ಹೆಣ್ಮಕ್ಕಳ ಕೌಶಲಕ್ಕೆ ಮಾನ್ಯತೆ ಸಿಗಲಿ: ಡಾ | ಸಬೀಹಾ
Team Udayavani, Mar 28, 2017, 10:57 AM IST
ಮಂಗಳೂರು: ಹೆಣ್ಮಕ್ಕಳಲ್ಲಿ ಅನನ್ಯ ಕೌಶಲಗಳಿದ್ದು, ಅದನ್ನು ಇನ್ನೊಬ್ಬರ ಹಿತಕ್ಕಾಗಿ ಪಸರಿಸುತ್ತಲೇ ಬಂದಿದ್ದಾರೆ. ಜ್ಞಾನದ ವಲಯದಲ್ಲಿ ಅವರ ಕೌಶಲವು ಮಾನ್ಯತೆ ಗಳಿಸುವಲ್ಲಿ ವಿಫಲವಾಗಿದ್ದರೂ ಶೈಕ್ಷಣಿಕ ವಲಯದಲ್ಲಿ ಮಾನ್ಯತೆ ಒದಗಬೇಕು ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸಬೀಹಾ ಭೂಮಿಗೌಡ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ವತಿಯಿಂದ ನಗರದ ತುಳು ಭವನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಹೆಣ್ಮಕ್ಕಳಲ್ಲಿರುವ ಕೌಶಲಗಳ ಪೈಕಿ ಆಹಾರ ವ್ಯವಸ್ಥೆಯೂ ಒಂದಾಗಿದ್ದು, ಅದರಲ್ಲಿ ವ್ಯಾಪಕವಾದ ಜ್ಞಾನವಿದೆ. ಅದನ್ನು ಶೈಕ್ಷಣಿಕ ವಲಯದ ಜ್ಞಾನದ ರೂಪದಲ್ಲಿ ಪರಿಗಣಿಸದಿರುವುದು ಖೇದಕರ. ಈ ರೀತಿಯ ಪ್ರವೃತ್ತಿಯಿಂದ ಶೈಕ್ಷಣಿಕ ವಲಯದ ಚಿಂತನೆಗೇ ನಷ್ಟ. ಸಾಮಾಜಿಕ ವಿದ್ಯಮಾನಗಳು ಹಾಗೂ ಲೇಖಕಿಯರ ನಡುವೆ ಕೊಂಡಿಯ ಅಗತ್ಯವಿದ್ದು, ಹೊಸ ತಲೆಮಾರಿನ ಹೆಣ್ಮಕ್ಕಳನ್ನು ಸಾಹಿತ್ಯಿಕ ಚಿಂತನೆಗಳತ್ತ ಹೆಚ್ಚು ಆಕರ್ಷಿಸಬೇಕಿದೆ ಎಂದರು.
ಸಮ್ಮೇಳನದಲ್ಲಿ “ಪಟ್ಟಾಂಗ’ ಗೋಷ್ಠಿ ಯಲ್ಲಿ ಮಾತನಾಡಿದ ಸಾಹಿತ್ಯ ಸಮ್ಮೇ ಳನಾಧ್ಯಕ್ಷೆ ಬಿ.ಎಂ. ರೋಹಿಣಿ ಅವರು, ಕಾಲಕ್ಕೆ ತಕ್ಕಂತೆ ಹೊಸ ವಿಚಾರಗಳನ್ನು ಸಮಾಜ ಸ್ವೀಕರಿಸುತ್ತಾ ಬಂದಿದೆ. ಇದರೊಂದಿಗೆ ಮಹಿಳೆಯರಿಗೆ ಅನು ಕೂಲಕ್ಕೆ ತಕ್ಕಂತೆ ವಸ್ತ್ರ ಸಂಹಿತೆ ಕೂಡ ಬದಲಾಗಬೇಕು. ಮಹಿಳೆಯರು, ಶಿಕ್ಷಕಿಯರು ಇಂಥದ್ದೇ ಬಟ್ಟೆ ಧರಿಸಬೇಕು ಎನ್ನುವಂಥ ಕಟ್ಟುಪಾಡುಗಳನ್ನು ಹೇರುವ ಸಂಸ್ಕೃತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಮುಖ್ಯ ಅತಿಥಿ ಲೀಲಾವತಿ ರಾವ್ ಮಾತನಾಡಿದರು. ಲೇಖಕಿ ಜ್ಯೋತಿ ಚೇಳಾçರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.