ಅನಾರೋಗ್ಯ ಸ್ಥಿತಿ: ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪಾಣಾಜೆ ಗ್ರಾ.ಪಂ.
Team Udayavani, Apr 29, 2022, 3:07 PM IST
ಪಾಣಾಜೆ:ಆರ್ಲಪದವು ಮೇಲಿನ ಪೇಟೆಯ ಪ್ರಯಾಣಿಕರ ತಂಗುದಾಣದಲ್ಲಿ ಅನಾರೋಗ್ಯ ಒಳಗಾಗಿದ್ದು ಪ್ರಯಾಣಿಕನ್ನು ರಾತ್ರಿ ಉಪಚರಿಸಿ ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಎ.28ರಂದು ನಡೆದಿದೆ.
ಅನಾರೋಗ್ಯ ಒಳಗಾಗಿದ್ದ ವ್ಯಕ್ತಿ ಕೃಷ್ಣ ಎಂದು ಹೇಳುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವಿಷಯ ತಿಳಿದು ಗ್ರಾ.ಪಂ.ಅಧ್ಯಕ್ಷೆ ಭಾರತಿ ಭಟ್ ಸಿ. ಯಚ್. ಬುಧವಾರ ರಾತ್ರಿ ಪತಿಯೊಂದಿಗೆ ವ್ಯಕ್ತಿ ಇರುವ ಆರ್ಲಪದವು ಮೇಲಿನ ಪೇಟೆಯ ಪ್ರಯಾಣಿಕರ ತಂಗುದಾಣಕ್ಕೆ ಬಂದು ಉಪಚರಿಸಿ ನೀರು,ಆಹಾರ ವನ್ನು ನೀಡಿದರು, ಸದಸ್ಯರು ಜೆತೆಗಿದ್ದರು.
ಗುರುವಾರ ಬೆಳಿಗ್ಗೆ ಅಧ್ಯಕ್ಷರು ಪಂಚಾಯತ್ ಪಿಡಿಒಗೆ ಮಾಹಿತಿ ನೀಡಿ ಅಂಬ್ಯುಲೆನ್ಸ್ ಗೆ ಬರಲು ತಿಳಿಸಿದರು.ಈ ಸಂದರ್ಭದಲ್ಲಿ ಹೊಯ್ಸಳ ವಾಹನ ಕೂಡ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯ ಮಾಹಿತಿ ಕಲೆ ಹಾಕಿದೆ. ಹೆಚ್ಚಿನ ವಿವರವನ್ನು ನೀಡಲು ಅಸಾಧ್ಯವಾದ ಸ್ಥಿತಿಯಲ್ಲಿ ಆ ವ್ಯಕ್ತಿ ಇದ್ದರು.
ಊರಿನ ಬಗ್ಗೆ ಕೇಳಿದರೆ ಒಮ್ಮೆ ಧರ್ಮಸ್ಥಳ,ಕೋನಡ್ಕ,ನೇತ್ರಾವತಿ ಎಂದು ಹೇಳುತ್ತಿದ್ದಾನೆ.ಪಾಣಾಜೆ ಪಂಚಾಯತ್,ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಸಿ ಯಚ್,ಸದಸ್ಯರಾದ ಸುಭಾಸ್ ಚಂಬರಕಟ್ಟ,ಜಯಶ್ರೀ ದೇವಸ್ಯ,ಕೃಷ್ಣಪ್ಪ ಪೂಜಾರಿ,ಪಿಡಿಒ ಚಂದ್ರಮತಿ,ಕಾರ್ಯದರ್ಶಿ ಆಶಾ,ಸಿಬ್ಬಂದಿಗಳು,ಆಶಾ ಕಾರ್ಯಕರ್ತರು,ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.