Mangaluru ಕೋರ್ಡೆಲ್ ಚರ್ಚ್ ಪುಣ್ಯ ಕ್ಷೇತ್ರವಾಗಲಿ
ಚರ್ಚ್‌ನ ಶತಮಾನೋತ್ತರ ಸುವರ್ಣ ಮಹೋತ್ಸವದಲ್ಲಿ ಬಿಷಪ್ ರೈ| ರೆ| ಡಾ| ಸಲ್ಡಾನ್ಹಾ
Team Udayavani, Sep 17, 2023, 11:52 PM IST
ಮಂಗಳೂರು: ಕುಲಶೇಖರದ ಕೋರ್ಡೆಲ್ ಚರ್ಚ್ (ಹೊಲಿಕ್ರಾಸ್ ಚರ್ಚ್) ಇದರ ಶತಮಾನೋತ್ತರ ಸುವರ್ಣ ಮಹೋತ್ಸವ ಸಂಭ್ರಮ ರವಿವಾರ ನಡೆಯಿತು.
ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಂಭ್ರಮದ ಬಲಿ ಪೂಜೆಯನ್ನು ನೆರವೇರಿಸಿದರು. ಮಂಗಳೂರು ಸಿಟಿ ವಲಯದ ಮುಖ್ಯ ಗುರು ವಂ| ಜೇಮ್ಸ್ ಡಿ’ ಸೋಜಾ, ಕೋರ್ಡೆಲ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಗುರುಗಳಾದ ವಂ| ಐವನ್ ಕೊರ್ಡರಿಯೋ ಮತ್ತು ವಂ| ಪಾವ್ಲ್ ಡಿ’ಸೋಜಾ ಮತ್ತು ಅತಿಥಿ ಗುರುಗಳು ಉಪಸ್ಥಿತರಿದ್ದರು.
ಬಿಷಪ್ ಸಲ್ಡಾನ್ಹಾ ಅವರು ದೇವರ ವಾಕ್ಯದ ಸಂದೇಶವನ್ನು ನೀಡಿ ಭಕ್ತರಿಗೆ ಪವಿತ್ರ ಶಿಲುಬೆಯ ಆಶೀರ್ವಾದ ಕೋರಿದರು. ಹಲವು ಧಾರ್ಮಿಕ ಸಹೋದರರು, ಧರ್ಮ ಭಗಿನಿಯರು, ಕುಲಶೇಖರ ಚರ್ಚ್ ಮತ್ತು ವಿವಿಧ ಚರ್ಚ್‌ಗಳ ಭಕ್ತರು ಭಾಗವಹಿಸಿದ್ದರು.
ಬಲಿಪೂಜೆಯ ಬಳಿಕ ಅಭಿನಂದನ ಸಮಾರಂಭ ನಡೆಯಿತು. ಕುಲಶೇಖರ ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಧರ್ಮ ಗುರುಗಳು, ಸಹಾಯಕ ಗುರುಗಳು ಮತ್ತು ಚರ್ಚ್‌ನಿಂದ ಧರ್ಮ ಗುರುಗಳಾದವರು ಸೇರಿದಂತೆ ಒಟ್ಟು 103 ಮಂದಿಯನ್ನು ಸಮ್ಮಾನಿಸಲಾಯಿತು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಧರ್ಮಾಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರನ್ನು ಸಮ್ಮಾನಿಸಲಾಯಿತು.
ಬಿಷಪ್ ಅವರು ಮಾತನಾಡಿ, ಕುಲಶೇಖರ ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಧರ್ಮ ಗುರುಗಳು ಮತ್ತು ಧಾರ್ಮಿಕ ವ್ಯಕ್ತಿಗಳ ಕಾರ್ಯ ಅಭಿನಂದನೀಯ. ಮುಂಬರುವ ದಿನಗಳಲ್ಲಿ ಪವಿತ್ರ ಶಿಲುಬೆಗೆ ಸಮರ್ಪಿಸಿದ ಈ ಚರ್ಚ್ ಪುಣ್ಯ ಕ್ಷೇತ್ರವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಚರ್ಚ್‌ನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್ ಅವರು 150 ವರ್ಷಗಳ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.
ಚರ್ಚ್‌ನ ಉಪಾಧ್ಯಕ್ಷರಾದ ರೂತ್ ಕ್ಯಾಸ್ತಲಿನೊ, ಕಾರ್ಯದರ್ಶಿ ಅನಿಲ್ ಡೆಸಾ, 21 ಆಯೋಗಗಳ ಸಂಯೋಜಕ ಡೋಲ್ಫಿ ಡಿ’ಸೋಜಾ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತ ರಿದ್ದರು. ರಿಚಾರ್ಡ್ ಆಲ್ವಾರಿಸ್ ನಿರೂಪಿ ಸಿದರು. ಸಹಾಯಕ ಗುರು ಐವನ್ ಕೊರ್ಡೆರಿಯೋ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.