landslide ತೆಂಕಿಲದಲ್ಲಿ ಮಾಣಿ-ಮೈಸೂರು ಹೆದ್ದಾರಿಗೆ ಗುಡ್ಡ ಕುಸಿತ
Team Udayavani, Aug 2, 2024, 5:04 PM IST
ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆ, ಮಡ್ಯಂಗಲದಲ್ಲಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ಅಡಚಣೆ ಉಂಟಾದ ಎರಡೇ ದಿನದ ಅಂತರದಲ್ಲಿ ತೆಂಕಿಲದಲ್ಲಿಯು ಗುಡ್ಡ ಕುಸಿದು ಹೆದ್ದಾರಿ ಸಂಚಾರ ಬಂದ್ ಆಗಿದ್ದು ಪರ್ಯಾಯ ರಸ್ತೆಯನ್ನು ಬಳಸಲಾಗಿದೆ.
ಆ.2 ರಂದು ನಸುಕಿನ ಜಾವ ಏಕಾಏಕಿ ಗುಡ್ಡ ಕುಸಿದಿದೆ. ಕಳೆದ ಕೆಲ ದಿನಗಳ ಹಿಂದೆಯೂ ಇಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಖಾಸಗಿ ಜಮೀನು ಇದಾಗಿದೆ. ಅತಿ ಎತ್ತರ ಹೊಂದಿರುವ ಗುಡ್ಡವಾಗಿದ್ದು ಶುಕ್ರವಾರ ಕುಸಿತಗೊಂಡ ಸ್ಥಳದ ಆಸುಪಾಸಿನಲ್ಲಿ ಮತ್ತೆ ಕುಸಿಯುವ ಸಾಧ್ಯತೆ ಕಂಡು ಬಂದಿದೆ. ಕೆಲ ಮರಗಳು ಬುಡ ಸಹಿತ ರಸ್ತೆಗೆ ಉರುಳುವ ಆತಂಕ ಉಂಟಾಗಿದೆ.
ರಸ್ತೆ ಬಂದ್ ಮಾಡಿ
ಮಣ್ಣು ತೆರವು
ಮೂರು ಜೆಸಿಬಿಗಳ ಮೂಲಕ ಬೆಳಗ್ಗಿನಿಂದ ಕಾರ್ಯಾಚರಣೆ ನಡೆಸಲಾಯಿತು. ಅಪರಾಹ್ನ 3 ಗಂಟೆ ಹೊತ್ತಿಗೆ ಮಣ್ಣು ತೆರವು ಪೂರ್ಣಗೊಂಡಿದ್ದು ರಸ್ತೆಯನ್ನೇ ಟ್ಯಾಂಕರ್ ಮೂಲಕ ನೀರು ಹರಿಸಿ ಕೆಸರನ್ನು ತೆರವು ಮಾಡಲಾಗಿದೆ. ಅನಂತರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಎರಡು ಭಾಗಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಪೇಟೆ ಮೂಲಕ ಸಂಚಾರ
ಹೆದ್ದಾರಿ ಬಂದ್ ಆದ ಕಾರಣ ಪರ್ಯಾಯವಾಗಿ ನಗರದ ರಸ್ತೆಗಳ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಗಳೂರು ಭಾಗದಿಂದ ಬಂದ ವಾಹನಗಳು ಬೊಳುವಾರು, ಜೈನರಭವನದ ರಸ್ತೆ ಮೂಲಕ ಪತ್ರಾವೋ ಸರ್ಕಲ್ನಲ್ಲಿ ಹೆದ್ದಾರಿಯನ್ನು ಸೇರಿತು. ಸುಳ್ಯ ಭಾಗದಿಂದ ಬಂದ ವಾಹನಗಳು ಕೂಡ ಅದೇ ರಸ್ತೆಯ ಮೂಲಕ ತೆರಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.