ಪಾದಯಾತ್ರೆಗೆ ನೆರವು ವಿಚಾರ; ಸಂಸದರಿಗೆ ರೈ ಸವಾಲು
Team Udayavani, Jan 29, 2019, 12:50 AM IST
ಮಂಗಳೂರು: ದ.ಕ. ಜಿಲ್ಲೆಯ ಹೆದ್ದಾರಿ ಕಾಮಗಾರಿ ವಿಳಂಬ ವಿಚಾರದಲ್ಲಿ ಕಾಂಗ್ರೆಸ್ ಗುತ್ತಿಗೆದಾರರ ನೆರವು ಪಡೆದು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾಡಿದ ಆರೋಪ ಸಾಬಿತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿ ಸು ವುದಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ. ಇಲ್ಲದಿದ್ದರೆ ಅವರು ರಾಜಕೀಯ ನಿವೃತ್ತರಾಗಲು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸೋಮವಾರ ತಲಪಾಡಿಯಿಂದ ಪಂಪ್‌ವೆಲ್ ತನಕ ಅಪೂರ್ಣ ಹೆದ್ದಾರಿ ಮತ್ತು ಮೇಲ್ಸೇತುವೆ ಕಾಮಗಾರಿಯ ಅವ್ಯವಸ್ಥೆಯನ್ನು ಖಂಡಿಸಿ ನಡೆದ ಬೃಹತ್ ಕಾಲ್ನಡಿಗೆಯ ಸಮಾ ರೋಪ ಪಂಪ್‌ವೆಲ್‌ನಲ್ಲಿ ಜರಗಿತು. ಈ ವೇಳೆ ಅವರು ಮಾತನಾಡಿದರು.
ತೊಕ್ಕೊಟ್ಟು , ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಳಿಸಲು ಸಂಸದರಿಂದ ಸಾಧ್ಯವಾಗುತ್ತಿಲ್ಲ. ಗುಂಡ್ಯ- ಬಿ.ಸಿ.ರೋಡ್ ಕಾಂಕ್ರಿಟ್ ಕಾಮಗಾರಿ ಸ್ಥಗಿತಗೊಂಡ ವಿಚಾರ ಸಂಸದರಿಗೆ ಗೊತ್ತಾದದ್ದೇ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡ ಅನಂತರ. ಹೆ. ಕಾಮಗಾರಿ ವಿಳಂಬಕ್ಕೆ ಭೂಸ್ವಾಧೀನ ವಿಳಂಬ ಎಂದು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಆರೋಪಿಸಿದರು.
ಪಂಪ್‌ವೆಲ್ ಮೇಲ್ಸೇತುವೆ ದಶಮಾನೋತ್ಸವ!
ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಹೆದ್ದಾರಿ ಕಾಮಗಾರಿ ಮತ್ತು ಮೇಲ್ಸೇತುವೆ ಕೆಲಸ ನಡೆಸುವ ಗುತ್ತಿಗೆ ಕಾರ್ಮಿಕರಿಗೆ 10 ತಿಂಗಳಿಂದ ವೇತನ ಸಿಕ್ಕಿಲ್ಲ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಗೆ ದಶಮಾನೋತ್ಸವ ನಡೆ ಯುತ್ತಿದೆ ಎಂದರು.
ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿ
ಸಚಿವ ಯು.ಟಿ. ಖಾದರ್ ಮಾತನಾಡಿ, ಚುನಾವಣೆಯ ಅಧಿಕೃತ ದಿನಾಂಕಕ್ಕಾಗಿ ಕಾಯದೆ, ಈಗಲೇ ಚುನಾವಣೆ ಘೋಷ ಣೆಯಾಗಿದೆ ಎಂದು ಭಾವಿಸಿ ಕಾರ್ಯಕರ್ತರು ಕೇಂದ್ರ ಸರಕಾರದ ಜನವಿರೋಧಿ ನೀತಿ ಬಗ್ಗೆ ಪ್ರಚಾರ ಕಾರ್ಯ ನಡೆಸಬೇಕು. ಮತದಾರರ ಪಟ್ಟಿಯನ್ನು ತತ್‌ಕ್ಷಣವೇ ಪರಿಶೀಲನೆ ನಡೆಸಿ ಮತದಾರರ ಹೆಸರು ಬಿಟ್ಟು ಹೋಗಿರುವ ಬಗ್ಗೆ ಖಾತರಿಪಡಿಸಿ ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ಮುಖಂಡ ಗಣೇಶ್, ವಿ.ಪ. ಸದಸ್ಯ ಹರೀಶ್ ಕುಮಾರ್ ಮಾತನಾಡಿದರು. ಮಮತಾ ಗಟ್ಟಿ, ವಿಶ್ವಾಸ್‌ದಾಸ್, ಶಾಲೆಟ್ ಪಿಂಟೋ, ಕಣಚೂರು ಮೋನು, ಧನಂಜಯ ಅಡ³ಂಗಾಯ, ಸಂತೋಷ್ ಕುಮಾರ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಕರೀಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಸಾಹುಲ್ ಹಮೀದ್, ಇಬ್ರಾಹಿಂ ಕೋಡಿಜಾಲ್, ಡಾ| ರಘು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.