ತೋಕೂರು ಬೊಮ್ಮಿಪೂಜಾರಿಗೆ ಮನೆ ಹಸ್ತಾಂತರ
Team Udayavani, Mar 29, 2018, 10:49 AM IST
ತೋಕೂರು: ಸಮಾಜದಲ್ಲಿ ಜಾತಿ, ಮತ ಭೇದ ದೂರಮಾಡಿ ಸಂಘಟಿತರಾಗಿ ಅಸಹಾಯಕರಿಗೆ ನೆರವಾದರೆ ಸಮಾಜ ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ. ಬಡ ಮಹಿಳೆಗೆ ಆಸರೆಯಾಗಿ ಮನೆ ನಿರ್ಮಾಣ ಮಾಡಿ ಅರ್ಪಣೆ ಮಾಡಿರುವ
ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯತ್‌ನ 10ನೇ ತೋಕೂರಿನ ಕಂಬಳಬೆಟ್ಟುವಿನ ನಿವಾಸಿ ಬೊಮ್ಮಿ ಪೂಜಾರಿ ಅವರಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು, ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಮಾ.28ರಂದು ಹಸ್ತಾಂತರಿಸಿದರು. ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಅರ್ಚಕ ಗುರುರಾಜ್ ಭಟ್ ಮತ್ತು ಚಂದ್ರಶೇಖರ ಭಟ್ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಮೂಲ್ಕಿ ನ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್ ಚಿತ್ರಾಪು, ಪಡುಪಣಂಬೂರು ಗ್ರಾ.ಪಂ. ಸದಸ್ಯರಾದ ಲೀಲಾ ಬಂಜನ್, ದಿನೇಶ್ ಕುಲಾಲ್, ಸಂಪಾವತಿ, ಪುಷ್ಪಾವತಿ, ವಿವಿಧ ಸಂಘ ಸಂಸ್ಥೆಗಳ ಹರಿದಾಸ್ ಭಟ್, ರತನ್ ಶೆಟ್ಟಿ, ಧನಂಜಯ ಶೆಟ್ಟಿಗಾರ್, ರಾಜೇಶ್ ದಾಸ್, ಸುಂದರ್ ರಾಜ್, ಸುದರ್ಶನ್ ಬಂಗೇರ, ತಾರಾನಾಥ ತೋಕೂರು, ಶೇಖರ ಪೂಜಾರಿ, ಲೀಲಾಧರ್ ಶೆಟ್ಟಿಗಾರ್, ಇಂದಿರಾ ಶೆಟ್ಟಿಗಾರ್, ಧನಂಜಯ ಕುಲಾಲ್, ದೀಕ್ಷಿತ್ ಸುವರ್ಣ, ಲೋಹಿತ್ ಕೋಟ್ಯಾನ್, ನವನೀತ್, ಜಗದೀಶ್ ಕುಲಾಲ್, ಭಾಸ್ಕರ ದೇವಾಡಿಗ, ವಾರಿಜಾ, ಶಶಿಕಲಾ, ರವೀಂದ್ರ ಉಪಸ್ಥಿತರಿದ್ದರು.ಪಡುಪಣಂಬೂರು ಗ್ರಾ.ಪಂ. ಸದಸ್ಯರಾದ ಹೇಮಂತ್ ಅಮೀನ್ ಸ್ವಾಗತಿಸಿ, ನಿರೂಪಿಸಿದರು.
ಯುವವಾಹಿನಿಯಿಂದ ವಿದ್ಯುತ್
ಭಾಗವಹಿಸಿದ್ದ ಮೂಲ್ಕಿ ಯುವ ವಾಹಿನಿಯ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಅವರು ಮೂಲ್ಕಿ ಯುವವಾಹಿನಿ ಸಂಸ್ಥೆಯಿಂದ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಅಳವಡಿಸಿ ಕೊಡಲಾಗುವುದು ಎಂದರು.
ಸಹಕರಿಸಿದ ದಾನಿಗಳು
ಜಿ.ಪಂ., ಪಡುಪಣಂಬೂರು ಗ್ರಾ.ಪಂ., ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್, ತೋಕೂರು
ಯುವಕ ಸಂಘ, ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಕಂಬಳಬೆಟ್ಟು ಫ್ರೆಂಡ್ಸ್, ಆಸರೆ ಟೀಮ್ ಗಣೇಶ್‌ಪುರ, ಎಸ್
ಕೋಡಿ ಮಿತ್ರ ಮಂಡಳಿ, ನಾಗೇಶ್ ಬಪ್ಪನಾಡು, ದಿವಾಕರ ಕರ್ಕೇರ, ಜೈಕೃಷ್ಣ ಕೋಟ್ಯಾನ್, ಸುದರ್ಶನ್ ಬಂಗೇರ, ತಾರಾನಾಥ ತೋಕೂರು, ಶೇಖರ ಪೂಜಾರಿಯವರು ಮನೆ ನಿರ್ಮಾಣದಲ್ಲಿ ಸಹಕರಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.