಲೇ ನಗರದ ಐದು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ.
– ಬುಧವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ.
– ಭಾರೀ ಮಳೆ ಮತ್ತು ಕೃತಕ ನೆರೆಗೆ ನಗರದಲ್ಲಿ ಎರಡು ಜೀವಗಳ ಬಲಿ.
– ಮಳೆ ನೀರಿನಲ್ಲಿ ತೇಲಿಬಂದು ಆತಂಕ ಸೃಷ್ಟಿಸಿದ ಹಾವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.