ಪ್ರಕೃತಿ ವಿಕೋಪ ಎದುರಿಸಲು ಗೃಹರಕ್ಷಕ ದಳದ ಈಜುಗಾರರು ಸಜ್ಜು
Team Udayavani, Jul 11, 2017, 2:10 AM IST
ಹಳೆಯಂಗಡಿ: ಜಿಲ್ಲೆಯ ಕರಾವಳಿಯಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ದುರಂತದ ಸವಾಲುಗಳನ್ನು ಎದುರಿಸಲು 39ಕ್ಕೂ ಹೆಚ್ಚು ಮಂದಿ ಗೃಹರಕ್ಷಕ ದಳದ ಈಜುಗಾರರು ಸಜ್ಜಾಗಿದ್ದಾರೆ. ಜಿಲ್ಲಾ ಪ್ರಕೃತಿ ವಿಕೋಪದ ಕಾರ್ಯಪಡೆಗೆ ಎಲ್ಲ 7 ಗೃಹ ರಕ್ಷಕ ಘಟಕಗಳು ದುಡಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಎದುರಾಗುವ ಅವಘಡವನ್ನು ನಿಭಾಯಿಸಲು ಈಜುಗಾರರ ಪಡೆ ಸಿದ್ಧವಿದೆ. ಮಂಗಳೂರಿನ ಗೃಹರಕ್ಷಕ ದಳದ ಈಜುಗಾರರಿಗೆ ವಿಶೇಷವಾಗಿ ರಾಜ್ಯಮಟ್ಟದಲ್ಲಿಯೇ ಹೆಸರಿದೆ. ಇಲ್ಲಿನ ಈಜುಗಾರರು ರಾಜ್ಯದ ವಿವಿಧೆಡೆ ನದಿ ನೀರಿನ ಸಂಬಂಧ ಘಟಿಸಿದ ದುರಂತಗಳ ಸಂದರ್ಭಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಗೃಹರಕ್ಷಕ ದಳದಲ್ಲಿ ಅನುಭವಿ ಮೀನುಗಾರರು, ಚಾಲಕರು, ಅನುಭವಿ ಮುಳುಗು ತಜ್ಞರು ಇದ್ದಾರೆ.
ಜಿಲ್ಲೆಯ ಸುಬ್ರಹ್ಮಣ್ಯ ಘಟಕದಲ್ಲಿ 6 ಮಂದಿ, ಬಂಟ್ವಾಳ ಘಟಕ-4, ಸುಳ್ಯ ಘಟಕ-2, ಕಡಬ ಘಟಕ-5, ಮಂಗಳೂರು ಘಟಕ -4, ಮೂಲ್ಕಿ ಘಟಕ-15 ಹಾಗೂ ಉಪ್ಪಿನಂಗಡಿ ಘಟಕ- 3 ಮಂದಿಯ ತಂಡದ ನಿರ್ವಹಣೆಗೆ ಪ್ರತಿ ಘಟಕಕ್ಕೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುರೇಶ್ ಶೇಟ್ ಮತ್ತು ಸನತ್ ಆಳ್ವ (ಮಂಗಳೂರು), ಜಯಂತ ಶೆಟ್ಟಿ ಮತ್ತು ಗಫೂರ್ (ಸುಳ್ಯ) ಮನ್ಸೂರ್ ಅಹಮ್ಮದ್ (ಮೂಲ್ಕಿ), ಗೋಪಾಲ ಎಚ್.ಕೆ. ಮತ್ತು ಕೀತೇìಶ್ (ಕಡಬ), ಶ್ರೀನಿವಾಸ್ ಆಚಾರ್ಯ (ಬಂಟ್ವಾಳ), ರಾಮಣ್ಣ ಆಚಾರ್ಯ (ಉಪ್ಪಿನಂಗಡಿ), ವಿಶ್ವನಾಥ (ಸುಬ್ರಹ್ಮಣ್ಯ) ಇವರು ಆಯಾ ಘಟಕದ ಪ್ರಮುಖರು. ಎಲ್ಲರೂ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮರಳೀ ಮೋಹನ್ ಚೂಂತೂರು ಅವರ ನಿರ್ದೇಶನದಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ಘಟಕದಲ್ಲಿನ ಈಜುಗಾರರ ಖಾಸಗಿ ಮೊಬೈಲ್ ನಂಬರ್ ಸಹಿತ ಅಧಿಕಾರಿಗಳನ್ನು ಸಂಪರ್ಕಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು ಜಿಲ್ಲಾ ಮಟ್ಟದಲ್ಲಿ ನಡೆಸಿದ ಪ್ರಕೃತಿ ವಿಕೋಪದ ಪೂರ್ವಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿದ್ದು, ಪ್ರತಿ ತಾಲೂಕು ಸಮನ್ವಯ ಸಮಿತಿಗೆ ಈಜುಗಾರರ ಪಟ್ಟಿಯನ್ನು ರವಾನಿಸಲಾಗಿದೆ. ಈ ಈಜುಗಾರರಿಗೆ ಬೇಕಾಗಿರುವ ಎಲ್ಲ ಸಲಕರಣೆಗಳನ್ನೂ ನೀಡಲಾಗಿದೆ. ದಿನದ 24 ಗಂಟೆಯೂ ಸಜ್ಜಾಗಿರುವಂತೆ ಸೂಚಿಸಲಾಗಿದೆ.
ಭಾರೀ ಬೇಡಿಕೆ
ಕೇವಲ ಪ್ರಕೃತಿ ವಿಕೋಪದ ಸಮಯದಲ್ಲಿ ಮಾತ್ರ ಈ ಈಜುಗಾರರು ಕಾರ್ಯ ನಿರ್ವಹಿಸುತ್ತಿಲ್ಲ. ಬದಲಾಗಿ ಇತರ ಸಂದರ್ಭಗಳಲ್ಲೂ ನದಿಯ ಸೆಳೆತಕ್ಕೆ ಒಳಗಾದವರನ್ನು ರಕ್ಷಿಸುತ್ತಿದ್ದಾರೆ. ಮೂಲ್ಕಿ ಘಟಕದ ಗೃಹರಕ್ಷಕ ದಳದ ಜಾಕಿರ್, ಸಾದಿ ಕ್, ಹಸನ್, ಜಾವೇದ್, ಮಹಮ್ಮದ್ ವಾಸೀಂ (ಪಣಂಬೂರು ಠಾಣೆಯಲ್ಲಿ ಖಾಯಂ ಕರ್ತವ್ಯ) ಅವರ ಸ್ನೇಹಿತರ ತಂಡವು 13 ವರ್ಷಗಳಿಂದ ಅನೇಕ ಅವಘಡಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಮಾಸ್ತಿಗುಡಿ ಸಿನಿಮಾದಲ್ಲಿನ ಸಾಹಸ ಸನ್ನಿವೇಶ ಚಿತ್ರೀಕರಣ ಸಂದರ್ಭದ ದುರಂತ, ಉಡುಪಿ ಭಾಸ್ಕರ ಶೆಟ್ಟಿ ದೇಹದ ಕುರುಹುಗಳ ತಪಾಸಣೆ, ಪುತ್ತೂರಿನ ಪತಿ-ಪತ್ನಿಯರ ಕಳೇಬರ, ಉಳ್ಳಾಲದ ಬಾರ್ಜ್ ದುರಂತವಲ್ಲದೆ, ಈ ಹಿಂದೆ ಶಿವಮೊಗ್ಗ, ಸಾಗರ, ಉಪ್ಪಿನಂಗಡಿ, ಪಣಂಬೂರು ನದಿ ತೀರದಲ್ಲಿ ಹಲವು ದುರಂತಗಳಲ್ಲಿ ಜೀವ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು.
ರಕ್ಷಣಾ ಕಾರ್ಯಪಡೆ ಸಿದ್ಧ
ಗೃಹರಕ್ಷಕ ದಳದ ಈಜುಗಾರರ ತಂಡದಲ್ಲಿ 5 ಮಂದಿ ಮುಳುಗು ತಜ್ಞರಿದ್ದಾರೆ. ಜತೆಗೆ 10 ಮಂದಿ ಅನು ಭವಿ ಮೀನುಗಾರರೂ ಮೂಲ್ಕಿಯಲ್ಲಿದ್ದಾರೆ. ಇವರೆಲ್ಲ ಅನಿ ವಾರ್ಯ ಸಂದರ್ಭಗಳಲ್ಲಿ ಅಗತ್ಯ ನೆರವು ಒದಗಿಸುವರು. ಫೈಬರ್ ಬೋಟ್‌ನ್ನು ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ಸಜ್ಜುಗೊಳಿಸಲಾಗಿದೆ. ಈ ಬಾರಿ ಇನಾ#ಟೇಬಲ್ ಬೋಟ್ ಮತ್ತಿತರ ಉಪಕರಣಗಳಿಗೆ ಬೇಡಿಕೆ ಇಟ್ಟಿದ್ದೇವೆ. ಯಾವುದೇ ಸಮಯದಲ್ಲಿ ರಕ್ಷಣಾ ಕಾರ್ಯಪಡೆ ಜಿಲ್ಲೆಯಲ್ಲಿ ಸಿದ್ಧವಾಗಿದೆ.
-ರಮೇಶ್, ಡೆಪ್ಯುಟಿ ಕಮಾಂಡೆಂಟ್, ಗೃಹರಕ್ಷಕ ದಳ
– ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.