ಸಮಾಜದ ಹಿತಚಿಂತನೆಯಿಂದ ದೇವರ ಅನುಗ್ರಹ: ಪರ್ತಗಾಳಿ ಶ್ರೀ
Team Udayavani, Mar 8, 2017, 11:17 AM IST
ಮಂಗಳೂರು: ನಮ್ಮ ಎಲ್ಲ ನಡೆ ನುಡಿಗಳು ಸಮಾಜದ ಹಿತಚಿಂತನೆಯಿಂದ ಕೂಡಿರಬೇಕು. ಆಗ ದೇವರ ಅನುಗ್ರಹ ಪ್ರಾಪ್ತವಾಗು
ತ್ತವೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಅವರು ಶ್ರೀ ವೀರ ವಿಟಲ ದೇವರ 357ನೇ ವರ್ಧಂತಿ ಉತ್ಸವ ಮತ್ತು ಪೂರ್ಣಪ್ರಜ್ಞ ವಸತಿ ನಿಲಯದ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಶ್ರೀ ಮಠದ ಮಂಗಳೂರು ಮಠದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಉತ್ತಮ ಆಚಾರ, ವಿಚಾರ ಧಾರ್ಮಿಕತೆಯಿಂದ ಕೂಡಿದ ಸಂಸ್ಕಾರಯುತ ಬದುಕಿನಿಂದಾಗಿ ಜೀವನದಲ್ಲಿ ಧನ್ಯತೆ ಪ್ರಾಪ್ತವಾಗುತ್ತದೆ. ಗೌಡ ಸಾರಸ್ವತ ಸಮಾಜ ಉನ್ನತ ಸಂಸ್ಕೃತಿ, ಉತ್ಕೃಷ್ಟ ಚಿಂತನೆಯಿಂದ ಸಂಪನ್ನವಾದ ಸಂಸ್ಕಾರ ಭರಿತವಾದ ಸಮಾಜ ಎಂದು ಹೇಳಿದರು. ಸ್ವಾಮೀಜಿಯವರ ಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಮಿಲ್ಕ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಹನುಮಂತ ಎಂ.ಪೈ ಮಾತನಾಡಿ, ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾಜದಲ್ಲಿ ಹತ್ತಾರು ಸಾಮಾಜಿಕ ಬದಲಾವಣೆಯ ಕಾರ್ಯಗಳು ನಡೆದಿವೆ. ಸಮಾಜದ ಶಿಷ್ಯವೃಂದದ ಮೇಲೆ ಸ್ವಾಮೀಜಿಯರ ಪ್ರೀತಿಭರಿತ ಆಶೀರ್ವಾದ ನಮ್ಮೆಲ್ಲರನ್ನು ಪೋಷಿಸುತ್ತಿದೆ ಎಂದರು.
ಐಡಿಯಲ್ ಪ್ರಭಾಕರ ಕಾಮತ್, ಆರ್.ಆರ್. ಕಾಮತ್, ಬಸ್ತಿ ಶ್ರೀಪಾದ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಎಸ್.ಪಿ. ಆಚಾರ್ಯ ಕಾರ್ಯಕ್ರಮ ನಿರೂ ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.