ಸಮಾಜಮುಖೀ ಸೇವೆಯಿಂದ ಗೌರವ ಸಂಪಾದಿಸಿ: ವಿನಯ ಹೆಗ್ಡೆ


Team Udayavani, Sep 3, 2017, 8:50 AM IST

vinay-hegde.jpg

ಮೂಡಬಿದಿರೆ: “ವ್ಯಕ್ತಿ ಪ್ರಯತ್ನ, ಪರಿಶ್ರಮದಿಂದ ಸಾಧಕನಾಗಿ ಎಷ್ಟೊಂದು ಎತ್ತರಕ್ಕೆ ಏರಬಹುದು ಎಂಬುದಕ್ಕೆ ಉದ್ಯಮಿಯಾಗಿ ಶಿಕ್ಷಣ, ಕ್ರೀಡೆ, ಸಮಾಜಸೇವಾ ರಂಗಗಳಲ್ಲಿ ಸಕ್ರಿಯರಾಗಿ ಸಾರ್ಥಕ ಜೀವನ ನಡೆಸುತ್ತಿರುವ ಎ. ಸದಾನಂದ ಶೆಟ್ಟಿ ಅವರೇ ಸಾಕ್ಷಿ’ ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ  ಎನ್‌. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಮೂಡಬಿದಿರೆ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಶನಿವಾರ ನಡೆದ, ಶ್ರೀದೇವಿ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ, ಇಂಟರ್‌ನ್ಯಾಷನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ, ಪ್ರತಿಷ್ಠಿತ ಕ್ರೀಡಾ ಸಂಘಗಳ ಮಹಾಪೋಷಕ, ಸಮಾಜ ಸೇವಕ ಎ. ಸದಾನಂದ ಶೆಟ್ಟಿ ಅವರ “75ನೇ ಹುಟ್ಟುಹಬ್ಬ- ಸದಾಭಿನಂದನೆ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರು ಕೊಟ್ಟ ಆಯುಷ್ಯದ ಬಗ್ಗೆ ವಿಮರ್ಶೆ ಸಲ್ಲದು. ಬದುಕಿರುವಷ್ಟೂ ಕಾಲ ನಾವೆಷ್ಟು ಸಮಾಜಮುಖೀಯಾಗಿ ತೊಡಗಿಸಿಕೊಂಡಿದ್ದೇವೆ ಎಂಬುದಷ್ಟೇ ಮುಖ್ಯ. ಈ ದೃಷ್ಟಿಯಲ್ಲಿ ಪರಿ ಶ್ರಮದಿಂದ ಬದುಕು ಕಟ್ಟಿಕೊಂಡು ಬಂಟರೂ ಸೇರಿ ಸಮಸ್ತ ಸಮುದಾಯಗಳ ಬಗ್ಗೆ ಕಾಳಜಿ ತೋರುತ್ತ ಬಂದಿರುವ ಸದಾನಂದ ಶೆಟ್ಟರ ವ್ಯಕ್ತಿತ್ವ, ಜೀವನ ಶೈಲಿ ಸಮಾಜಮುಖೀ ಚಿಂತಕರಿಗೆ ಮಾದರಿ’ ಎಂದರು.

ಸಮ್ಮಾನ: ಸದಾನಂದ ಶೆಟ್ಟಿ – ಮೈನಾ ಎಸ್‌. ಶೆಟ್ಟಿ ದಂಪತಿಯನ್ನು ರಜತ ಪುಷ್ಪಗಳಿದ್ದ ಬೃಹತ್‌ ಪುಷ್ಪಹಾರ ತೊಡಿಸಿ, ಸದಾನಂದ ಶೆಟ್ಟಿ ಅವರಿಗೆ ಶಾಲು , ಪೇಟ, ರಜತ ಸಮ್ಮಾನ ಫಲಕ, ಬೆಳ್ಳಿ ಹೊದಿಕೆಯ ಮರದ ಕಳಸಿಗೆ, ತೆಂಗಿನ ಸಸಿ ಸಮರ್ಪಿಸಲಾಯಿತು. ಮೈನಾ ಶೆಟ್ಟಿ ಅವರಿಗೆ ಹೂವು- ಕುಂಕುಮ, ಸೀರೆಯನ್ನಿತ್ತು ಸುಮಂಗಲೆಯರು ಗೌರವಿಸಿದರು. ಆಳ್ವಾಸ್‌ ಕನ್ನಿಕೆಯರು ಸಮ್ಮಾನಿತ ದಂಪತಿಗೆ ಆರತಿ ಎತ್ತಿ ಅಭಿವಂದಿಸಿದರು.

ಸದಾಭಿನಂದನೆ ಬಿಡುಗಡೆ: ಎ. ಸದಾನಂದ ಶೆಟ್ಟಿ ಅವರ ಜೀವನ, ಸಾಧನೆಗಳ ಪರಿಚಯವಿರುವ “ಸದಾಭಿನಂದನೆ’ ಅಭಿ ನಂದನ ಗ್ರಂಥವನ್ನು ಹಾಗೂ ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ರಚಿಸಿರುವ ಬಂಟ ಸಮುದಾಯದ ಚಾರಿತ್ರಿಕ ಮಾಹಿತಿಯುಳ್ಳ “ಫೂಟ್‌ ಪ್ರಿಂಟ್ಸ್‌’ ಕೃತಿಯನ್ನು ಸಭಾಧ್ಯಕ್ಷ ಡಾ| ಎನ್‌. ವಿನಯ ಹೆಗ್ಡೆ ಬಿಡುಗಡೆಗೊಳಿಸಿದರು.

ಸಾಮಾಜಿಕ ಸ್ಪಂದನೆಯೊಂದಿಗೆ ಜೀವನ:  ಕ್ರಿಯಾಶೀಲತೆಯಿಂದ ಒಂದೊಂದೇ ಮೆಟ್ಟಿಲನ್ನು ಏರಿ ಬಂದು ಎಲ್ಲರಿಗೂ ಅನುಕರಣೀಯ ಬದುಕು ನಡೆಸಿದ ಸದಾನಂದ ಶೆಟ್ಟಿ ಅವರು ಅಜಾತಶತ್ರು. ವಿನಯಶೀಲತೆ, ಪ್ರೀತಿ-ವಿಶ್ವಾಸದಿಂದ ಎಲ್ಲರಿಗೂ ಬೇಕಾಗಿ ಬದುಕಿದವರು. ಮಣಿಪಾಲದ ಟಿ.ಎಂ.ಎ. ಪೈ, ಎಸ್‌ಡಿಎಂ ಉಜಿರೆ, ನಿಟ್ಟೆ ವಿದ್ಯಾಸಂಸ್ಥೆ, ಸುಳ್ಯದ ಕುರುಂಜಿ ಗೌಡರ ಶಿಕ್ಷಣಾಲಯ, ಯೇನೆಪೊಯಾ, ಆಳ್ವಾಸ್‌ ಹೀಗೆ ಈ ಕರಾವಳಿಯಲ್ಲಿ ಶೈಕ್ಷಣಿಕ ಕ್ರಾಂತಿ ನಡೆದಿದ್ದು, ಸದಾನಂದ ಶೆಟ್ಟಿ ಅವರ ಶ್ರೀದೇವಿ ಶಿಕ್ಷಣ ಸಂಸ್ಥೆ ಈ ಕ್ರಾಂತಿಯ ಒಂದು ಪ್ರಮುಖ ಭಾಗವೇ ಆಗಿದೆ ಎಂದ ಸಂಸದ, ಕೇಂದ್ರ ಮಾಜಿ ಸಚಿವ ಎಂ. ವೀರಪ್ಪ ಮೊಲಿ ಹೇಳಿದರು.

ಮನುಷ್ಯ ಗಡಿಗಳನ್ನು ಮೀರಿ ನಿಂತಾಗ ದೇವರಿಗೆ ಪ್ರಿಯನಾಗುತ್ತಾನೆ. ಸಮಾಜಕ್ಕೆ ಬೇಕಾಗಿ ಬದುಕಿದವನು ನಿತ್ಯ ಸ್ಮರಣೀಯನಾಗುತ್ತಾನೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರೆ, ಜಾಗತಿಕ ಬಂಟ ಸಮ್ಮೇಳನದ ಯಶಸ್ಸಿಗೆ ಕಾರಣ ರಾದವರು. ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಪ್ರೋತ್ಸಾಹಕರಾಗಿ, ಸಾಧಕರನ್ನು ರೂಪಿಸಿದವರು. ಸ್ತ್ರೀ ಪುಣ್ಯ ಪುರುಷ ಭಾಗ್ಯ ಎಂಬ ನುಡಿಗೆ ತಕ್ಕಂತೆ ಸದಾನಂದ ಶೆಟ್ಟಿ ಅವರ ಪತ್ನಿ ಮೈನಾ ಶೆಟ್ಟಿ ಅವರ ಪಾತ್ರವನ್ನು ಉಲ್ಲೇಖೀಸಲೇಬೇಕು ಎಂದವರು ಬಿ. ಅಪ್ಪಣ್ಣ ಹೆಗ್ಡೆ.

ರೋಯ್‌ ಕ್ಯಾಸ್ತಲಿನೋ, ಐಕಳ ಹರೀಶ್‌ ಶೆಟ್ಟಿ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮೇಯರ್‌ ಕವಿತಾ ಸನಿಲ್‌, ಗೋಲ್ಡ್‌ ಫಿಂಚ್‌ ಬಂಜಾರ ಪ್ರಕಾಶ್‌ ಶೆಟ್ಟಿ ಮಾತನಾಡಿದರು.

ಸಮಾಜವೇ ಮನೆ:  ತಮ್ಮ ಪತಿ ಮನೆಯಲ್ಲಿ ರುವುದಕ್ಕಿಂತ ಸಮಾಜದಲ್ಲಿ ವ್ಯಸ್ತರಾಗಿರುವುದೇ ಹೆಚ್ಚು. ಅವರಿಗೆ ಸಮಾಜವೇ ಮನೆ. ಇಂದಿನ ಸಮಾರಂಭದಿಂದ ಮನಸ್ಸು ತುಂಬಿ ಬಂದಿದೆ; ಸದಾನಂದ ಶೆಟ್ಟಿ ಸಾಂಗತ್ಯ ಸಾರ್ಥಕವೆನಿಸಿದೆ ಎಂದು ಮೈನಾ ಶೆಟ್ಟಿ ಧನ್ಯತೆ ವ್ಯಕ್ತಪಡಿಸಿದರು.

ಭಾವ ಪರವಶರಾದ ಶೆಟ್ಟರು:  “ನನಗೆ 75 ಆಯಿತೇ? ಈ ಹೃದಯಸ್ಪರ್ಶಿ ಸಮ್ಮಾನದಿಂದ ಮನಸ್ಸು, ಹೃದಯ ತುಂಬಿ ಬಂದಿದೆ. ಈ ಎಲ್ಲ ಗೌರವ ನನ್ನ ಕುಟುಂಬ, ಪರಿವಾರಕ್ಕೆ, ನನ್ನೊಂದಿಗೆ ಹೆಜ್ಜೆ ಹಾಕುತ್ತಿರುವ ನಮ್ಮೆಲ್ಲ ಸಂಸ್ಥೆಗಳ ನೌಕರರಿಗೆ, ಒಡನಾಡಿಗಳಿಗೆ ಸಲ್ಲಬೇಕು. ಈ ಸಾಧನೆ ಎಲ್ಲರ ಸಹಕಾರದಿಂದ ಆಗಿದೆ. ಉಳಿದ ಆಯುಷ್ಯದಲ್ಲಿ ಸಮಾಜಮುಖೀಯಾಗಿ ಕೆಲಸ ಮಾಡುವ ಹುಮ್ಮಸ್ಸಿದೆ. ನಾನು ಅಲ್ಲ, ನಾವೆಲ್ಲರೂ ಸಮಾಜಕ್ಕೆ ಹಿತವಾಗುವ ಕೆಲಸವನ್ನು ಒಟ್ಟಾಗಿ ಮಾಡೋಣ ಎಂದು ಸದಾನಂದ ಶೆಟ್ಟಿ ಪ್ರತಿಕ್ರಿಯಿಸಿದರು.

ವಿಜಯನಾಥ ಶೆಟ್ಟಿಗೆ ನ್ಪೋರ್ಟ್ಸ್ ಸ್ಟಾರ್‌ -2017 ಪ್ರಶಸ್ತಿ ಪ್ರದಾನ: ಸದಾಭಿನಂದನೆ ಅಂಗವಾಗಿ ಶುಕ್ರವಾರ ರಾಜ್ಯ ಮಟ್ಟದ ವಿಶೇಷ ಕುಸ್ತಿ ಪಂದ್ಯಾಟ ಏರ್ಪಡಿಸಿದ್ದ ಶಾಸ್ತಾವು ಶ್ರೀ ಭೂತನಾಥೇಶ್ವರ ಕ್ಷೇತ್ರದ ಪ್ರಮುಖರಾದ ವಿಜಯನಾಥ ವಿಠಲ ಶೆಟ್ಟಿ ಅವರ ತುಳುನಾಡ ಕ್ರಿಡಾ ಚಟುವಟಿಕೆ ಪರಿಗಣಿಸಿ, ಸದಾನಂದ ಶೆಟ್ಟಿ ಅವರು “ನ್ಪೋರ್ಟ್ಸ್ ಸ್ಟಾರ್‌-2017′ ಪ್ರಶಸ್ತಿ ನೀಡಿ ಸಮ್ಮಾನಿಸಿದರು. ಕುಸ್ತಿ ಪಂದ್ಯಾಟದಲ್ಲಿ ವಿಜೇತ ಕುಸ್ತಿಪಟುಗಳಿಗೂ ಬಹುಮಾನ ವಿತರಿಸಿದರು.
ಯುವ ಕಲಾವಿದೆ ಶಬರಿ ಗಾಣಿಗ ಕಪ್ಪು ಕ್ಯಾನ್ವಾಸ್‌ನಲ್ಲಿ ಸದಾನಂದ ಶೆಟ್ಟಿ ಅವರ ಭಾವಚಿತ್ರ ರಚಿಸಿ ಸಮ್ಮಾನಿತ ದಂಪತಿಗೆ ಸಮರ್ಪಿಸಿದರು.

ಸಂಸದ ನಳಿನ್‌ಕುಮಾರ್‌ ಕಟೀಲು, ಮಿಜಾರುಗುತ್ತು ಆನಂದ ಆಳ್ವ, ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌, ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿಸೋಜ, ಶಾಸಕರಾದ ಕೆ. ಅಭಯಚಂದ್ರ, ಮೊದೀನ್‌ ಬಾವಾ, ಗಣೇಶ್‌ ಕಾರ್ಣಿಕ್‌, ಶಕುಂತಳಾ ಶೆಟ್ಟಿ, ಮುಖಂಡರಾದ ಡಾ| ಎ.ಜೆ. ಶೆಟ್ಟಿ, ಎಂ.ಬಿ. ಪುರಾಣಿಕ್‌, ಪ್ರದೀಪ್‌ ಕುಮಾರ ಕಲ್ಕೂರ, ಬಿ. ನಾಗರಾಜ ಶೆಟ್ಟಿ, ಕೃಷ್ಣ ಪಾಲೆಮಾರ್‌, ಕೆ.ಪಿ. ಜಗದೀಶ ಅಧಿಕಾರಿ, ಸುರೇಶ್‌ ಬಳ್ಳಾಲ್‌, ಕಿಶೋರ್‌ ಆಳ್ವ, ಈಶ್ವ ರ ಕಟೀಲು, ಡಾ| ಎಚ್‌. ಎಸ್‌. ಬಲ್ಲಾಳ್‌, ಡಾ| ಮಂಜುನಾಥ ಭಂಡಾರಿ, ಬೊಲ್ಯಗುತ್ತು ವಿವೇಕ ಶೆಟ್ಟಿ, ರಾಜವರ್ಮ ಬಲ್ಲಾಳ್‌, ಪ್ರಕಾಶ್‌ ಶೆಟ್ಟಿ ಬಂಜಾರ ಗ್ರೂಪ್‌, ಡಾ| ಭಾಸ್ಕರ ಶೆಟ್ಟಿ, ಕಣಚೂರು ಮೋನು, ಸವಣೂರು ಸೀತಾರಾಮ ರೈ, ಪಳ್ಳಿ ಕಿಶನ್‌ ಹೆಗ್ಡೆ, ಡಾ| ಕೃಪಾ ಅಮರ ಆಳ್ವ, ಯು.ಟಿ. ಇಫ್ತಿಕಾರ್‌, ಎ. ಕೃಷ್ಣಾನಂದ ಶೆಟ್ಟಿ, ಎ. ಸುಧೀರ್‌ ಪ್ರಸಾದ್‌ ಶೆಟ್ಟಿ, ಗುರುಕಿರಣ್‌, ತುಳುಕೂಟ ಕತಾರ್‌ನ ಅಧ್ಯಕ್ಷ ಮೂಡಂಬೈಲು ರವೀಶ ಶೆಟ್ಟಿ, ಜೀವನ್‌ ದಾಸ್‌, ವಾಮನ್‌ ಮರೋಳಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು.

ಸಮಿತಿ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಪ್ರಸ್ತಾವನೆಗೈದರು. ಕದ್ರಿ ನವನೀತ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಸಾಹಿಲ್‌ ರೈ ನಿರೂಪಿಸಿದರು.
“ಸದಾನಂದ ದಿಬ್ಬಣ’: ಸದಾನಂದ ಶೆಟ್ಟಿ -ಮೈನಾ ಎಸ್‌. ಶೆಟ್ಟಿ ದಂಪತಿ, ಪರಿವಾರ, ಅಭಿಮಾನಿಗಳ “ದಿಬ್ಬಣ’ವನ್ನು ಕೆ. ಅಮರನಾಥ ಶೆಟ್ಟಿ, ಡಾ| ಎಂ. ಮೋಹನ ಆಳ್ವ, ಕದ್ರಿ ನವನೀತ ಶೆಟ್ಟಿ, ಲೀಲಾಧರ ಕರ್ಕೇರಾ ಹಾಗೂ ಸಮಿತಿಗಳ ಪ್ರಮುಖರು ಸಭಾಂಗಣಕ್ಕೆ ಬರ ಮಾಡಿಕೊಂಡರು. ಆಳ್ವಾಸ್‌ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಂಟಪ ಪ್ರಭಾಕರ ಉಪಾಧ್ಯ ನಿರ್ದೇಶಿತ, 20 ನಿಮಿಷಗಳ ಬಡಗುಯಕ್ಷ ರೂಪಕ “ಶ್ರೀ ರಾಮ ಪಟ್ಟಾಭಿಷೇಕ’ ಪ್ರಸ್ತುತಪಡಿಸಿದರು.

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.