ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿ; ಸಂಚಾರ ದುಸ್ತರ


Team Udayavani, Aug 13, 2021, 3:20 AM IST

ಅರ್ಧಕ್ಕೆ ನಿಂತ ಹೆದ್ದಾರಿ ಕಾಮಗಾರಿ; ಸಂಚಾರ ದುಸ್ತರ

ತೆಂಕಎಡಪದವು ಗ್ರಾಮ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿ ಚರಂಡಿ ಇಲ್ಲದೇ ಇರುವುದರಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಲ್ಲದೇ ಗ್ರಾಮವು ವಿವಿಧ ಮೂಲ ಸೌಲಭ್ಯಗಳನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸಲು ಮುಂದಾಗಬೇಕಿದೆ. ಸಂಬಂಧಪಟ್ಟವರನ್ನು ಗಮನಸೆಳೆಯಲು “ಉದಯವಾಣಿ ಸುದಿನ’ವು ಒಂದು ಊರು-ಹಲವು ದೂರು ಸರಣಿಯ ಮೂಲಕ ಪ್ರಯತ್ನಿಸಲಾಗಿದೆ.

ಕೈಕಂಬ: ತೆಂಕ ಎಡಪದವು ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತದೆ. ಆದರೆ ಮಳೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿಯೇ ಮಳೆ ನೀರು ಹರಿದು ಹೋಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.

9.62 ಕೋ.ರೂ. ಅನುದಾನದಲ್ಲಿ ಎಡಪದವು ಕುಪ್ಪೆಪದವು-ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿಯ 4ನೇ ಹಂತದ ಅಭಿವೃದ್ಧಿ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಕಳೆದ ವರ್ಷದ ಆ. 24ರಂದು ಕಾಮಗಾರಿಯ ಗುದ್ದಲಿಪೂಜೆ ನಡೆದಿತ್ತು. ಎಡಪದವು-ಕುಪ್ಪೆಪದವು- ಮುತ್ತೂರು ತನಕ 7.40 ಕಿ.ಮೀ. ಡಾಮರು ಕಾಮಗಾರಿ ಹಾಗೂ 5.50ಮೀ. ನಿಂದ ರಸ್ತೆಯ 7ಮೀ. ನವರೆಗೆ ವಿಸ್ತರಣೆಯಾಗಬೇಕಿತ್ತು. ಅದರೆ ಎಡಪದವಿನಿಂದ ಪದ್ರೆಂಗಿ ತನಕ ವಿಸ್ತರಣೆ ಕಾಮಗಾರಿ ನಡೆದು ಜಲ್ಲಿಕಲ್ಲು ಹಾಕಲಾಗಿದೆ. ಬಳಿಕ ಮುಂದೆ ಕಾಮಗಾರಿಯೇ ನಡೆದಿಲ್ಲ. ಜಲ್ಲಿಕಲ್ಲು ಮಳೆಗೆ ಕೊಚ್ಚಿ ಹೋಗಿದ್ದು, ವಾಹನಗಳ ಸಂಚಾರಕ್ಕೆ ರಸ್ತೆಯೂ ಅಪಾಯಕಾರಿಯಾಗಿದೆ. ಕಳೆದ 6 ತಿಂಗಳಿನಿಂದ ಯಾವುದೇ ಕಾಮಗಾರಿ ನಡೆದಿಲ್ಲ.

ರಾಷ್ಟ್ರೀಯ ಹೆದ್ದಾರಿ 169ಗೆ ಕುಪ್ಪೆಪದವಿನ ರಾಜ್ಯ ಹೆದ್ದಾರಿಯು ಎಡಪದವು ಪೇಟೆಯಲ್ಲಿ ಸಂಪರ್ಕಿಸುತ್ತದೆ. ಆದರೆ ಆ ಪ್ರದೇಶದ ಅಗಲ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ.

ತೆಂಕಎಡಪದವು ಗ್ರಾಮ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿ ಚರಂಡಿ ಇಲ್ಲದೇ ಇರುವುದರಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಲ್ಲದೇ ಗ್ರಾಮವು ವಿವಿಧ ಮೂಲ ಸೌಲಭ್ಯಗಳನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸಲು ಮುಂದಾಗಬೇಕಿದೆ. ಸಂಬಂಧಪಟ್ಟವರನ್ನು ಗಮನಸೆಳೆಯಲು “ಉದಯವಾಣಿ ಸುದಿನ’ವು ಒಂದು ಊರು-ಹಲವು ದೂರು ಸರಣಿಯ ಮೂಲಕ ಪ್ರಯತ್ನಿಸಲಾಗಿದೆ.

ಸರಕಾರಿ ಸವಲತ್ತುಗಳು ಕಡಿಮೆ :

ಎಡಪದವು ಪೇಟೆಯಾದರೂ ಹೆಚ್ಚಿನ ಜನಸಂಖ್ಯೆ ಇದ್ದರೂ ಕೂಡ ಇಲ್ಲಿ ಯಾವುದೇ ಸರಕಾರಿ ಸೌಕರ್ಯ ಪಡೆಯಬೇಕಾದರೆ ಬೇರೆ ಗ್ರಾಮವನ್ನು ಆಶ್ರಯಿಸಬೇಕಾಗಿದೆ. ಕುಪ್ಪೆಪದವು, ಕೊಂಪದವು, ಗಂಜಿಮಠಗಳಲ್ಲಿ ಪ್ರಾ.ಆ. ಕೇಂದ್ರ ಇದ್ದು ಅದನ್ನೇ ನಂಬಿ ಇರಬೇಕು. ದಾದಿಯ ಉಪಕೇಂದ್ರ ಮಾತ್ರ ಇದೆ. ಅಲ್ಲಿ ದಾದಿಯರೇ ಇಲ್ಲ. ಪಶು ವೈದ್ಯಕೀಯ ಚಿಕಿತ್ಸೆ ಕೇಂದ್ರ, ಮೊರಾರ್ಜಿ ವಸತಿ ಕೇಂದ್ರ, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಇಲ್ಲದಿರುವ ಕಾರಣ ಪಕ್ಕದ ಗ್ರಾಮಗಳನ್ನು ನಂಬಿಬೇಕಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಇಲ್ಲ ದೇ ಕಾರಣ ಉನ್ನತ ಶಿಕ್ಷಣಕ್ಕೆ ಮೂಡುಬಿದಿರೆ ಅಥವಾ ಮಂಗಳೂರಿಗೆ ತೆರಳಬೇಕಾಗಿದೆ.

ಇತರ ಸಮಸ್ಯೆಗಳೇನು? :

ಜ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರಣ ಹೇಳಿ ಹಲವು ವರ್ಷಗಳಾಗುತ್ತಾ ಬಂದಿದೆ. ಆದರೆ ಇನ್ನು ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಪೇಟೆಯಲ್ಲಿ ಹೆಚ್ಚು ಖಾಸಗಿ ಸ್ಥಳ ಇರುವುದರಿಂದ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ

  • ಬಸ್‌ ನಿಲ್ದಾಣ ಹಾಗೂ ಪ್ರಯಾಣಿಕರ ತಂಗುದಾಣವೂ ಸಮರ್ಪಕವಾಗಿ ಇಲ್ಲ. ರಸ್ತೆಯಲ್ಲಿಯೇ ಪ್ರಯಾಣಿಕರು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ
  • ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
  • ಕೃಷಿ ಮಾರುಕಟ್ಟೆ ಇದ್ದರೂ ಅದು ಉಪಯೋಗಕ್ಕೆ ಇಲ್ಲದಂತಾಗಿದೆ. ಈ ಬಗ್ಗೆ ಗಮನಹರಿಸಿ ರೈತರಿಗೆ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ.
  • ಎಡಪದವು -ಒಡೂxರು -ಗಂಜಿಮಠ ಸಂಪರ್ಕಿಸುವ ರಸ್ತೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ ಆಗಬೇಕೆಂಬುದು ಸ್ಥಳೀಯರ ಬೇಡಿಕೆ.
  • ಕೋರ್ಡೆಲ್‌ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಹೊಸ ಕೊಳವೆ ಬಾವಿಯಲ್ಲೂ ನೀರಿಲ್ಲ. ಸುಮಾರು 40 ರಷ್ಟು ಕೊಳವೆ ಬಾವಿ, 6 ಸರಕಾರಿ ಬಾವಿಗಳಿವೆ.
  • ಮಾಡಪಾಡಿ-ಕೋರ್ಡೆಲ್‌ಗೆ ಸಂಪರ್ಕಕ್ಕೆ ಬಸ್‌ ವ್ಯವಸ್ಥೆಯೇ ಇಲ್ಲ. ಕಣ್ಣೋರಿ- ಕೊಂಪದವು ಇಲ್ಲಿಗೆ ಬಸ್‌ನ ವ್ಯವಸ್ಥೆ ಆಗಬೇಕಿದೆ.
  • ಪೂಪಾಡಿಕಲ್ಲು ಪ್ರದೇಶಕ್ಕೆ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ.
  • ಮನೆ ನಿವೇಶನಕ್ಕೆ 400 ಅರ್ಜಿಗಳು ಬಂದಿವೆ. ಮಾಡಪಾಡಿಯಲ್ಲಿ 2 ಎಕರೆ ಜಾಗ ಮನೆ ನಿವೇಶನಗಳ ನೀಡಿಕೆಗೆ ಜಾಗ ಕಾದಿರಿಸಲಾಗಿದೆ. ಪದ್ರೆಂಗಿಯಲ್ಲಿ 4 ಎಕರೆ ಜಾಗವನ್ನು ಸರ್ವೆಗೆ ಕಳುಹಿಸಲಾಗಿದೆ. 94ಸಿಸಿಯಲ್ಲಿ 4 ಮನೆೆಗಳಿಗೆ ಹಕ್ಕು ಪತ್ರ ನೀಡಲು ಬಾಕಿ ಇದೆ.
  • ತ್ಯಾಜ್ಯ ಘಟಕಕ್ಕೆ ಕಣ್ಣೋರಿಯಲ್ಲಿ 1ಎಕರೆ ಜಾಗದಲ್ಲಿ ತ್ಯಾಜ್ಯ ಘಟಕ ಸಿದ್ಧಗೊಂಡಿದೆ. ವಿಲೇವಾರಿಗೆ ವಾಹನ ತರಲು ಬಾಕಿ ಇದೆ.

 

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Lawrence Bishnoi’s brother Anmol Bishnoi arrested in America

Anmol Bishnoi: ಅಮೆರಿಕದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಬಂಧನ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Siddu–kanaka

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Untitled-1

Kasaragod: ಅಪರಾಧ ಸುದ್ದಿಗಳು

Shirva1

Shirva: ಹಿಂದೂ ಜೂನಿಯರ್‌ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.