ಶಾಲೆ ಬಳಿ ಹೈಟೆನ್ಶನ್ ವೈರ್: ಗ್ರಾಮಸ್ಥರ ಆಕ್ರೋಶ
Team Udayavani, Jan 7, 2018, 12:12 PM IST
ಜೋಕಟ್ಟೆ: ಮಂಗಳೂರು ತಾಲೂಕು ಜೋಕಟ್ಟೆ ಗ್ರಾಮ ಪಂಚಾಯತ್‌ನ 2017-18ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪ್ರಸಿಲ್ಲಾ ಮೊಂತೆರೋ ಅವರ ಅಧ್ಯಕ್ಷತೆಯಲ್ಲಿ ಜೋಕಟ್ಟೆ ಆಯುಷ್ ಆಸ್ಪತ್ರೆಯ ಸಭಾ ಭವನದಲ್ಲಿ ಜರಗಿತು.
ನೋಡೆಲ್ ಅಧಿಕಾರಿಯಾಗಿ ಮಂಗಳೂರು ಉತ್ತರದ ಕ್ಷೇತ್ರ ಶಿಕ್ಷಣಾಧಿಕಾರಿ ಉಸ್ಮಾನ್ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಸಂಗ್ರಹಕರು ಪ್ರತಿ ತಿಂಗಳ 10ನೇ ತಾರೀಕಿನಂದು ಗ್ರಾ.ಪಂ. ಗೆ ಬಂದು ಬಿಲ್ ಮೊತ್ತ ಸಂಗ್ರಹಿಸಿದರೂ ಕೂಡ ಅನಂತರದ ಬಿಲ್ಲಿನಲ್ಲಿ ಪಾವತಿಸಿದ ಮೊತ್ತ ಬಾಕಿಯಾಗಿ ಬರುತ್ತಿರುವ ಬಗ್ಗೆ ಮತ್ತು ಮೀಟರ್ ಗಣಾಂಕವನ್ನು ನೋಡದೆ ಮೀಟರ್ ರೀಡರ್ ಬೇಕಾಬಿಟ್ಟಿ ವಿದ್ಯುತ್ ಬಿಲ್ ನೀಡುವ ಬಗ್ಗೆ ಮತ್ತು ಕೆ.ಪಿ.ಟಿ.ಸಿ.ಎಲ್‌ರವರು ಶಾಲೆಯ ಬಳಿ ಇರುವ ಹೈಟೆನ್ಶನ್ ವಿದ್ಯುತ್ ಟವರ್ ಬದಲಾಯಿಸಿ ಅದೇ ಜಾಗದಲ್ಲಿ ಅಳವಡಿಸುವ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದರು.
ಕಾರ್ಯದರ್ಶಿ ಲೋಕನಾಥ್ ಭಂಡಾರಿ ವರದಿ ಮಂಡಿಸಿದರು. ಪಿಡಿಒ ಹಸನಬ್ಬ ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಶಂಶು ಇದಿನಬ್ಬ, ಫರ್ವೀಝ್ ಆಲಿ, ಎ.ಕೆ. ಅಶ್ರಫ್, ಸುರೇಂದ್ರ, ರವೀಂದ್ರ, ಪಾರ್ವತಿ ಪ್ರಕಾಶ್, ಯಮುನಾ, ಸುಲೋಚನಿ, ಅಬೂಬಕ್ಕರ್, ಜೋಕಟ್ಟೆ ಅಬ್ದುಲ್ ಖಾದರ್ ಮತ್ತು ತಾ.ಪಂ. ಸದಸ್ಯರಾದ ಬಶೀರ್ ಅಹ್ಮದ್ ಹಾಗೂ ಗ್ರಾ.ಪಂ. ಸಿಬಂದಿ ಕೆ.ಎ. ಅಹಮ್ಮದ್ ಬಾವ, ಮಹಮ್ಮದ್ ಬಶೀರ್, ರೇಣುಕಾ, ಚೈತ್ರಾ, ಅಭಿಲಾಷ್ ಮೊದಲಾದವರು ಉಪಸ್ಥಿತರಿದ್ದರು.
ಇಲಾಖೆಗಳ ಬಗ್ಗೆ ಮಾಹಿತಿ
62ನೇ ತೋಕೂರು ಗ್ರಾಮದ ವ್ಯಾಪ್ತಿಯು ಮಾಡಿಲ ಸೇತುವೆಯ ಬಳಿಯಲ್ಲಿ ಪ್ರಾರಂಭವಾಗುವ ಪ್ರವೇಶ ದ್ವಾರದಲ್ಲಿ ಗ್ರಾಮಕರಣಿಕರು ಗಡಿ ಗುರುತಿಸಿ ಕೊಟ್ಟರೆ ಅಲ್ಲಿ ಗ್ರಾ.ಪಂ.ಗೆ ಸಂಬಂ ಧಿಸಿದ ಒಂದು ಸ್ವಾಗತ ನಾಮಫಲಕವನ್ನು ಅಳವಡಿಸಿ ನಾಮಫಲಕದಿಂದ ಈಚೆಗೆ ಹೊರಗಿನವರು ಯಾರೂ ತ್ಯಾಜ್ಯ ಹಾಕಬಾರದೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಗ್ರಾಮಸ್ಥರು ಸಲಹೆ ನೀಡಿದರು. ವಿವಿಧ ಇಲಾಖೆಗಳಾದ ಕೃಷಿ, ಮೆಸ್ಕಾಂ, ಕಂದಾಯ, ಆಯುಷ್, ಪಶುಸಂಗೋಪನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇವೇ ಮುಂತಾದ ಇಲಾಖಾಧಿ ಕಾರಿಗಳು ತಮ್ಮ ಇಲಾಖೆಗಳಿಂದ ಗ್ರಾಮಸ್ಥರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸೌಲಭ್ಯ ಸಿಗದೆ ತೊಂದರೆ
ಮೈಂದಗುರಿಯ ಡಿ.ಸಿ. ಮನ್ನಾ ಜಾಗವನ್ನು ನಿವೇಶನ ರಹಿತರಿಗೆ ಮಾತ್ರ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮಸ್ಥರು ಗ್ರಾಮಕರಣಿಕರನ್ನು ಒತ್ತಾಯಿಸಿದರು. ಸರಕಾರದಿಂದ ಸಿಗುವ ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನಗಳು ಮಂಜೂರಾಗಿದ್ದರೂ ಕೂಡ ಫಲಾನುಭವಿಯ ಕೈಗೆ ಸಿಗದೆ ವಿಳಂಬವಾಗುತ್ತಿರುವ ಬಗ್ಗೆ ಬೈಕಂಪಾಡಿ ಅಂಚೆ ಕಚೇರಿಯಲ್ಲಿ ವಿಚಾರಿಸಿದರೆ ಸಾಫ್ಟ್‌ವೇರ್ ತೊಂದರೆ ಇದೆ ಎಂದು ಅಲ್ಲಿಯ ಅಂಚೆಪಾಲಕರು 2 ತಿಂಗಳಿನಿಂದ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಈ ಬಗ್ಗೆ ಪಾಂಡೇಶ್ವರದ ಪ್ರಧಾನ ಅಂಚೆ ಕಚೇಯ ಸೀನಿಯರ್ ಪೋಸ್ಟ್ ಮಾಸ್ಟರ್‌ರಿಗೆ ದೂರು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.