ಮೇಲುಸ್ತುವಾರಿಯೇ ಮನೆಯಲ್ಲಿ ಕಳವು ಗೈದು ಸೆರೆಯಾದ
Team Udayavani, Dec 8, 2017, 9:44 AM IST
ಮೂಡಬಿದಿರೆ: ಪುತ್ತಿಗೆ ಗ್ರಾಮದ ಕಾಯರ್‌ಪುಂಡುವಿನಲ್ಲಿ ಮನೆ ಮತ್ತು ತೋಟದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾತನೇ ಆ ಮನೆಯ ಹಂಚು ತೆಗೆದು ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ವರದಿಯಾಗಿದೆ. ಆರೋಪಿ ಅಶ್ವತ್ಥಪುರ ಗುಂಡೆಬೆಟ್ಟು ನಿವಾಸಿ ಅಶೋಕ್(42)ನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಸಂಪಿಗೆಯ ರಿಕ್ಷಾ ಚಾಲಕ ಅಶೋಕ್ ತನ್ನ ವೃತ್ತಿಯ ಜತೆಗೆ ರತ್ನಾ ಅವರಿಗೆ ಸೇರಿದ ಮನೆ ಮತ್ತು ತೋಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ. ನ. 25ರಂದು ರತ್ನಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಂಚು ತೆಗೆದು ಚಿನ್ನಾಭರಣ ಕಳವು ಮಾಡಿ ಮೂಡಬಿದಿರೆಯ ಸಹಕಾರಿ ಬ್ಯಾಂಕ್ ಒಂದರಲ್ಲಿ ಅಡವಿಟ್ಟಿದ್ದ ಎನ್ನಲಾಗಿದೆ.
ಕಳ್ಳತನದ ಬಗ್ಗೆ ರತ್ನಾ ಅವರು ನೀಡಿದ ದೂರಿನನ್ವಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್.ಐ. ಶಂಕರ್ ನಾಯರಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಗುರುವಾರ ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Old Age Home: ಶಿಕ್ಷಣ ವೃದ್ಧಾಶ್ರಮ ಹೆಚ್ಚಿಸದಿರಲಿ!
ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ
ಐದನೇ ಬಾರಿ ಜತೆಯಾದ ಧನುಷ್ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್ʼ ರಿಯಲ್ ಕಹಾನಿ?
Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.