ದ.ಕ.: 9.8 ಲಕ್ಷ ಗಿಡ ನಾಟಿಗೆ ಯೋಜನೆ
Team Udayavani, May 20, 2019, 3:04 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 950 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಸುಮಾರು 9.8 ಲಕ್ಷ ಗಿಡ ನೆಟ್ಟು ಬೆಳೆಸುವ ಗುರಿಯನ್ನು ಅರಣ್ಯ ಇಲಾಖೆ ಇರಿಸಿಕೊಂಡಿದೆ.
ಈ ಬಾರಿ ಮಳೆ ಬಂದ ಬಳಿಕ ಅಂದರೆ, ಸುಮಾರು ಜೂನ್ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ 8 ವಲಯಗಳಲ್ಲಿ ಗಿಡ ನೆಡಲು ಪ್ರಾರಂಭ ಮಾಡಲಾಗುತ್ತದೆ. ಒಂದು ತಿಂಗಳು ಕಾಲ ಈ ಕಾರ್ಯ ನಡೆಯಲಿದೆ. ರಸ್ತೆ ಬದಿಗಳಲ್ಲಿಯೂ ಗಿಡ ನೆಡುವುದು ಈ ಯೋಜನೆಯಲ್ಲಿದ್ದು, ಜಿಲ್ಲೆಯ ಸುಮಾರು 60 ಕಿ.ಮೀ. ರಸ್ತೆ ಬದಿ ನೆಡಲಾಗುತ್ತದೆ. ಪ್ರತೀ ಕಿ.ಮೀಗೆ 300 ಗಿಡ ನೆಡುವ ಗುರಿಯನ್ನು ಇಲಾಖೆ ಹೊಂದಿದೆ.
ರಸ್ತೆ ಬದಿ ಪ್ಲಾಂಟಿಂಗ್ ಮತ್ತು ಗ್ರೀನಿಂಗ್ ಅರ್ಬನ್ ಏರಿಯಾ ಯೋಜನೆಯಡಿ ಜಿಲ್ಲೆಯ 60 ಕಿ.ಮೀ. ವ್ಯಾಪ್ತಿಯಲ್ಲಿ ಗಿಡ ನೆಡಲಾಗುತ್ತದೆ. ಅಲ್ಲದೆ ಈ ಬಾರಿ ರೈನ್ ಟ್ರೀ, ದೇವದಾರು ಗಿಡಗಳನ್ನು ನೆಡದಿರಲು ತೀರ್ಮಾನ ಮಾಡಿದೆ. ಇವು ದುರ್ಬಲ ಮರಗಳಾಗಿದ್ದು, ಗಾಳಿಗೆ ತುಂಡಾಗುತ್ತದೆ. ಇದೇ ಕಾರಣಕ್ಕೆ ಒಣ ವಲಯಗಳಲ್ಲಿ ಗೋಳಿ, ಅರಳಿ ಗಿಡ ನೆಡುವ ಯೋಚನೆ ಇಲಾಖೆಗಿದೆ.
ರಿಯಾಯಿತಿ ದರದಲ್ಲಿ ವಿತರಣೆ
ಅರಣ್ಯ ಇಲಾಖೆಯು ಈ ಬಾರಿ ಒಟ್ಟಾರೆ 9.8 ಲಕ್ಷ ಗಿಡ ನೆಡಲು ಯೋಜನೆ ರೂಪಿಸಿದ್ದು, ಇದರಲ್ಲಿ 3 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಿದೆ. ಗಿಡಗಳನ್ನು ರಿಯಾಯಿತಿ ದರದಲ್ಲಿ ನೀಡಲಾ ಗುತ್ತದೆ. ಇನ್ನುಳಿದ ಗಿಡಗಳನ್ನು ಅರಣ್ಯ ಇಲಾಖೆಯೇ ನೆಡಲಿದೆ.
ಈ ವರ್ಷ ಅರಣ್ಯ ಇಲಾಖೆ ಯಿಂದ ಜಿಲ್ಲೆಯ 8 ವಲಯಗಳಲ್ಲಿ ಸುಮಾರು 9.8 ಲಕ್ಷದಷ್ಟು ಸಸಿ ನೆಡಲಾಗುತ್ತದೆ. ಜಿಲ್ಲೆಯ 950 ಹೆಕ್ಟೇರ್‌ನಲ್ಲಿ ನೆಡಲಾಗುತ್ತಿದೆ.
– ಕರಿಕಾಳನ್, ದ.ಕ. ಉಪ ಅರಣ್ಯ ಸಂರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.