ಜಿನಸೇನ ಪಟ್ಟಾಚಾರ್ಯರಿಗೆ ಗೌರವ: “ಮಠಗಳ ಸೇವಾಕಾರ್ಯ ವಿಸ್ತರಿಸಲಿ’
Team Udayavani, Feb 15, 2019, 4:40 AM IST
ಬೆಳ್ತಂಗಡಿ: ಸಮಾಜ ಸೇವೆಯಲ್ಲಿ ತೊಡಗುವವರಿಗೆ ಮಠಗಳಿಂದ ಅವಶ್ಯ ಮಾರ್ಗದರ್ಶನ ವಾಗಬೇಕಿದೆ. ಹೀಗಿದ್ದಾಗ ನಮ್ಮ ನಡುವಿನ ಕುಂದು ಕೊರತೆಗಳನ್ನು ಹೋಗಲಾಡಿಸುವ ಸುವಿಯೋಗ ಪ್ರಾಪ್ತಿಯಾಗುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಪಂಚಮಹಾವೈಭವ ಮಂಟಪದಲ್ಲಿ ಗುರುವಾರ ನಾಂದಿಣಿ ಮಠದ ಶ್ರೀ ಜಿನಸೇನ ಪಟ್ಟಾಚಾರ್ಯವರ್ಯ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.
ಮುನಿಗಳು ಆತ್ಮಲಾಭಕ್ಕಾಗಿ ಲೋಕ ಸಂಚಾರ ಮಾಡುತ್ತಾರೆ. ಭಟ್ಟಾರಕರು ಮಠ ಕಟ್ಟಿ ಸಮಾಜ ಸನ್ಮಾರ್ಗದಲ್ಲಿ ಮುನ್ನಡೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಶ್ರಾವಕ ಶ್ರಾವಕಿಯರ ಸಂಘಟನೆ ಸಮಾಜ ಬಲಿಷ್ಠವಾಗಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕಿದ್ದು, ಸಮಾಜದ ಕೊರಗು ನೀಗಿಸುವ ಕಾರ್ಯವಾಗಬೇಕಿದೆ ಎಂದರು.
ಮಠಗಳು ಜೈನ ಸಮಾಜಕ್ಕೆ ಮಾರ್ಗ
ದರ್ಶನ ನೀಡುತ್ತಾ ಬಂದಿವೆ. ಕೆಲವು ಮಠಗಳು ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದರು.
ಅರಹಂತಗಿರಿ ಮಠದ ಸೇವಾ ಚಟುವಟಿಕೆಗಳು ಹರ್ಷಕರ ವಿಚಾರ. ಮಠದಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಧಾರ್ಮಿಕ ವಿದ್ಯೆ ಪಡೆಯುತ್ತಿದ್ದಾರೆ ಎಂದ ಹೆಗ್ಗಡೆ ಯವರು, ಆತ್ಮಜ್ಞಾನಕ್ಕಾಗಿ ಮುನಿಗಳು ದೇಶ ಸಂಚಾರ ನಡೆಸಿದರೆ ಮಠದ ಭಟ್ಟಾರಕರು ಸಾಮಾಜಿಕ ಕಾರ್ಯ ಗಳನ್ನು ನಡೆಸುತ್ತಿದ್ದಾರೆ ಎಂದರು.
ಶ್ರೀ ಜಿನಸೇನ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಡಾ| ಹೆಗ್ಗಡೆಯವರು ಧರ್ಮಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮಠಕ್ಕೆ ಮಾರ್ಗ ದರ್ಶನ ನೀಡಲು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಅರಹಂತಗಿರಿ ಶ್ರೀ ಧವಲಕೀರ್ತಿ ಪಟ್ಟಾ ಚಾರ್ಯ ವರ್ಯ ಸ್ವಾಮೀಜಿ, ಕನಕಗಿರಿಯ ಶ್ರೀ ಭುವನಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಹುಂಚದ ಶ್ರೀ ಮದ್ದೇವೇಂದ್ರ ಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಶ್ರೀ ಭಾನುಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಬೆಳ್ಳಿಯ ದೀಪಗಳನ್ನು ನೀಡಿ ಗೌರವಿಸಲಾಯಿತು.
ಡಿ. ಹಷೇìಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ನಿರಂಜನ್ ಕುಮಾರ್ ಉಪಸ್ಥಿತರಿದ್ದರು. ಸಂಪತ್ ಕುಮಾರ್ ಸ್ವಾಗತಿಸಿ, ಮಿತ್ರಸೇನ ಶೆಟ್ಟಿ ಹಾಗೂ ಸುವೀರ ಜೈನ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.