ಗರಿಷ್ಠ ಸೌಲಭ್ಯಗಳ ಶಾಲೆಗೀಗ ಆಂಗ್ಲ ಮಾಧ್ಯಮ ಶಿಕ್ಷಣದ ಗರಿ


Team Udayavani, May 23, 2019, 6:00 AM IST

s-15

ಬಡಗನ್ನೂರು: ಮೂರು ವರ್ಷಗಳ ಹಿಂದೆಯೇ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸುವ ಮೂಲಕ ಯಶಸ್ಸನ್ನು ಕಂಡ ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗಲಿದೆ. ಆಂಗ್ಲ ಮತ್ತು ಕನ್ನಡ ಮಾಧ್ಯಮ ಎರಡೂ ವಿಭಾಗಗಳೂ ಇರಲಿದ್ದು, ಹೆತ್ತವರು ತಮ್ಮ ಆಸಕ್ತಿಯ ಮೇರೆಗೆ ಮಕ್ಕಳನ್ನು ಆಂಗ್ಲ ಅಥವಾ ಕನ್ನಡ ಮಾಧ್ಯಮಕ್ಕೆ ಸೇರಿಸಬಹುದಾಗಿದ್ದು, ಮೇ 21ರಿಂದಲೇ 1ನೇ ತರಗತಿಗೆ ದಾಖಲಾತಿಗಳು ಆರಂಭಗೊಂಡಿವೆ.

ಶತಮಾನೋತ್ಸವ ಕಂಡ ಶಾಲೆ
ಮಾಟ್ನೂರು ಗ್ರಾಮಕ್ಕೆ ಒಳಪಟ್ಟಿರುವ ಈ ಶಾಲೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವು ಎನ್ನುವಲ್ಲಿ ಇದೆ. 1914ರಲ್ಲಿ ಸ್ಥಾಪನೆಗೊಂಡ ಕಾವು ಸರಕಾರಿ ಶಾಲೆ 2004ರಲ್ಲಿ ಶತಮಾನೋತ್ಸವ ಆಚರಿಸಿದೆ. ಶಾಲೆಯಲ್ಲಿ ಒಟ್ಟು 13 ಕೊಠಡಿಗಳಿದ್ದು, ಇದರಲ್ಲಿ 8 ಕ್ಲಾಸ್‌ ರೂಮ್‌ಗಳಿವೆ. ಭೋಜನ ಕೊಠಡಿ, ಗ್ರಂಥಾಲಯ, ಬಿಸಿಯೂಟದ ಕೊಠಡಿ ಇವೆ. ಶಾಲೆಗೆ 1.85 ಎಕ್ರೆ ಜಾಗವಿದ್ದು, ವಿಶಾಲವಾದ ಆಟದ ಮೈದಾನವಿದೆ. ಸರಕಾರಿ ಶಾಲೆಯನ್ನು ದತ್ತು ಪಡೆದುಕೊಂಡು, ರಾಜ್ಯದಲ್ಲೇ ಮಾದರಿಯಾಗಿಸಲು ಹೊರಟಿರುವ ಸಾಹಸ ಗಾಥೆ ಇಲ್ಲಿದೆ. ಇಲ್ಲಿ ಸರಾಸರಿ 250 ವಿದ್ಯಾರ್ಥಿಗಳಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಕ್ಲಾಸ್‌ಗಳನ್ನು ಆರಂಭ ಮಾಡಿದ ಹೆಗ್ಗಳಿಕೆ ಕಾವು ಸರಕಾರಿ ಶಾಲೆಗೆ ಸಲ್ಲಬೇಕಾಗಿದೆ. 2016ರಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಲಾಯಿತು. ಮೂರು ವರ್ಷಗಳಿಂದ ಸರಾಸರಿ 60 ಮಕ್ಕಳು 1ನೇ ತರಗತಿಗೆ ಭಡ್ತಿ ಹೊಂದುತ್ತಿದ್ದಾರೆ ಎನ್ನುತ್ತಾರೆ ಶಾಲಾ ಮುಖ್ಯಗುರು ಬಿ. ಹುಕ್ರಪ್ಪ ನಾಯ್ಕ…. ಅತ್ಯಂತ ಕನಿಷ್ಠ ಶುಲ್ಕದೊಂದಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್.ಕೆ.ಜಿ. ಯು.ಕೆ.ಜಿ. ತರಗತಿಗಳ ನಿರ್ವಹಣೆಗಾಗಿಯೇ ಇಬ್ಬರು ಶಿಕ್ಷಕಿಯರು ಹಾಗೂ ಓರ್ವ ಸಹಾಯಕಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ಆಂಗ್ಲ ಮಾಧ್ಯಮ
ಕಾವು ಸರಕಾರಿ ಶಾಲೆಯಲ್ಲಿ 2019ರ ಜೂನ್‌ನಿಂದಲೇ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗಲಿದೆ. ಸರಕಾರದ ನಿಯಮದಂತೆ ತಾಲೂಕಿನ 9 ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಿಕ್ಷಣ ಆರಂಭವಾಗಲಿದ್ದು, ಅದರಲ್ಲಿ ಕಾವು ಸರಕಾರಿ ಶಾಲೆಯೂ ಒಂದು. ಶಾಲೆಯಲ್ಲಿ ಒಟ್ಟು 9 ಶಿಕ್ಷಕರಿದ್ದು, ಬ್ಬರು ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ವಿಶೇಷ ತರಬೇತಿಯೂ ನಡೆಯುತ್ತಿದೆ.

ಪ್ರಸಕ್ತ ವರ್ಷದಿಂದಲೇ ಹವಾ ನಿಯಂತ್ರಿತ ಸ್ಲಾರ್ಟ್‌ ಕ್ಲಾಸ್‌ ರೂಮ್‌ ಆರಂಭವಾಗಲಿದೆ. ಎಂಆರ್‌ಪಿಎಲ್‌ ವತಿಯಿಂದ ನಿರ್ಮಿಸಿಕೊಟ್ಟ ಅತ್ಯಾಧುನಿಕ ಸುಸಜ್ಜಿತ ಶೌಚಾಲಯವೂ ಜೂನ್‌ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ರಂಗ ಮಂದಿರ ನಿರ್ಮಾಣ, ಹೊಸ ಕಟ್ಟಡಗಳ ನಿರ್ಮಾಣ ಯೋಜನೆಗಳಿವೆ.

ದತ್ತು ಸ್ವೀಕಾರ
ಕಾವು ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಕಾವು ಹೇಮನಾಥ ಶೆಟ್ಟಿ ಮೂರು ವರ್ಷಗಳ ಹಿಂದೆ ಕಾವು ಶಾಲೆಯನ್ನು ದತ್ತು ಸ್ವೀಕರಿಸಿದರು. ಆ ಬಳಿಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇವರ ಮುತುವರ್ಜಿಯಲ್ಲೇ ಎಲ….ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಆರಂಭಿಸಲಾಯಿತು. ಹೇಮನಾಥ ಶೆಟ್ಟಿಯವರ ಪತ್ನಿ, ಜಿ.ಪಂ. ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ಶಾಲೆಗೆ ಹಲವು ಅನುದಾನಗಳನ್ನು ಒದಗಿಸಿಕೊಟ್ಟಿದ್ದಾರೆ. ಕಾವು ಶ್ರೀ ಲಕ್ಷ್ಮೀಮಾಧವ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಪಾವನರಾಮ ಅವರು ಎಲ್ಲ ತರಗತಿಗಳಿಗೆ ಧ್ವನಿವರ್ಧಕ, ಲ್ಯಾಪ್‌ಟಾಪ್‌ ಕೊಡುಗೆಯಾಗಿ ನೀಡಿದ್ದಾರೆ. ಕ್ರಿಯಾಶೀಲ ಶಿಕ್ಷಕರ ಕರ್ತವ್ಯ ಪ್ರಜ್ಞೆ, ಶಾಲಾಭಿವೃದ್ಧಿ ಸಮಿತಿ ಸಹಕಾರ, ದಾನಿಗಳು, ವಿದ್ಯಾರ್ಥಿಗಳು ಹಾಗೂ ಹೆತ್ತವರ ಉತ್ತೇಜನದಿಂದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಷ್ಟು ಸೌಲಭ್ಯಗಳನ್ನು ಪಡೆದುಕೊಂಡಿದೆ.

ಶಾಲಾ ಸೌಲಭ್ಯಗಳು
1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ, ಎಂಆರ್‌ಪಿಎಲ್‌ ಕೊಡುಗೆಯ ಅತ್ಯಾಧುನಿಕ ಸುಸಜ್ಜಿತ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ವಿಶಾಲವಾದ ಆಟದ ಮೈದಾನ, ವಾಚನಾಲಯ, ಸೌರವಿದ್ಯುತ್‌ ಘಟಕ, ಬಯೋಗ್ಯಾಸ್‌ ಘಟಕ, ಸುಸಜ್ಜಿತವಾದ ಭೋಜನ ಶಾಲೆ, ಎಲ್‌.ಕೆ.ಜಿ., ಯು.ಕೆ.ಜಿ. ತರಗತಿ, ಹವಾ ನಿಯಂತ್ರಿತ ಸ್ಮಾರ್ಟ್‌ ಕ್ಲಾಸ್‌ರೂಮ…, ಪ್ರಯೋಗ ಸಲಕರಣೆಗಳು, ಆಟೋಟ ಸಾಮಗ್ರಿಗಳು ಇತ್ಯಾದಿ ಸೌಲಭ್ಯಗಳಿವೆ.

ಸ್ಪರ್ಧೆಗೆ ಇಳಿದಿಲ್ಲ
ನಾವು ಯಾರ ಜತೆಯೂ ಸ್ಪರ್ಧೆಗೆ ಇಳಿದಿಲ್ಲ. ಸರಕಾರಿ ಶಾಲೆಯನ್ನು ರಾಜ್ಯದv ಮಾದರಿಯಾಗಿ ಮಾಡಬೇಕೆಂಬ ಊರಿನವರ ಕನಸಿಗೆ ಬೆಂಬಲ ನೀಡುತ್ತಿದ್ದೇನೆ. ಶ್ರೀಮಂತರ ಮಕ್ಕಳಷ್ಟೇ ಇಂಗ್ಲಿಷ್‌ ಕಲಿತರೆ ಸಾಕೇ? ಕೂಲಿ ಕಾರ್ಮಿಕನ ಮಕ್ಕಳೂ ಆಂಗ್ಲಭಾಷೆ ಕಲಿಯಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ವಿದ್ಯಾದಾನ ನಡೆಯುತ್ತಿದೆ.
 - ಕಾವು ಹೇಮನಾಥ ಶೆಟ್ಟಿ, ಶಾಲೆಯನ್ನು ದತ್ತು ಪಡೆದವರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.