ಕುಕ್ಕೆ: ಆಮೆಗತಿಯಲ್ಲಿ ಚತುಷ್ಪಥ ಕಾಂಕ್ರೀಟ್ ಕಾಮಗಾರಿ
ಕಾರ್ಮಿಕರ ಕೊರತೆ; ಆಧುನಿಕ ಯಂತ್ರದ ಬಳಕೆ ಇಲ್ಲ: ವಾಹನ ಸಂಚಾರಕ್ಕೆ ತೊಂದರೆ
Team Udayavani, May 20, 2019, 6:00 AM IST
ಕುಮಾರಧಾರಾದಿಂದ ಪೇಟೆ ತನಕ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ.
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. 180 ಕೋಟಿ ರೂ. ಮಾಸ್ಟರ್ ಪ್ಲಾನ್ 2ನೇ ಹಂತದಲ್ಲಿ 68.60 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಾಗಿದೆ. ಕುಮಾರಧಾರಾ-ಪೇಟೆ ತನಕದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಆಮೆಗತಿಯಲ್ಲಿ ಸಾಗುತ್ತಿದೆ. ಹಾಲಾಡಿ ದಯಾನಂದ ಶೆಟ್ಟಿ ಅವರು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ.
ಕೋಟ್ಯಂತರ ವೆಚ್ಚದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಮೂರು ತಿಂಗಳಾದರೂ ಇನ್ನು ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಕುಮಾರಧಾರಾ-ಕಾಶಿಕಟ್ಟೆ ತನಕ ಅಗೆದಿಟ್ಟ ರಸ್ತೆಯಲ್ಲಿ 900 ಮೀ. ಜಲ್ಲಿ ಹಾಕಿ ಪ್ರಾಥಮಿಕ ಬೆಡ್ ಹಾಕಲಾಗಿದೆ. 200 ಮೀ.ನಷ್ಟು ದೂರ ಕಾಂಕ್ರೀಟ್ ನಡೆಸಲಾಗಿದೆ. ಬಸ್ ನಿಲ್ದಾಣ-ಆದಿಸುಬ್ರಹ್ಮಣ್ಯ ರಸ್ತೆಯಲ್ಲಿ 300 ಮೀ.ನಷ್ಟು ದೂರ ಜಲ್ಲಿ ಹಾಕಲಾಗಿದೆ. ನೂಚಿಲ ರಸ್ತೆಯಲ್ಲಿ 150 ಮೀ.ನಷ್ಟು ದೂರ ಮಣ್ಣಿನ ಕಾಮಗಾರಿಗಳಷ್ಟೆ ನಡೆದಿದೆ.
ಸಂಚಾರವೂ ದುಸ್ತರ
ಕ್ಷೇತ್ರದಲ್ಲಿ ಜನದಟ್ಟಣೆ ಹೆಚ್ಚುತ್ತಲಿದ್ದು, ವಾಹನ ದಟ್ಟಣೆಯೂ ಅಧಿಕವಾಗಿದೆ. ನಿತ್ಯವೂ ಸಾರಿಗೆ ಬಸ್ ಸಹಿತ ಸಹಸ್ರಾರು ವಾಹನಗಳು ಕಾಮಗಾರಿ ನಡೆಯುತ್ತಿರುವ ರಸ್ತೆಯ ಪಕ್ಕದಲ್ಲಿ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಲಿವೆ. ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು ಕ್ಷೇತ್ರಕ್ಕೆ ಬರುವ ಭಕ್ತರ ದೃಷ್ಟಿಯಿಂದ ಅಗತ್ಯವಾಗಿದೆ.
ಕಾರ್ಮಿಕರ ಕೊರತೆ
ಗುತ್ತಿಗೆದಾರರು ವೇಗವಾಗಿ ಕಾಮಗಾರಿ ನಡೆಸಲು ಆಧುನಿಕ ಯಂತ್ರಗಳನ್ನು ಬಳಸಿಕೊಂಡಿಲ್ಲ. ಸಾಮಾನ್ಯ ಯಂತ್ರೋಪಕರಣಗಳನ್ನೆ ಬಳಸುತ್ತಿದ್ದು, ದಿನಕ್ಕೆ 10 ಮೀ.ನಷ್ಟು ದೂರ ಕೂಡ ಕಾಂಕ್ರೀಟು ನಡೆಯುತ್ತಿಲ್ಲ ಎನ್ನುವ ಆರೋಪವಿದೆ. ಕಾರ್ಮಿಕರೂ ಸಾಕಷ್ಟು ಪ್ರಮಾಣದಲ್ಲಿ ಕೆಲಸದಲ್ಲಿ ಇಲ್ಲ. ಅನ್ಯ ರಾಜ್ಯಗಳ ಕಾರ್ಮಿಕರಿಗೆ ಕೌಶಲ ಕೊರತೆ ಇದೆ. ಚುನಾವಣೆಗೆಂದು ಊರಿಗೆ ತೆರಳಿದ್ದ ಕೆಲ ಕಾರ್ಮಿಕರು ಇನ್ನೂ ಕೆಲಸಕ್ಕೆ ಮರಳಿಲ್ಲ. ಇದರಿಂದ ಕಾಮಗಾರಿಯ ವೇಗಕ್ಕೆ ಹಿನ್ನಡೆಯಾಗಿದೆ.
ತ್ವರಿತ ಕಾಮಗಾರಿಗೆ ಒತ್ತಾಯ
ಕಾಮಗಾರಿ ಆರಂಭ ಹಂತ ದಿಂದಲೇ ಕುಂಟುತ್ತಾ ಸಾಗುತ್ತಲಿದೆ. ಪುಣ್ಯ ನದಿ ಕುಮಾರಧಾರಾಕ್ಕೆ ತೀರ್ಥ ಸ್ನಾನಕ್ಕೆ ತೆರಳುವವರು, ಶಾಲೆ- ಕಾಲೇಜುಗಳಿಗೆ ತೆರಳುವವರು ನಿಧಾನಗತಿಯ ಕಾಮಗಾರಿಯಿಂದ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ವೇಗದಲ್ಲಿ ಮುಂದುವರಿದರೆ ಈ ರಸ್ತೆ ಮುಕ್ತಾಯ ಹಂತಕ್ಕೆ ತಲುಪಲು ವರ್ಷಗಳೇ ಉರುಳಿದರೂ ಅಚ್ಚರಿ ಪಡಬೇಕಿಲ್ಲ. ಮಳೆಗಾಲ ಆರಂಭಗೊಂಡರೆ ಎಲ್ಲ ಕೆಲಸ ಕಾರ್ಯಗಳೂ ಸ್ಥಗಿತಗೊಳ್ಳಬಹುದು. ಕೆಲ ದಿನಗಳಲ್ಲೇ ಶಾಲೆ, ಕಾಲೇಜುಗಳು ಆರಂಭಗೊಳ್ಳಲಿವೆ. ಹಾಗಾಗಿ ಕಾಮಗಾರಿ ತ್ವರಿತಕ್ಕೆ ಸ್ಥಳೀಯರಿಂದ ಒತ್ತಾಯಗಳು ವ್ಯಕ್ತಗೊಂಡಿದೆ.
ರಸ್ತೆಗಳ ಅಭಿವೃದ್ಧಿ
2ನೇ ಹಂತದ ಕಾಮಗಾರಿಯಲ್ಲಿ 8.55 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ 68.60 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ 2.46 ಕಿ.ಮೀ ರಸ್ತೆ, ದೇವಸ್ಥಾನದ ಅ ಧೀನದಲ್ಲಿರುವ 5.14 ಕಿ.ಮೀ. ಮತ್ತು ಪಂ.ನ 581 ಮೀ. ಉದ್ದದ ರಸ್ತೆಗಳು ಸೇರಿವೆ.
ರಾಜಗೋಪುರದಿಂದ ಪೊಲೀಸ್ ಚೌಕಿ ಉದ್ದ 195 ಮೀ., ಕಾಶಿಕಟ್ಟೆಯಿಂದ ಪೊಲೀಸ್ ಚೌಕಿ ತನಕದ ಉದ್ದ 364 ಮೀ., ಕುಮಾರಧಾರೆಯಿಂದ ಕಾಶಿಕಟ್ಟೆ ತನಕದ 1089 ಮೀ. ಉದ್ದ, ಪೊಲೀಸ್ ಚೌಕಿಯಿಂದ ಪ್ರಶಾಂತ್ ರೆಸ್ಟೋರೆಂಟ್ ವರೆಗೆ 812 ಮೀ. ಉದ್ದದ ರಸ್ತೆಗಳು ಅಭಿವೃದ್ಧಿಯಾಗಲಿವೆ.
ದೇವಸ್ಥಾನಕ್ಕೆ ಹಸ್ತಾಂತರಗೊಂಡ ರಸ್ತೆಗಳು ಅಂದಾಜು 36.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ. ಪೊಲೀಸ್ ಚೌಕಿ ಕಾಶಿಕಟ್ಟೆ ನಡುವೆ 359 ಮೀ., ಅಕ್ಷರಾ ಗೆಸ್ಟ್ ಹೌಸ್ ಯಾಗ ಶಾಲೆ ನಡುವೆ 681 ಮೀ., ಯಾಗಶಾಲೆ ರಸ್ತೆ 124 ಮೀ, ಕಾಶಿಕಟ್ಟೆ-ಜನರಲ್ ಡಾರ್ಮಿಟರಿ ನಡುವೆ 124 ಮೀ., ಸ್ಕಂದಾಕೃಪಾ ಗೆಸ್ಟ್ ಹೌಸ್ ದೇವಸ್ಥಾನದ ಉತ್ತರ ಬಾಗಿಲು ವಿವಿಐಪಿ ಗೆಸ್ಟ್ ಹೌಸ್ ಎದುರು 259 ಮೀ., ರಾಜಗೋಪುರದಿಂದ ವಿವಿಐಪಿ ಗೆಸ್ಟ್ ಹೌಸ್ 265 ಮೀ., ಅರಳಿಕಟ್ಟೆಯಿಂದ ದೇವರಗದ್ದೆ ತನಕ 284 ಮೀ., ದೇವಸ್ಥಾನದ ಉತ್ತರ ಬಾಗಿಲಿನಿಂದ ಜನರಲ್ ಡಾರ್ಮಿಟರಿ ತನಕ 221 ಮೀ. ಉದ್ದ, ಜನರಲ್ ಡಾರ್ಮಿಟರಿ ಸಂಪರ್ಕ ರಸ್ತೆ 82 ಮೀ., ಇಂಜಾಡಿ ವಿವಿಐಪಿ ಕಟ್ಟಡದ ರಸ್ತೆ 2,583 ಮೀ. ಉದ್ದ ಸೇರಿ ಒಟ್ಟು 5,595 ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗಲಿದೆ.
ಕಂಬಗಳ ತೆರವೂ ಆಗಿಲ್ಲ
ಕುಮಾರಧಾರಾ-ಕಾಶಿಕಟ್ಟೆ ತನಕ ರಸ್ತೆ ಇಕ್ಕಟ್ಟಿನಿಂದ ಕೂಡಿದೆ. ಇಲ್ಲಿ ವಾಹನಗಳಿಗೆ ಸಂಚರಿಸಲು ಸಾಕಷ್ಟು ಜಾಗವಿಲ್ಲದೆ ಸಂಚಾರದ ವೇಳೆ ತುಂಬಾ ತೊಂದರೆ ಉಂಟಾಗುತ್ತಿದೆ. ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬ ತೆರವು ಪ್ರಗತಿಯಲ್ಲಿದ್ದರೂ ಕುಮಾರಧಾರಾ ಆರಂಭದ 3-4 ಕಂಬಗಳ ತೆರವು ಇನ್ನೂ ಆಗಿಲ್ಲ.
ವೇಗ ಹೆಚ್ಚಿಸಲು ಸೂಚನೆ
ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ನಿಗಾ ವಹಿಸುತ್ತಿದ್ದೇವೆ. ಕಾಮಗಾರಿ ವೇಗ ಹೆಚ್ಚಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
– ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಸುಬ್ರಹ್ಮಣ್ಯ ದೇವಸ್ಥಾನ
ಶೀಘ್ರ ಮುಗಿಸಲು ಶ್ರಮ
ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಆರಂಭಗೊಂಡಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದು ಅನಿವಾರ್ಯ. ಮಳೆ ಆರಂಭವಾಗುವುದರೊಳಗೆ ಆದಷ್ಟು ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುತ್ತಿದ್ದೇವೆ.
– ಶ್ರೀನಿವಾಸ, ಎಕ್ಸಿಕ್ಯೂಟಿವ್ ಎಂಜಿನಿಯರ್, ಪಿಡಬ್ಲ್ಯೂಡಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.