RCB ತಂಡಕ್ಕೆ ಹಾಂಗ್ಯೋ ಐಸ್‌ಕ್ರೀಮ್ ಪಾಲುದಾರ
Team Udayavani, Jan 27, 2024, 12:19 AM IST
ಮಂಗಳೂರು: ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್‌ಕ್ರೀಂ ಸೇರ್ಪಡೆಯಾಗಿದೆ.
ಐಪಿಎಲ್ ಸೀಸನ್ 2024ಕ್ಕೆ ರಾಯಲ್ ಚಾಲೆಂಜರ್ಸ್ ಜತೆಯಲ್ಲಿ ಹಾಂಗ್ಯೋ ಐಸ್‌ಕ್ರೀಮ್ ಹೊಸ ಹೆಜ್ಜೆಯನ್ನಿಡಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.
ಕರ್ನಾಟಕ ಕರಾವಳಿಯ ಐಸ್‌ಕ್ರೀಮ್ ಅದ್ಭುತವು ಕ್ರಿಕೆಟ್ ಮ್ಯಾಜಿಕ್ ತಂಡದೊಂದಿಗೆ ಸೇರಿಕೊಂಡಿದ್ದು, ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸವನ್ನು ಪಸರಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ ಕ್ರೀಮ್‌ನ ಆಹ್ಲಾದಕರ ಐಸ್‌ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗಲಿದೆ ಎಂದು ಹಾಂಗ್ಯೋ ಐಸ್‌ಕ್ರೀಮ್ಸ್ ಕಂಪೆನಿ ಪ್ರಕಟನೆ ತಿಳಿಸಿದೆ.
ಈ ಒಡಂಬಡಿಕೆ ವೇಳೆ ಹಾಂಗ್ಯೊ ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥ ಸಂಕೀರ್ಣ ಪ್ರದೀಪ್ ಪೈ, ನೀಮಾ ಪೈ, ಶ್ರೀನಿವಾಸ್ ಜೆ. ಪೈ ಹಾಗೂ ಶ್ರೀಕೃಷ್ಣ ಜೆ. ಪೈ ಉಪಸ್ಥಿತರಿದ್ದರು.
ಟಾಪ್ ಬ್ರ್ಯಾಂಡ್ ಗಳಲ್ಲಿ ಹಾಂಗ್ಯೋ
ಹಾಂಗ್ಯೋ ಐಸ್‌ಕ್ರೀಮ್ ಪ್ರಸ್ತುತ ಐಸ್‌ಕ್ರೀಮ್‌ನ ಅಗ್ರ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಅದು 3 ದಶಲಕ್ಷ ಗ್ರಾಹಕರನ್ನು ಸಂತೃಪ್ತಗೊಳಿಸಿದೆ. ದಿನಕ್ಕೆ 1.2 ಲಕ್ಷ ಲೀ.ಗಳಷ್ಟು ಉತ್ಪಾದನ ಸಾಮರ್ಥ್ಯವನ್ನು ಹೊಂದಿದೆ. 30 ಸಾವಿರ ರಿಟೇಲ್ ಶಾಪ್‌ಗ್ಳು, 330 ಚಾನೆಲ್ ಪಾಲುದಾರರು ಮತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತನಾಗಿ ಯಶಸ್ಸು ಕಂಡಿದೆ.
ಸಣ್ಣ ಪಟ್ಟಣವೊಂದರಲ್ಲಿ ನೆಚ್ಚಿನ ಐಸ್‌ಕ್ರೀಮ್ ತಾಣವಾಗಿ ಹುಟ್ಟಿಕೊಂಡು, ಕಠಿನ ಪರಿಶ್ರಮದಿಂದ ಉದ್ಯಮ ದೈತ್ಯನಾಗಿ ವಿಕಸನಗೊಳ್ಳುವವರೆಗಿನ ಹಾಂಗ್ಯೋ ಐಸ್ ಕ್ರೀಮ್ ಪಯಣ, ಕ್ರಿಕೆಟ್ ಬಾಂಧವ್ಯದೊಂದಿಗೆ ಹೊಸ ದಾರಿಗೆ ಹೊರಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.