ಕೃಷಿಯಲ್ಲಿ ಸಾರ್ಥಕತೆ ಕಂಡ ಪ್ರಗತಿಪರ ಕೃಷಿಕ ವಲೇರಿಯನ್ ಅರಾನ್ಹಾ
9 ಎಕ್ರೆ ಭೂಮಿಯಲ್ಲಿ ಅಧಿಕ ಇಳುವರಿ ಪಡೆದ ಸಾಧಕ ರೈತ
Team Udayavani, Dec 31, 2019, 7:15 AM IST
ಹೆಸರು: ವಲೇರಿಯನ್ ಆರಾನ್ಹಾ
ಏನೇನು ಭತ್ತ, ಗೇರು, ಮಾವು, ಬಾಳೆ, ಕಾಳು ಮೆಣಸು, ತರಕಾರಿ ವಯಸ್ಸು: 84
ಕೃಷಿ ಪ್ರದೇಶ: 9 ಎಕ್ರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಮೂಲ್ಕಿ: ಇಲ್ಲಿನ ಚಿತ್ರಾಪು ಮತ್ತು ಕಿಲ್ಪಾಡಿ -ಕೆಂಚನಕೆರೆ ಈ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವವರು ವಲೇರಿಯನ್ ಅರಾನ್ಹಾ. ಇವರ ಈ ಅಪರೂಪದ ಸಾಧನೆಗೆ ಅವರ ಮಕ್ಕಳು ಕೂಡ ಕೈ ಜೋಡಿಸಿರುವುದು ವಿಶೇಷ.
ಇವರು ಸುಮಾರು 9 ಎಕ್ರೆಗೂ ಅಧಿಕ ಕೃಷಿ ಭೂಮಿಯಲ್ಲಿ ಭತ್ತ, ಗೇರು, ಮಾವು, ಬಾಳೆ, ಕಾಳುಮೆಣಸು, ತೆಂಗು, ಹಲಸು ಅಲ್ಲದೆ ವಿವಿಧ ಜಾತಿಯ ಹಣ್ಣುಗಳ ಮತ್ತು ಒಂದು ಗದ್ದೆ ಪೂರ್ತಿ ತರಕಾರಿಯನ್ನು ಬೆಳೆಯುತ್ತಾರೆ. 60 ವರ್ಷಗಳ ಸಾರ್ಥಕ ಕೃಷಿ ಬದುಕಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ. ಭತ್ತದ ಬೆಳೆಯಲ್ಲಿ ಎಣೆಲ್ ಒಂದೇ ಬೆಳೆಯುತ್ತಿರುವ ಇವರು ಗದ್ದೆಯಲ್ಲಿ ಜೋಳ, ಉದ್ದು, ಹುರುಳಿ ಮಾಡುತ್ತಾರೆ. ಕಿಲ್ಪಾಡಿಯಲ್ಲಿನ 3 ಎಕ್ರೆ ಪ್ರದೇಶದಲ್ಲಿ ಇತರರಿಗೆ ಮಾದರಿಯೆಂಬಂತೆ ಗೇರು ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಗೇರು ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆ
ಗೇರು ಹಣ್ಣಿನಿಂದ ಜ್ಯೂಸ್, ಪಲ್ಪ್, ಸಿರಾಫ್, ಜಾಮ್ ಮತ್ತು ಹಲ್ವ ತಯಾರಿಸಿ ಮಾರಾಟ ಮಾಡುತ್ತಾರೆ. ಪುತ್ರ ಕೆನ್ಯೂಟ್ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ, ಕಾಸರಗೋಡು ಜಿಲ್ಲೆಗಳಿಗೆ ಮಾರುಕಟ್ಟೆ ವಿಸ್ತರಿಸಿದ್ದಾರೆ.
ಕೃಷಿಗೆ ಮಕ್ಕಳ ಸಹಕಾರ
ವಲೇರಿಯನ್ ಅವರ ಮಕ್ಕಳಾದ ಕೆನ್ಯೂಟ್, ಕ್ಲಾರೆಟ್, ಡೋನೆಟ್ ಈ ಮೂವರು ತಂದೆಯ ಕೃಷಿಯಲ್ಲಿ ಕೈ ಜೋಡಿಸುತ್ತಾರೆ. ಕಿರಿಯ ಮಗ ಕ್ಲಾರೆಟ್ ಅವರು ದುಬಾೖನಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಇವರು ಭತ್ತದ ನಾಟಿ, ಕಟಾವು ಇಂತಹ ಸಂದರ್ಭಗಳಲ್ಲಿ ಕೆಲಸಕ್ಕೆ ರಜೆ ಹಾಕಿ ಊರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.
ಇವರು ಕೃಷಿಯಿಂದಾಗಿ ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇವರು ಯಾವುದೇ ಸಾಲವನ್ನು ಮಾಡಿಲ್ಲ. ಹಾಗೇಯೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಾಗ ಕೃಷಿಯಲ್ಲಿ ಯಶಸ್ವಿಯಾಗಹಬಹುದು ಎಂಬುದು ಇವರ ಅಭಿಪ್ರಾಯ. ಬಾಲ್ಯದ ದಿನಗಳಿಂದಲೂ ವಲೇರಿಯನ್ ಅವರು ಕೃಷಿಕರಾಗಿ ದುಡಿದು ತನ್ನ ಹೆಚ್ಚಿನ ಸಮಯವನ್ನು ಕಳೆದವರು. ಸಾಮಾಜಿಕವಾಗಿ ಸಹಕಾರ ಸಂಘ ಮತ್ತು ಚರ್ಚ್‌ನ ಆಡಳಿತ ವ್ಯವಸ್ಥೆಯಲ್ಲಿ ತನ್ನ ಸೇವೆಯನ್ನು ಮಾಡಿದ್ದಾರೆ. ಇವರ ಎಂಟು ಮಂದಿ ಮಕ್ಕಳಲ್ಲಿ ಮೂವರು ಗಂಡು ಮಕ್ಕಳ ಕೃಷಿಯ ಮೇಲಿನ ಆಸಕ್ತಿ ಇತರ ಯುವಕರಿಗೆ ಪ್ರೇರಣೆಯಾಗಿದೆ.
ಪ್ರಶಸ್ತಿ ಪುರಸ್ಕಾರಗಳು
2008ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. 2019ರಲ್ಲಿ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪಶುಸಂಗೋಪನೆ
ವಲೇರಿಯನ್ ಅವರು ಕೃಷಿಯ ಜತೆಗೆ ಪಶುಸಂಗೋಪನೆಗೆ ಮುಂದಾಗಿದ್ದು ಇವರ ಮನೆಯಲ್ಲಿ ದೇಶಿಯ ತಳಿಯ 7 ದನಗಳಿಂದ ದಿನಕ್ಕೆ ಸುಮಾರು 30ರಿಂದ 50 ಲೀ. ಹಾಲನ್ನು ಪಡೆಯುತ್ತಿದ್ದಾರೆ. ಜಾನುವಾರು ಸಾಕಣೆಗೆ ಇವರ ಮಾದರಿಗೆ ಸರಕಾರದಿಂದ 8 ಬಾರಿ ವಿವಿಧ ಪ್ರಶಸ್ತಿಗಳು ಕೂಡ ಅರಸಿಬಂದಿವೆ.
ಕೃಷಿಯಲ್ಲಿ ಕೀಟ ಬಾಧೆಯಂತಹ ಸಮಸ್ಯೆ ಬಂದಾಗ ಮಾತ್ರ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುತ್ತಾರೆ. ಇಲ್ಲದಿದ್ದರೆ ಇವರು ಸಾವಯವ ಗೊಬ್ಬರದಿಂದಲೇ ಕೃಷಿ ಮಾಡುತ್ತಾರೆ. ಯಂತ್ರಗಳ ಯುಗ ಇದಾಗಿರುವುದರಿಂದ ಗದ್ದೆ ಕೆಲಸಕ್ಕೆ ಕೋಣಗಳನ್ನು ಬಳಕೆ ಮಾಡುವುದು ಸ್ವಲ್ಪ ಕಡಿಮೆಯಾಗಿದೆ. ಕೃಷಿಯ ಕೆಲಸಗಳಿಗೆ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ವಲೇರಿಯನ್.
ಮೊಬೈಲ್ ಸಂಖ್ಯೆ: 9449209179
ಸರಕಾರ ಸವಲತ್ತುಗಳನ್ನು ಪಡೆಯಿರಿ
ಈ ಹಿಂದೆ ಕೃಷಿ ಬದುಕು ಕಷ್ಟಕರವಾಗಿದ್ದರೂ ಕೂಡ ಎಲ್ಲರೂ ಕೃಷಿಗೆ ಒತ್ತು ನೀಡುತ್ತಿದ್ದರು. ಆದರೆ ಇಂದು ಎಲ್ಲರೂ ಉದ್ಯೋಗ ಅರಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ. ಕೃಷಿಕರ ಸಂಖ್ಯೆ ಸ್ವಲ್ಪ ವಿರಳವಾಗುತ್ತಿದೆ. ಹಾಗಾಗಿ ಕೃಷಿ ಕಡೆ ಮುಖ ಮಾಡಬೇಕಿದೆ. ಸರಕಾರದ ಸವಲತ್ತುಗಳನ್ನು ಸದುಪಯೋಗಡಿಸಿಕೊಳ್ಳಬೇಕಿದೆ. ಕೃಷಿಯಲ್ಲಿ ಶ್ರಮ ವಹಿಸಿ ದುಡಿದರೆ ಯಶಸ್ಸು ನಮ್ಮದಾಗುತ್ತದೆ. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆಯಿಂದ ಹೆಚ್ಚಿನ ಲಾಭ ಗಳಿಸಬಹುದು.
-ವಲೇರಿಯನ್ ಆರಾನ್ಹಾ , ಕೃಷಿಕರು
ಎಂ. ಸರ್ವೋತ್ತಮ ಅಂಚನ್ ಮೂಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.