ಹೆಗ್ಗಡೆ ಇನ್ನೂ  50 ವರ್ಷ ಮಾರ್ಗದರ್ಶನ ನೀಡಲಿ


Team Udayavani, Oct 30, 2017, 6:45 AM IST

margadarshana.jpg

ಉಜಿರೆ: ಪ್ರಧಾನಿ ನರೇಂದ್ರ ಮೋದಿ ಭಾಷಣದುದ್ದಕ್ಕೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಾಧನೆಗಳನ್ನು ಉಲ್ಲೇಖೀ ಸುತ್ತಾ ಶ್ಲಾಘಿಸಿದರು. 20ರ ತಾರುಣ್ಯ ದಲ್ಲಿ ಹೆಗ್ಗಡೆ ಅವರು ಧರ್ಮಾಧಿಕಾರಿಯಾಗಿ ಪ್ರಮುಖ ವಾದ ಹೊಣೆ ಸ್ವೀಕರಿಸಿದರು. ಈಗ 50 ವರ್ಷ ಪೂರ್ಣವಾಗಿದೆ. ಕ್ಷೇತ್ರದ ಸಾಧನೆಗಳು ಜಗದ್ವಿಖ್ಯಾತವಾಗಿವೆ. ಹೆಗ್ಗಡೆ ಅವರನ್ನು ಸಮ್ಮಾನಿಸುವ ಭಾಗ್ಯವಿಂದು ತನಗೆ ಪ್ರಾಪ್ತವಾಗಿದೆ. ಹೆಗ್ಗಡೆಯವರು ಪಟ್ಟ ಸ್ವೀಕರಿಸಿ 50 ವರ್ಷ ಆಗಿರುವುದಕ್ಕೆ ತಾನು ಅವರನ್ನು ಸಮ್ಮಾನಿಸಿರುವುದಲ್ಲ. ಅವರು ಇನ್ನೂ 50 ವರ್ಷ ಈ ಪಟ್ಟದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶನ ನೀಡು ವಂತಾಗಲೆಂದು ತನ್ನ ಹಾರೈಕೆ ಎಂದರು ಮೋದಿ.

- ಹಿಂದಿನ ವಾರ ನಾನು ಕೇದಾರ ನಾಥಕ್ಕೆ ತೆರಳಿ ದೇವರ ದರ್ಶನ ಪಡೆ ದಿದ್ದೆ. ಈದಿನ ದಕ್ಷಿಣದ ಕೇದಾರ 
ದಂತಹ ಪುಣ್ಯಸ್ಥಳಕ್ಕೆ ನಾನು ಬಂದಿ ದ್ದೇನೆ. ನರೇಂದ್ರ ಮೋದಿ ಎಂಬ ಸಾಮಾನ್ಯ ವ್ಯಕ್ತಿಗೆ ಪ್ರಧಾನಿ ಯಾಗು ವಂಥ ಆಶೀರ್ವಾದ ಜನತೆ ನೀಡಿದ್ದಾರೆ. ಜನತೆಯ ಪರವಾಗಿ ಹೆಗ್ಗಡೆಯವರ ಚರಣ ಗಳಿಗೆ ಅಭಿವಂದಿಸುತ್ತೇನೆ.

- ಹೆಗ್ಗಡೆಯವರು ಸಮಾಜದ ಒಳಿತಿ ಗಾಗಿ ತ್ಯಾಗ, ತಪಸ್ಸಿನ ಜೀವನ ನಿರತ ರಾಗಿದ್ದಾರೆ. ನುಡಿದಂತೆ ನಡೆಯು ವವರಾಗಿದ್ದಾರೆ. ಸ್ವಂತಕ್ಕಿಲ್ಲ-ಎಲ್ಲವೂ ಸಮಾಜಕ್ಕೆ ಎಂಬುದು ಅವರ ಬದುಕಿನ ಸಂದೇಶ. ಒಂದು ಧರ್ಮಕ್ಷೇತ್ರ ಹೇಗಿರ ಬೇಕು ಎಂಬುದಕ್ಕೆ ಧರ್ಮಸ್ಥಳ ಆದರ್ಶ . ಅಧ್ಯಾತ್ಮ, ಶಿಕ್ಷಣ, ಧರ್ಮ, ಪರಂಪರೆ, ಕೃಷಿ, ಗ್ರಾಮಾಭಿವೃದ್ಧಿ, ಬಡ ಜನರಿಗೆ ನೆರವು, ಕೌಶಲಾಭಿವೃದ್ಧಿ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಅನನ್ಯವಾಗಿದೆ.

- ಆರ್ಥಿಕ ಸುಧಾರಣೆಗಳನ್ನು ತಾನು ತಂದಾಗ ಸಂಸತ್ತಿನಲ್ಲಿ ಕೆಲವು ಬುದ್ಧಿ ವಂತರು ಎನಿಸಿಕೊಂಡವರು ಕೆಟ್ಟ ಭಾವನೆಗಳಿಂದ, ಕೆಟ್ಟ ಭಾಷೆಗಳಿಂದ ನಿಂದಿಸಿದರು. ಭಾರತ ಅಶಿಕ್ಷಿತರ ದೇಶ. ಅಶಿಕ್ಷಿತ ಬಡಜನರು ಡಿಜಿಟಲ್‌ ಅಥವಾ ಕ್ಯಾಶ್‌ಲೆಸ್‌ ವ್ಯವಹಾರ ಹೇಗೆ ನಡೆಸಿಯಾರು? ಎಲ್ಲರಲ್ಲೂ ಮೊಬೈಲ್‌ ಫೋನ್‌ ಇದೆಯಾ ಎಂದೆಲ್ಲ ವ್ಯಂಗ್ಯ ವಾಡಿದರು. ಅವರ ಈ ಪ್ರಶ್ನೆಗಳಿಗೆ ಹೆಗ್ಗಡೆ ಅವರು ಇಂದು ಅನುಷ್ಠಾನಿಸಿದ ಯೋಜನೆಗಳೇ ಉತ್ತರಗಳಾಗಿವೆ. ಮಹಿಳೆಯರಿಗಂತೂ ವಿಶೇಷ ವಂದನೆ ಗಳು ಎಂದರು ಮೋದಿ.

ಕರಾವಳಿಯ ಚಿಂತನೆ
ಮಂಗಳೂರು ಸಹಿತ ಕರ್ನಾಟಕ ಕರಾವಳಿಯ ಬಗ್ಗೆ  ಮೋದಿ ಸಾಂದರ್ಭಿಕ ವಾಗಿ ಉಲ್ಲೇಖೀಸಿದರು. ಮಳೆಗಾಲದಲ್ಲಿ ಇಲ್ಲಿನ ಮೀನುಗಾರರಿಗೆ ಪರ್ಯಾಯ ವಾಗಿ ಉದ್ಯೋಗ ದೊರೆಯಬೇಕು. ಸೀವೀಡ್‌ ಎಂಬ ಯೋಜನೆ ತರ  ಬಹುದು. ಸಮುದ್ರದ ಕಳೆಗಳನ್ನು ಕೃಷಿ ರೂಪದಲ್ಲಿ ಸಂಸ್ಕರಿಸಿ ಕಡಲ ಕಿನಾರೆಯಲ್ಲಿ ಬೆಳೆಸಬೇಕು. ಜಲಸಹಿತವಾದ ಈ ಉತ್ಪನ್ನ ಕೃಷಿ ಕಾರ್ಯದ ಗದ್ದೆಗಳಲ್ಲಿ ಪೂರಕವಾದ ಗೊಬ್ಬರವಾಗುತ್ತದೆ. ಆದಾಯವನ್ನು ನೀಡು ತ್ತದೆ. ಹೆಗ್ಗಡೆ ಯವರು ಈ ಬಗ್ಗೆ ಚಿಂತನೆ ನಡೆಸಲು ಮೋದಿ ವಿನಂತಿಸಿ ದರು. ಇಲ್ಲಿ ಅಡಿಕೆ ಬೆಲೆ ಕುಸಿದಾಗ ಇಲ್ಲಿನ ಬೆಳೆಗಾರರು ಗುಜರಾತ್‌ ಮುಖ್ಯ ಮಂತ್ರಿಯಾಗಿದ್ದ ನನ್ನಲ್ಲಿಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡರು.

ಚೆಹೆರೇಪರ್‌ ಮುಸ್ಕಾರಾಹಟ್‌ ಹಟ್‌ತೀ ನಹೀಂ…
“ನಮೋ’ಶ್ರೀ ಮಂಜು ನಾಥಾಯ ಎಂದು ಪ್ರೇಕ್ಷಕರಲ್ಲಿ ಮೂರು ಬಾರಿ ಹೇಳಿಸಿದರು ಹೆಗ್ಗಡೆಯವರು. ಇದರ ಔಚಿತ್ಯ ತಿಳಿಯಿತೇ ಎಂದು ಅವರು ಕೇಳಿದಾಗ ಸಭಾಂಗಣ ಪೂರ್ತಿ “ಹೌದು’ ಎಂದಿತು! 

- ನಮೋ ಮಂಜುನಾಥ, ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ, ನಿಮ ಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ ಹಿಂದಿಯಲ್ಲಿ ಮುಂದು  ವರಿ ಸಿದರು ಮೋದಿ. 

- ಹೆಗ್ಗಡೆಯವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಅದೇ ಮುಗುಳುನಗೆ; ಎಂದೂ ಆಯಾಸವಿಲ್ಲ. ಚೆಹೆರೇಪರ್‌ ಮುಸ್ಕಾರಾ ಹಟ್‌ ಹಟ್‌ತೀ ನಹೀಂ…!

- ಹಿಂದೆ ಹೇಳುತ್ತಿದ್ದರು: ಕೇಂದ್ರ ಸರಕಾರ ಒಂದು ರೂಪಾಯಿ ನೀಡಿದರೆ ಹಳ್ಳಿಗೆ ಬಂದದ್ದು 15 ಪೈಸೆ ಮಾತ್ರ. ಉಳಿದ ಮೊತ್ತ ನಡುವೆ ಯಾರ್ಯಾರದೋ ಪಾಲಾಗು  ತ್ತಿತ್ತು. ಈಗ ಹೇಳು ತ್ತೇವೆ: ಕೇಂದ್ರ ಸರಕಾರ ನೀಡುವ ಪೂರ್ಣ ಮೊತ್ತ ಹಳ್ಳಿ ಯನ್ನು ಪ್ರಾಮಾ ಣಿಕ ವಾಗಿ, ಪಾರ ದರ್ಶಕ ವಾಗಿ ತಲುಪುತ್ತಿದೆ.

ಟಾಪ್ ನ್ಯೂಸ್

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.