ಮಾನವೀಯತೆಯನ್ನು ಪ್ರೀತಿಸಿ ಗೌರವಿಸಿ: ಡಾ| ಹೆಗ್ಗಡೆ
Team Udayavani, Jan 21, 2018, 10:49 AM IST
ಉಳ್ಳಾಲ: ಮಾನವೀಯತೆ ಯನ್ನು ಪ್ರೀತಿಸಿ ಗೌರವಿಸುವ ಕಾರ್ಯ ನಡೆದಾಗ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶನಿವಾರ ನಡೆದ ಸರ್ವ ಧರ್ಮ ಸಾಮರಸ್ಯ ಸಮಾವೇಶದಲ್ಲಿ “ಸೌಹಾರ್ದ ಸಮ್ಮಿಲನ’ದಲ್ಲಿ ಮಾತನಾಡಿದರು.
ಯಾವುದೇ ಧರ್ಮದವರಾದರೂ ಮಾನವೀಯತೆಯನ್ನು ಹೆಚ್ಚಿ ಸುವ ಕಾರ್ಯ ಆಗಬೇಕು. ಆಯಾಯ ಧರ್ಮದಲ್ಲಿ ತೊಂದರೆ ಉಂಟಾದಾಗ ಧಾರ್ಮಿಕ ಮುಖಂಡರು, ಧರ್ಮಗುರುಗಳ ಮಾರ್ಗದರ್ಶನದಲ್ಲಿ ಧರ್ಮದ ಆಚರಣೆ ನಡೆಸುವುದರೊಂದಿಗೆ ಸಮಾಜದ ಎಲ್ಲ ಜನರು ಸಂಘಟಿತ ರಾದರೆ ಮಾತ್ರ ಸಂಘಟಿತ ಜೀವನ ನಡೆಸಲು ಸಾಧ್ಯ ಎಂದರು.
ಪಶ್ಚಿಮ ಬಂಗಾಲ ಸೇರಂಪೋರ್ ವಿ.ವಿ. ಕುಲಪತಿ ವಂ| ಡಾ| ಜೆ.ಎಸ್. ಸದಾನಂದ ಮಾತನಾಡಿ, ದೇವರ ಚರಿತ್ರೆ ನೂರು ವರುಷಗಳದ್ದು, ನಾವು ಅದರಲ್ಲಿ ಒಂದು ಭಾಗ ಮಾತ್ರ. ನಾವೆಲ್ಲ ದೇವರ ನಿರ್ಮಾಣದ ಅಂಗ. ಸಮಾಜ ನಿರ್ಮಾಣದಲ್ಲಿ ದೇವರೊಂದಿಗೆ ನಾವು ಸಹ ಕಾರ್ಮಿಕರು. ನಾವು ಸರ್ವಧರ್ಮಗಳೊಂದಿಗೆ ಬಾಂಧವ್ಯ ಇರಿಸಿಕೊಂಡು ಜೀವನದ ಹಾದಿಯನ್ನು ಕ್ರಮಿಸಬೇಕು ಎಂದರು.
ಕೂಳೂರು ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ ಕೆ.ಎ. ಬಶೀರ್ ಮದನಿ ಅಲ್ ಖಾಮಿಲ್ ಮಾತನಾಡಿ, ಈ ರಾಷ್ಟ್ರ ಜನರ ಏಕತೆಯ ಕೊರತೆಯಿಂದ ಪರಕೀಯರ ವಶವಾಗಿತ್ತು. ಇಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪಾಶ್ಚಾತ್ಯ ಶಕ್ತಿಗಳು ನಮ್ಮನ್ನು ಧರ್ಮದ ಆಧಾರದಲ್ಲಿ ತುಂಡರಿಸುವ ಮೂಲಕ ಭಾರತ ಸ್ವಾವಲಂಬಿ ದೇಶವಾಗಬಾರದು ಎನ್ನುವ ಉದ್ದೇಶ ಹೊಂದಿವೆ. ಇದರ ವಿರುದ್ಧ ಸರ್ವಧರ್ಮದವರು ಒಟ್ಟು ಗೂಡಬೇಕಿದ್ದು, ಪರಸ್ಪರ ವಿಶ್ವಾಸವನ್ನು ಸ್ಥಾಪಿಸುವ ಮೂಲಕ ದೇಶದ ಅಭಿ ವೃದ್ಧಿಗೆ ಕಾರಣರಾಗಬೇಕು ಎಂದರು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸೌಹಾರ್ದದಿಂದ ನಾವು ಜೀವಿಸುವ ಮೂಲಕ ಹೊಸ ಸಮಾಜವನ್ನು ನಿರ್ಮಿಸುವ ಕಾರ್ಯ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ತೊಕ್ಕೊಟ್ಟು ಡಿವೈನ್ ಪ್ರಾರ್ಥನಾ ಕೇಂದ್ರದ ನಿರ್ದೇಶಕ ವಂ| ಜೋಸೆಫ್ ವಣಿ ಯಂತಾರ, ತೊಕ್ಕೊಟ್ಟಿನ ಬಿಷಪ್ ಸಾರ್ಜೆಂಟ್ ಮೆಮೋರಿಯಲ್ ಚರ್ಚ್‌ನ ಧರ್ಮಗುರು ವಂ| ಕುಮಾರ್ ಕೋಟ್ಯಾನ್, ಗಣ್ಯರಾದ ಕೆ. ಜಯರಾಮ ಶೆಟ್ಟಿ, ಕೆ. ಕೃಷ್ಣ ಗಟ್ಟಿ ಸೋಮೇಶ್ವರ, ಸಂತೋಷ್ ಕುಮಾರ್ ರೈ ಬೋಳಿಯಾರ್, ಸಂತೋಷ್ ಕುಮಾರ್ ಶೆಟ್ಟಿ, ವಿಶ್ವನಾಥ ಗಟ್ಟಿ ವಗ್ಗ, ಸದಾನಂದ ಬಂಗೇರ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಯು.ಎಸ್. ಪ್ರಕಾಶ್, ಚಂದ್ರಹಾಸ್ ಉಳ್ಳಾಲ, ಸುಂದರ್ ಉಳ್ಳಾಲ, ರವೀಂದ್ರ ಉಳ್ಳಾಲ, ಐತಪ್ಪ ಶೆಟ್ಟಿಗಾರ್, ಗಿರಿಜಾ ಎಂ., ಸತೀಶ್ ಕುಂಪಲ, ಧನಲಕ್ಷ್ಮೀ ಗಟ್ಟಿ, ರಾಜೀವ ಮೆಂಡನ್, ಪದ್ಮನಾಭ ತೊಕ್ಕೊಟ್ಟು, ಪುಷ್ಪರಾಜ್ ತೊಕ್ಕೊಟ್ಟು, ಪ್ರಸಾದ್ ರೈ ಕಲ್ಲಿಮಾರು, ಸದಾನಂದ ಒಂಬತ್ತುಕೆರೆ, ಅಬ್ದುಲ್ ಕರೀಮ್, ಅಬ್ದುಲ್ ರಹಿಮಾನ್ ಬಾಷಾ, ಗಣೇಶ್, ವಿದ್ಯಾಧರ್ ಶೆಟ್ಟಿ, ಲಾಯರಸ್ ಡಿ’ಸೋಜಾ, ಹ್ಯಾರಿ ಟೆಲ್ಲಿಸ್, ಲೂಕಸ್ ಡಿ’ಸೋಜಾ, ಅವಿನಾಶ್ ತೊಕ್ಕೊಟ್ಟು, ಮಂಜಪ್ಪ ಕಾರ್ಣವರ್, ರಾಝಿಕ್ ಉಳ್ಳಾಲ, ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಅವರು ಭಾಗವಹಿಸಿದ್ದರು.
ಪ್ರಧಾನ ಸಂಚಾಲಕರಾದ ಸುರೇಶ್ ಭಟ್ನಗರ, ಟಿ.ಎಸ್. ಅಬ್ದುಲ್ಲಾ, ಕೆ. ಚಂದ್ರಹಾಸ್ ಅಡ್ಯಂತಾಯ, ಕೃಷ್ಣ ಶಿವಕೃಪಾ ಕುಂಜತ್ತೂರು, ಮಹಮ್ಮದ್ ಮೋನು ಪಾವೂರು, ಮುಹಮ್ಮದ್ ತ್ವಾಹಾ, ಶತಮಾನೋತ್ಸವ ಸಮಿತಿಯ ರೊನಾಲ್ಡ್ ಫೆರ್ನಾಂಡಿಸ್, ವಂ| ಎಡ್ಮಿನ್ ಮಸ್ಕರೇನಸ್, ಡೆಮೆಟ್ರಿಯಸ್ ಜಿ. ಡಿ’ಸೋಜಾ, ವಂ| ಫಾ| ಸ್ಯ್ಟಾನಿ ಪಿಂಟೊ, ವಂ| ಫಾ| ಲೈಝಿಲ್ ಡಿ’ಸೋಜಾ, ವಂ| ಫಾ| ಫೆಲಿಕ್ಸ್ ನೊರೋನ್ಹ ಉಪಸ್ಥಿತರಿದ್ದರು.
ಸಂತ ಸೆಬಾಸ್ಟಿಯನ್ ಧರ್ಮ ಕೇಂದ್ರದ ವಂ| ಡಾ| ಜೆ.ಬಿ. ಸಲ್ಡಾನ ಪ್ರಸ್ತಾವನೆಗೈದರು. ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ಮೆಲ್ವಿನ್ ಸಿ. ಡಿ’ಸೋಜಾ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಜೋಸ್ಲಿನ್ ಡಿ’ಸೋಜಾ ವಂದಿಸಿದರು. ಪುತ್ತೂರು ಫಿಲೋಮಿನಾ ಶಿಕ್ಷಣ ಸಂಸ್ಥೆಯ ಶಿಕ್ಷಕ ರಾಜಶೇಖರ್ ಪುತ್ತೂರು ಹಾಗೂ ಸೆಬಾ ಸ್ಟಿಯನ್ ಕಾಲೇಜು ಉಪನ್ಯಾಸಕ ಅರುಣ್ ಉಳ್ಳಾಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.