ಹೆಕ್ಟೇರ್‌ಗಟ್ಟಲೆ ಅರಣ್ಯ ರಕ್ಷಣೆಗೆ ಸಿಬಂದಿ ಕೊರತೆ
Team Udayavani, Jul 10, 2017, 3:45 AM IST
ಬೆಳ್ತಂಗಡಿ: ಮಡಂತ್ಯಾರು, ಮಾಲಾಡಿ, ಸೋಣಂದೂರು, ಕುಕ್ಕಳ ಈ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 200 ಹೆಕ್ಟೇರ್ ಅರಣ್ಯ ಹಬ್ಬಿಕೊಂಡಿದ್ದು ಅರಣ್ಯ ರಕ್ಷಣೆಗೆ ಕೇವಲ ಇಬ್ಬರು ಸಿಬಂದಿ ನಿಯೋಜಿತರಾಗಿದ್ದು ಸಿಬಂದಿ ಕೊರತೆ ಕಾಡುತ್ತಿದೆ.
ವರುಷದಿಂದ ಸಿಬಂದಿ ಕೊರತೆ
ಈ ಗ್ರಾಮಗಳಲ್ಲಿ ಅರಣ್ಯ ರಕ್ಷಣೆಗೆ ಮೂರು ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಜುಲೆ„ಯಲ್ಲಿ ಓರ್ವ ಸಿಬಂದಿ ವರ್ಗಾವಣೆಯಾಗಿದ್ದು ಬಳಿಕ ಇದರ ನೇಮಕವಾಗಿಲ್ಲ. ಓರ್ವ ಅರಣ್ಯ ರಕ್ಷಕ ಹಾಗೂ ಉಪವಲಯ ಅರಣ್ಯಾಧಿಕಾರಿ ಪ್ರಸ್ತುತ ಕಾರ್ಯ ಪ್ರವೃತ್ತರಾಗಿದ್ದಾರೆ. ಐದು ದಿನಗಳಲ್ಲಿ ರಾತ್ರಿ ಪಾಳಿಯನ್ನೂ ಇರುವ ಸಿಬಂದಿಗಳೇ
ಮಾಡಬೇಕಿದೆ.
ಸಹಕಾರದಿಂದ ಅರಣ್ಯ ರಕ್ಷಣೆ
ಇರುವ ಇಬ್ಬರು ಸಿಬಂದಿಯಲ್ಲಿ ಒಬ್ಬರು ರಜೆ ಹಾಕಿದರೆ ಮಚ್ಚಿನ, ಗೇರುಕಟ್ಟೆ ವಲಯದಿಂದ ಸಿಬಂದಿಯನ್ನು ಕರೆಸಿ ಅವರ ಸಹಕಾರದಿಂದ ಅರಣ್ಯ ರಕ್ಷಣೆಯ ಕಾರ್ಯ ಮಾಡಲಾಗುತ್ತಿದೆ. ಇಲಾಖೆಯ ಇತರ ಕಾರ್ಯಗಳಿಗೆ ಓರ್ವ ಸಿಬಂದಿ ಆಗಾಗ ತೆರಳಬೇಕಾಗಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಇತರರ ಸಹಕಾರದಿಂದಲೇ ಅರಣ್ಯ ರಕ್ಷಣೆಯ ಕಾರ್ಯವಾಗುತ್ತಿದೆ.
ಅವ್ಯಾಹತ ಮರ ಕಡಿತದ ಭೀತಿ
ಈ ವ್ಯಾಪ್ತಿಗಳಲ್ಲಿ ಅವ್ಯಾಹತ ಮರ ಕಡಿತದ ಭೀತಿ ಹೆಚ್ಚಿದೆ. ಈಗಾಗಲೇ ಎರಡು ಬಾರಿ ಒಣ ಮರವನ್ನು ಕಡಿದು ಹಾಕಿರುವ ಬಗ್ಗೆ ಸಿಬಂದಿಯ ಗಮನಕ್ಕೆ ಬಂದಿದ್ದು ಅವರಿಗೆ ಮರ ಕಡಿಯದಂತೆ ಎಚ್ಚರಿಕೆ ನೀಡಲಾಗಿದೆಯಾದರೂ ಮರ ಕಡಿದು ಅಕ್ರಮ ಸಾಗಾಣಿಕೆೆ ಮಾಡಲಾಗುತ್ತಿದೆ ಎಂಬ ಭೀತಿ ಇದೆ.
ಹುಲಿ ಇದೆ ಜಾಗ್ರತೆ !
ಅರಣ್ಯಕ್ಕೆ ಹುಲಿ ಬಿಡುತ್ತಾರಂತೆ, ಜಾಗ್ರತೆ ಯಿಂದ ಇರಬೇಕು ಎಂಬ ಮಾತುಗಳು ಕಳೆದ ಐದಾರು ತಿಂಗಳಿನಿಂದ ಸಾರ್ವಜನಿಕ ವಲಯದಲ್ಲಿ ಹಬ್ಬಿವೆ. ಇಂತಹ ಕಪೋಲಕಲ್ಪಿತ ಸುದ್ದಿಗಳು ಅರಣ್ಯ ಇಲಾಖೆಯವರು ಜನರು ಮರ ಕಡಿಯದಂತೆ ಸƒಷ್ಟಿಸಿಧ್ದೋ ಅಥವಾ ಮರಗಳನ್ನು ಕಡಿದು ಅಕ್ರಮವಾಗಿ ಸಾಗಣೆ ಮಾಡುವವರು ತಮ್ಮ ಕಾರ್ಯಕ್ಕೆ ಭಂಗ ಬಾರದಿರಲಿ, ಸಾರ್ವಜನಿಕರು ಇತ್ತ ಸುಳಿಯದಿರಲಿ ಎಂದು ಹೆದರಿಕೆ ಹುಟ್ಟಿಸಿಧ್ದೋ ತಿಳಿದಿಲ್ಲ. ಅಂತೂ ಹುಲಿರಾಯನು ಅರಣ್ಯ ಪ್ರವೇಶಿಸಿದ್ದಾನೆ ಎಂಬ ಸುದ್ದಿ ಊರು ತುಂಬಾ ಹರಡಿದೆ.
ನೇಮಕಾತಿ ಎಂದು?
ಮಾರ್ಚ್ ತಿಂಗಳಲ್ಲಿ ಓರ್ವ ಅರಣ್ಯ ರಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸದ್ಯ ಇನ್ನೂ ಯಾರನ್ನೂ ಅಧಿಕೃತವಾಗಿ ಅರಣ್ಯ ಇಲಾಖೆಯವರು ನೇಮಕ ಮಾಡಿಲ್ಲ. ಒಬ್ಬ ಅರಣ್ಯ ರಕ್ಷಕರು ಬರುತ್ತಾರೆ ಎಂಬ ಭರವಸೆಯಲ್ಲಿ ಇಲ್ಲಿನ ಸಿಬಂದಿ ಇದ್ದಾರೆ.
– ಚಂದ್ರಶೇಖರ್‌ಎಸ್. ಅಂತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.