ವಿಮಾನ ನಿಲ್ದಾಣ: ಹೈ-ಅಲರ್ಟ್ ಅಗತ್ಯ
Team Udayavani, Jan 22, 2020, 6:55 AM IST
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿ ದೇಶವ್ಯಾಪಿ ಆತಂಕಕ್ಕೆ ಕಾರಣವಾಗಿತ್ತಾದರೂ ಮಂಗಳವಾರವೂ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇರಲಿಲ್ಲ!
ಬಾಂಬ್ ಪತ್ತೆ ಮಾಡುವ ಮೂಲಕ ಭಾರೀ ದುರಂತವೊಂದನ್ನು ಭದ್ರತಾ ದಳ ವಿಫಲಗೊಳಿಸಿತ್ತು. ಇದು ಭದ್ರತಾ ಪಡೆಗಳ ಯಶಸ್ಸಾದರೂ ವಿಮಾನ ನಿಲ್ದಾಣದವರೆಗೆ ಬಾಂಬ್ ಕೊಂಡೊಯ್ದದ್ದು ಮೇಲ್ನೋಟಕ್ಕೆ ಭದ್ರತಾ ವೈಫಲ್ಯವಾಗಿ ಕಾಣಿಸುತ್ತಿದೆ. ಘಟನೆಯ ಅನಂತರ ನಿಲ್ದಾಣ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವ ಅನಿವಾರ್ಯತೆ ಇತ್ತಾದರೂ ಮಂಗಳವಾರ ನಿರೀಕ್ಷೆಯಷ್ಟು ಬಿಗಿ ಭದ್ರತೆ ಕಾಣಸಿಗಲಿಲ್ಲ. ಟರ್ಮಿನಲ್ ಪ್ರವೇಶದ ಬಳಿಕ ಬಿಗಿ ಭದ್ರತೆ ಅಳವಡಿಸ ಲಾಗಿದ್ದರೂ ವಾಹನ ಪ್ರವೇಶದ ಮಾರ್ಗದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಿರುವುದು ಕಾಣಿಸಲಿಲ್ಲ.
ತಪಾಸಣಾ ಕೌಂಟರ್ ಬಂದ್
ಈ ಹಿಂದೆ ನಿಲ್ದಾಣ ಪ್ರವೇಶಕ್ಕೂ ಮೊದಲು “ಎಂಟ್ರಿ ಫೀಸ್’ ಕೌಂಟರ್ ತೆರೆಯಲಾಗಿತ್ತು. ಇಲ್ಲಿಯೇ ಸಿಐಎಸ್‌ಎಫ್ ಸಿಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆದರೆ ಒಂದೂವರೆ ತಿಂಗಳಿನಿಂದ ಹೊರಭಾಗದ ಪಾರ್ಕಿಂಗ್ ಶುಲ್ಕ ನೀಡುವ ಮತ್ತು ತಪಾಸಣಾ ಕೌಂಟರ್ ಬಂದ್ ಆಗಿದೆ. ಬದಲಾಗಿ ವಾಹನಗಳು ನೇರವಾಗಿ ಪಾರ್ಕಿಂಗ್ ಏರಿಯಾಕ್ಕೆ ತೆರಳಲು ಅವಕಾಶವಿದೆ.
ಹೀಗಾಗಿಯೇ ಸೋಮವಾರ ಶಂಕಿತ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್‌ನ ಮುಂಭಾಗ ದವರೆಗೂ ತಪಾಸಣೆಗೆ ಒಳಗಾಗದೆ ಹೋಗುವುದಕ್ಕೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಪತ್ತೆಯಾದ ಬಳಿಕ ಈಗ ಸಿಐಎಸ್‌ಎಫ್‌ನ ಮೂವರು ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಪಿಯ ತುಕಡಿಯನ್ನು ನಿಯೋಜಿಸಲಾಗಿದೆ.
ಆಗಮನ ರಸ್ತೆಯಲ್ಲೇ ನಿರ್ಗಮನ!
ಏರ್‌ಪೋರ್ಟ್‌ಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ರಸ್ತೆಗಳಿವೆ. ಎರಡೂ ರಸ್ತೆಯ ಕೊನೆಯಲ್ಲಿ ವಿಮಾನ ನಿಲ್ದಾಣದ ಪಕ್ಕ ಕೌಂಟರ್ ಇರುವಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಆದರೆ ಸದ್ಯ ಈ ಕೌಂಟರ್‌ಗಳು ಕಾರ್ಯ ನಿರ್ವಹಿಸದ್ದರಿಂದ ಈಗ ಆಗಮನ ರಸ್ತೆಯ ಮೂಲಕವೇ ನಿರ್ಗಮನದ ವಾಹನಗಳೂ ತೆರಳುತ್ತಿವೆ.
ಇದರಿಂದಾಗಿ ಇಲ್ಲಿ ಹಲವು ಬಾರಿ ಅಪಘಾತ ಘಟನೆಗಳೂ ಸಂಭವಿಸಿವೆ ಏಕ ಮಾರ್ಗದಲ್ಲಿ ಸಂಚಾರದ ಬಗ್ಗೆ ಮಾರ್ಗಸೂಚಿಯೂ ಇಲ್ಲ ಎನ್ನುತ್ತಾರೆ ಟ್ಯಾಕ್ಸಿ ಚಾಲಕರೊಬ್ಬರು.
ಸಿಸಿಟಿವಿ ಬಳಕೆಯಿಲ್ಲ!
ವಿಮಾನ ನಿಲ್ದಾಣದ ಮುಖ್ಯ ಗೇಟ್ ಭಾಗದಲ್ಲಿ ಸಿಸಿಟಿವಿಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಹೀಗಾಗಿ ಪ್ರತೀ ವಾಹನದ ಚಲನವಲನ ಇಲ್ಲಿ ದಾಖಲಾಗುತ್ತಿತ್ತು. ಆದರೆ ಕೆಲವು ತಿಂಗಳಿನಿಂದ ಇಲ್ಲಿನ ಬಹುತೇಕ ಸಿಸಿ ಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ. ಎರಡು ಸಿಸಿಟಿವಿ ಅಳವಡಿಕೆ ಮಾಡಿದ್ದರೂ ವಯರ್ ಮಾತ್ರ ನೇತಾಡುತ್ತಿದ್ದು, ಸಂಪರ್ಕ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.