ಮಂಗಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಆತಂಕಕಾರಿ ಬೆಳವಣಿಗೆ
Team Udayavani, Sep 26, 2017, 9:48 AM IST
ಮಂಗಳೂರು: ಮಂಗಳೂರಿನ ಅಪಾರ್ಟ್‌ಮೆಂಟ್, ರೆಸಾರ್ಟ್‌ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಆತಂಕ ಕಾರಿ ಬೆಳವಣಿಗೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮುಂಜಾಗ್ರತಾ ಕ್ರಮಗಳ ಬಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ| ಹಿಲ್ಡಾ ರಾಯಪ್ಪನ್ ವಿಷಯ ಪ್ರಸ್ತಾವನೆಗೈದು, ನಗರದ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ವೇಶ್ಯಾ ವಾಟಿಕೆ ಜಾಲಕ್ಕೆ ಸಿಕ್ಕಿದ 20ರ ಹರೆಯದ ಯುವತಿ ಯ ರಿಗೆ ಸ್ವಾಧಾರ ಕೇಂದ್ರಗಳಲ್ಲಿ ರಕ್ಷಣೆ ನೀಡ ಲಾಗಿದೆ. ಹೇಳಿಕೆಯಲ್ಲಿ ಅವರು ದಲ್ಲಾಳಿಗಳ ಮೂಲಕ ಅವರನ್ನು ಪೂರೈಕೆ ಮಾಡಲಾಗುತ್ತಿದೆ. ಬೆಳಗ್ಗಿ ನಿಂದ ಮಧ್ಯಾಹ್ನವರೆಗೆ 3,000 ರೂ. ಮತ್ತು ಸಂಜೆ ವರೆಗೂ ಇದ್ದರೆ 8,000 ರೂ. ವರೆಗೆ ನೀಡು ತ್ತಿರುವು ದಾಗಿ ಆತಂಕಕಾರಿ ಮಾಹಿತಿಗಳನ್ನು ನೀಡಿದ್ದಾರೆ ಎಂದರು.
ನಗರ ಡಿಸಿಪಿ ಹನುಮಂತರಾಯ ಮಾತನಾಡಿ, ಹಲವು ಮಸಾಜ್ ಪಾರ್ಲರ್, ಸ್ಪಾಗಳಲ್ಲಿ ವೇಶ್ಯಾ ವಾಟಿಕೆ ನಡೆ ಯು ತ್ತಿರುವು ದರ ಬಗ್ಗೆ ಅನೇಕ ದೂರು ಗಳು ಬಂದಿವೆ. ದೂರುಗಳ ಆಧಾರದಲ್ಲಿ ಅಂತಹ ಕೇಂದ್ರಗಳನ್ನು ಪತ್ತೆಹಚ್ಚಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದರು.
ಪುಷ್ಪಲತಾ ಪ್ರಕರಣ ತನಿಖೆ ಪೂರ್ಣಗೊಳಿಸಿ ಉಪ್ಪಿನಂಗಡಿಯ ಪುಷ್ಪಲತಾ ಕೊಲೆ ಪ್ರಕರಣ ಮೂರು ವರ್ಷವಾದರೂ ಯಾಕೆ ಪೂರ್ಣ ಗೊಂಡಿಲ್ಲ ಎಂದು ನಾಗಲಕ್ಷ್ಮೀ ಅವರು ಪ್ರಶ್ನಿಸಿ ದರು. ಶೀಘ್ರ ಈ ಪ್ರಕರಣದ ತನಿಖೆಯನ್ನು ಪೂರ್ಣ ಗೊಳಿಸಬೇಕೆಂದು ಸೂಚಿಸಿದರು. ಪುಷ್ಪಲತಾ ದೇಹದ ಮೇಲಿನ ಗಾಯಗಳು ಅವರೇ ಮಾಡಿಕೊಂಡಿದ್ದು ಎಂದು ವೈದ್ಯಕೀಯ ವರದಿ ತಿಳಿಸಿರುವುದಾಗಿ ಎಸ್ಪಿ ಸುಧೀರ್ ರೆಡ್ಡಿ ಹೇಳಿದಾಗ, ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರ ಮರು ತನಿಖೆ
ನಗರದ ಮೀನುಗಾರಿಕಾ ಕಾಲೇಜಿನಲ್ಲಿ ಮಹಿಳಾ ಪ್ರೊಫೆಸರ್ ಮೇಲೆ ಕಾಲೇಜಿನ ಡೀನ್ ಆಗಿದ್ದ ಎಚ್.ಆರ್.ವಿ. ರೆಡ್ಡಿ ಅವರು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ದವರು ಸರಿಯಾಗಿ ತನಿಖೆ ನಡೆಸಿಲ್ಲ, ದೌರ್ಜನ್ಯ ನಡೆಸಿದ ವ್ಯಕ್ತಿಗೆ ಪೂರಕವಾಗುವಂತೆ ತನಿಖೆ ನಡೆಸಿ ವರದಿ ನೀಡಲಾಗಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿ ಕಾರಿ ಡಾ| ಕೆ. ಜಿ. ಜಗದೀಶ್ ಪ್ರಕರಣದ ಮರು ತನಿಖೆಯನ್ನು ಶೀಘ್ರ ನಡೆಸಲಾಗುವುದು ಎಂದು ತಿಳಿಸಿದರು. ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣ, ಜೈಲಿನಲ್ಲಿ ಮಹಿಳಾ ಕೈದಿಗಳ ಸುರಕ್ಷತೆ ಬಗ್ಗೆಯೂ ಅಧ್ಯಕ್ಷರು ಈ ವೇಳೆ ಮಾಹಿತಿ ಪಡೆದರು.
ಲೇಡಿಗೋಶನ್ ಬಳಿ ಬೀದಿಕಾಮಣ್ಣರ ಹಾವಳಿ
ಲೇಡಿಗೋಶನ್ ಆಸ್ಪತ್ರೆಯ ಸುತ್ತಮುತ್ತ ಬೀದಿ ಕಾಮಣ್ಣರ ಹಾವಳಿ ಹೆಚ್ಚಿದೆ. ಆಸ್ಪತ್ರೆಯ ಮುಂಭಾಗದ ಬಸ್ ತಂಗುದಾಣದಲ್ಲಿ ವೇಶ್ಯಾ ವಾಟಿಕೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಪೊಲೀಸ್ ಜೀಪ್ ಇದ್ದರೂ ಅವರು ನಿಗಾ ವಹಿಸುತ್ತಿಲ್ಲ ಎಂದು ಆಸ್ಪತ್ರೆಯ ಆಪ್ತ ಸಮಾಲೋಚಕಿಯೊಬ್ಬರು ದೂರಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕ್ರಿಮಿನಲ್‌ಗಳ ಮುಖ ಕಾಣುವಂತೆ ಕೆಮರಾಗಳನ್ನು ಆಸ್ಪತ್ರೆ ಪರಿಸರದಲ್ಲಿ ಅಳವಡಿಸುವಂತೆ ಸೂಚಿಸಿದರು.
ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಆಯೋಗದ ಸದಸ್ಯೆ ಧನಲಕ್ಷ್ಮೀ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸುಶೀಲಾ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.