ಜ. 13: ಕರಾವಳಿಯ 500 ಸೈನಿಕರಿಗೆ ಗೌರವ
Team Udayavani, Dec 18, 2018, 10:39 AM IST
ಪುತ್ತೂರು : ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಜ. 13ರಂದು ಸೈನಿಕರ ದಿನಾಚರಣೆ ನಡೆಯಲಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಈ ಮೂರು ಜಿಲ್ಲೆಗಳ 500 ಸೈನಿಕರನ್ನು ಗೌರವಿಸಲಾಗುವುದು ಎಂದು ಕುದ್ಮಾರು ತಿರಂಗಾ ವಾರಿಯರ್ಸ್ ಸಂಚಾಲಕ ಲೊಕೇಶ್ ಬಿ.ಎನ್. ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುದ್ಮಾರು ತಿರಂಗಾ ವಾರಿಯರ್ಸ್ ಆಶ್ರಯದಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವೂ ಇದೇ ವೇಳೆ ನಡೆಯಲಿದೆ ಎಂದರು.
ಮಧ್ಯಾಹ್ನ 1 ಗಂಟೆಯಿಂದ ಕಬಡ್ಡಿ ಪಂದ್ಯ ನಡೆಯಲಿದ್ದು, ಸಂಜೆ 4ಕ್ಕೆ ಶಾಂತಿಮೊಗರು ದ್ವಾರದ ಬಳಿಯಿಂದ ಮಾಜಿ ಸೈನಿಕರು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಲಿದೆ. ಸಂಜೆ 5ಕ್ಕೆ ಸಮಾರಂಭ ಉದ್ಘಾಟನೆ, ರಾತ್ರಿ 7.30ಕ್ಕೆ ಸೈನಿಕರ ದಿನಾಚರಣೆ, ರಾತ್ರಿ 9ರಿಂದ ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ಮ್ಯೂಸಿಕಲ್ ನೈಟ್ಸ್ ನಡೆದು, ಜ. 14ರ ಬೆಳಗ್ಗೆ 7ಕ್ಕೆ ಕಬಡ್ಡಿ ಪಂದ್ಯ ಸಮಾರೋಪಗೊಳ್ಳಲಿದೆ ಎಂದು ವಿವರಿಸಿದರು. ಸಮಾರಂಭವನ್ನು ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸುವರು. ಯುವಮುಖಂಡ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸುವರು ಎಂದರು.
ಸೈನಿಕರ ದಿನಾಚರಣೆ
ಸೈನಿಕರ ದಿನಾಚರಣೆಯಲ್ಲಿ ಮೇಜರ್, ಕರ್ನಲ್‌ಗಳಾದ ಬಿ.ಎ. ಕಾರಿಯಪ್ಪ, ಎಂ.ವಿ. ಭಟ್, ಬ್ರಿಗೇಡಿ ಯರ್ ಬಿ.ಎನ್. ರೈ ಸಹಿತ 500 ನಿವೃತ್ತ ಸೈನಿಕರನ್ನು ಗೌರವಿಸಲಾಗುವುದು. ಕ್ಯಾ| ಬೃಜೇಶ್ ಚೌಟ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಮೊದಲಾದವರು ಉಪಸ್ಥಿತರಿರುವರು.
ಸಂಘಟನೆಗಾಗಿ ಸಾಧ್ಯವಾದಷ್ಟು ಸೈನಿಕರನ್ನು ಸಂಪರ್ಕಿಸಲಾಗಿದೆ. ಬಾಕಿಯಾಗಿರುವ ಸೈನಿಕರನ್ನು ಸಮಾರಂಭಕ್ಕೆ ಆಹ್ವಾನಿಸಲು ಆಯಾ ಜಿಲ್ಲೆಯಲ್ಲಿ ಓರ್ವ ಸೈನಿಕರಿಗೆ ಸೂಚಿಸಲಾಗಿದೆ. ಬೆಳ್ತಂಗಡಿಯಲ್ಲಿ ಡಿ.ಎಂ. ಗೌಡ, ಉಡುಪಿಯಲ್ಲಿ ರಾಡ್ರಿಗಸ್, ಸುಳ್ಯದಲ್ಲಿ ಉತ್ತಪ್ಪ ಗೌಡ, ಪುತ್ತೂರಿನಲ್ಲಿ ಜಗನ್ನಾಥ, ಮೂಡು ಬಿದಿರೆಯಲ್ಲಿ ಅಜಿತ್ ಅವರನ್ನು ಸಂಪರ್ಕಿಸುವಂತೆ ಲೊಕೇಶ್ ಬಿ.ಎನ್. ಮನವಿ ಮಾಡಿಕೊಂಡರು. ತಿರಂಗ ವಾರಿಯರ್ ಅಧ್ಯಕ್ಷ ಲೋಹಿತ್ ಕೆ., ಉಪಾಧ್ಯಕ್ಷ ಶಿವ ಪ್ರಸಾದ್, ಸತೀಶ್ ಕುಮಾರ್, ಪುನೀತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.