ಹೊಕ್ಕಾಡಿಗೋಳಿ: ಅಭಿವ್ಯಕ್ತಿ ಸಾಮರ್ಥ್ಯ ಸ್ಪರ್ಧಾ ಮಾಸಾಚರಣೆ
Team Udayavani, Feb 23, 2017, 3:24 PM IST
ಬೆಳ್ತಂಗಡಿ : ಬಜಿರೆ ವಲಯ ಮಟ್ಟದ ಓದು ಬರಹ ಹಾಗೂ ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧಾ ಮಾಸಾಚರಣೆ ಕಾರ್ಯಕ್ರಮ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ನಡೆಯಿತು.
ಆರಂಬೋಡಿ ಗ್ರಾ. ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾ. ಪಂ.ನ ಹೊಸಂಗಡಿ ಕ್ಷೇತ್ರದ ಸದಸ್ಯ ಓಬಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಯಜಮಾನ ಇಂಡಸ್ಟ್ರೀಸ್‌ನ ಮಾಲಕ ನರಸಿಂಹ ಪೈ, ಉದ್ಯಮಿ ರಾಘವೇಂದ್ರ ಭಟ್, ಆರಂಬೋಡಿ ಗ್ರಾಮದ ಎಸ್‌ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಮೂಲ ಸೌಕರ್ಯದ ನಿರ್ಮಾಣದಲ್ಲಿ ಶ್ರಮಿಸಿದ ಶಾಲಾ ಶಿಕ್ಷಕ ರಾಜೇಶ್ ಎನ್. ಅವರನ್ನು ಸಮ್ಮಾನಿಸಲಾಯಿತು. 10 ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರವೀಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿ, ರಾಜೇಶ್ ಎನ್. ಸ್ವಾಗತಿಸಿದರು. ಮೆಟಿಲ್ಡಾ ಡಿ’ಸೋಜಾ ಸಮ್ಮಾನ ಪತ್ರ ವಾಚಿಸಿದರು. ಈರಣ್ಣ ಕೆ. ವಂದಿಸಿದರು. ಸುಚಿತ್ರಾ ಮತ್ತು ನಿವೇದಿತಾ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.