ಹೆಡ್‌ಕಾನ್ಸ್‌ಟೆಬಲ್‌ ಪ್ರವೀಣ್‌ ಸಾವು ಪ್ರಕರಣ: ಕೆಮರಾದಲ್ಲಿ ದಾಖ


Team Udayavani, Mar 27, 2017, 3:03 PM IST

cctv.jpg

ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯದ ನಾಲ್ಕನೇ ಮಹಡಿಯಿಂದ 2ನೇ ಮಹಡಿಗೆ ಬಿದ್ದು, ಗಾಯಗೊಂಡು ಬಳಿಕ ಸಾವನ್ನಪ್ಪಿದ ಬಜಪೆ ಪೊಲೀಸ್‌ ಠಾಣೆಯ ಹೆಡ್‌ಕಾನ್ಸ್‌ಟೆಬಲ್‌ ಪ್ರವೀಣ್‌ ನ್ಯಾಯಾಲಯದಲ್ಲಿ ಆತ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಕೆಳಗೆ ಬೀಳುತ್ತಿರುವ ದೃಶ್ಯಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಲು ಆರಂಭಿಸಿವೆ. 

ಪೊಕೊÕ ಕಾಯ್ದೆಯಡಿ ಬಂಧಿತನಾಗಿದ್ದ‌ ಪ್ರವೀಣನನ್ನು ಕೋರ್ಟ್‌ಗೆ ಹಾಜರುಪಡಿಸಲು ಐದು ಮಂದಿ ಪೊಲೀಸರು ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿತ್ತು.     

ಕೋರ್ಟ್‌ನಲ್ಲಿ ಅಳವಡಿಸಿರುವ 4ನೇ ಮಹಡಿಯ 1 ನೇ ಸಿಸಿ ಕೆಮರಾದಲ್ಲಿ ಆರೋಪಿ ಮಹಡಿಯಿಂದ ಹಾರುವ ದೃಶ್ಯ ಸೆರೆಯಾಗಿದೆ. ಕೋರ್ಟ್‌ನ 4ನೇ ಮಹಡಿಯಲ್ಲಿ ಲಿಫ್ಟ್‌ನಿಂದ 5 ಮಂದಿ ಪೊಲೀಸರ ಜತೆ ಆರೋಪಿ ಹೊರಗೆ ಬರುತ್ತಿರುವ ದೃಶ್ಯ ಕಾಣಿಸುತ್ತಿದೆ. ನಾಲ್ವರು ಪೊಲೀಸರು ಆರೋಪಿಯ ಎದುರಿನಿಂದ ಹಾಗೂ ಓರ್ವ ಪೊಲೀಸ್‌ ಹಿಂಬದಿ ಇದ್ದಾರೆ. ಲಿಫ್ಟ್‌ನಿಂದ ಹೊರಗೆ ಬಂದು 3ನೇ ಮಹಡಿಗೆ ಇಳಿಯಲು ಎಡಗಡೆ ಇರುವ ಮೆಟ್ಟಲಿನ ಜಾಗದಲ್ಲಿ ಕೆಳಗೆ ಧುಮುಕಿದ್ದ.

ಈ ಸಂದರ್ಭದಲ್ಲಿ  ಆರೋಪಿಯ ಹಿಂದೆ ಇದ್ದ  ಪೊಲೀಸ್‌ ಹಿಡಿಯುವ ಪ್ರಯತ್ನ ಮಾಡಿದರೂ ಕೂದಲೆಳೆಯ ಅಂತರದಲ್ಲಿ ತಪ್ಪಿಹೋಗಿದೆ. ಉಳಿದ ಇಬ್ಬರು ಪೊಲೀಸರು ಓಡಿ ಬರುವಷ್ಟರಲ್ಲಿ ಆರೋಪಿ ಕೆಳಗೆ ಧುಮುಕಿ ಆಗಿತ್ತು. ಕೂಡಲೇ ಗಾಬರಿಗೊಂಡ ಪೊಲೀಸರು ನೆಲಮಹಡಿಗೆ ಓಡಿ ಕೊಂಡು ಬಂದಾಗ  ಅಲ್ಲಿದ್ದವರು ಮಹಡಿಯಿಂದಲೇ ಕೆಳಗೆ ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರವಿವಾರ ಈ ದೃಶ್ಯ ವಾಹಿನಿಯಲ್ಲಿ ಪ್ರಸಾರವಾಗಿದ್ದಲ್ಲದೆ ಮೊಬೈಲ್‌ನಿಂದ ಮೊಬೈಲ್‌ಗೆ ವೈರಲ್‌ ಆಗಿ ಹರಿದಾಡಿದೆ. ಸಿಸಿಟಿವಿ ದೃಶ್ಯವನ್ನು ನೋಡಿದಾಗ ಆರೋಪಿ ಪರಾರಿಗೆ ಪೂರ್ವದಲ್ಲೇ ನಿರ್ಧರಿಸಿದಂತೆ ಭಾಸವಾಗುತ್ತಿದೆ. 

ಅಧಿಕಾರಿಗಳು ಬುದ್ಧಿವಾದ ಹೇಳಿದ್ದರು
ಮೃತ ಪ್ರವೀಣ್‌ 18 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತ ಸ್ವಲ್ಪ ಮುಂಗೋಪಿಯಾಗಿದ್ದು, ಸಹ ಸಿಬಂದಿ ಜತೆ ಹಲವು ಬಾರಿ ವಾಗ್ವಾದ ನಡೆಸಿದ್ದನು. ಈ ಬಗ್ಗೆ ಆತನಿಗೆ ಹಿರಿಯ ಅಧಿಕಾರಿಗಳು ಬುದ್ಧಿವಾದ ಹೇಳಿದ್ದರು.  ಸಹ ಸಿಬಂದಿ ಜತೆ ಸೀಮಿತವಾಗಿ ಮಾತನಾಡುತ್ತಿದ್ದು, ಇಲಾಖೆಯೊಳಗಿನ ವಿಷಯವಾದ್ದರಿಂದ ಅನೇಕ ಸಂದರ್ಭಗಳಲ್ಲಿ  ಎಲ್ಲರೂ ಹೊಂದಾಣಿಕೆಯಿಂದ ಹೋಗುತ್ತಿದ್ದರು. ಶನಿವಾರ ನಡೆದ ಘಟನೆ ಆತನ ಜತೆ ಕೆಲಸ ಮಾಡುತ್ತಿದ್ದ ಸಿಬಂದಿಗೆ ಆಘಾತ ಉಂಟು ಮಾಡಿದೆ.

ಕೇಸು ದಾಖಲು, ಶವ ಹಸ್ತಾಂತರ: ಪ್ರವೀಣ್‌ ಪರಾರಿಯಾಗಲು ಯತ್ನಿಸಿದ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿವಾರ ಆತನ ಶವದ ಮಹಜರು ನಡೆಸಿ, ಮಧ್ಯಾಹ್ನ 1 ಗಂಟೆಗೆ ಮೃತದೇಹ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 

ಬಜಪೆ ಸುಂಕದಕಟ್ಟೆಯಲ್ಲಿ ವಾಸಿಸುವ ಮಹಿಳೆ ಮತ್ತು ಆಕೆಯ ಪುತ್ರಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಿ ಕೋರ್ಟ್‌ಗೆ ಕರೆದೊಯ್ಯಲಾಗುತ್ತಿತ್ತು.

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.