ಬಿಸಿಲ ತಾಪ: ತಂಪು ಪಾನೀಯಗಳಿಗೆ ಭಾರೀ ಬೇಡಿಕೆ
Team Udayavani, Oct 26, 2018, 11:32 AM IST
ಸುಬ್ರಹ್ಮಣ್ಯ : ಸಂಜೆ ವೇಳೆಯಾದರೂ ಪ್ರತಿದಿನ ಸುರಿಯುತ್ತಿದ್ದ ಮಳೆ ಸದ್ಯ ಬರುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಹೊತ್ತು ತುಸು ಚಳಿಯ ವಾತಾವರಣ ಕಂಡು ಬಂದಿದೆ. ದಿನದ ತಾಪಮಾನ ಕೂಡ ಏರಿಕೆಯಾಗಿದ್ದು, ಭಾರೀ ಸೆಕೆ ಇದೆ.
ನಗರ ಮಾತ್ರವಲ್ಲ ಅತ್ಯಂತ ಗ್ರಾಮೀಣ ಭಾಗದಲ್ಲೂ ಸೆಕೆ ಪ್ರಮಾಣ ಹೆಚ್ಚಿದೆ. ನೀರಿನ ಕಣಜಗಳಾಗಿರುವ ನದಿ, ಹಳ್ಳ, ಕೊಳ್ಳ, ಕೆರೆ, ಬಾವಿ, ತೋಡುಗಳಲ್ಲಿ ಮೊನ್ನೆ ತನಕ ನೀರಿನ ಪ್ರಮಾಣ ಅಧಿಕವಿತ್ತು. ಬಳಿಕ ನೀರಿನ ಹರಿವಿನ ಪ್ರಮಾಣ ದಿಢೀರನೆ ಕುಸಿತ ಕಂಡಿದೆ. ಎರಡು ವರ್ಷಗಳ ಹಿಂದೆ ತಾಲೂಕಿನ ಜನತೆಗೆ ನೀರಿನ ಬರದ ಪ್ರದರ್ಶನ ಎದುರಾಗಿತ್ತು. ಮತ್ತದೇ ಸ್ಥಿತಿ ಬರುವ ದಿನಗಳು ದೂರವಿಲ್ಲ. ಯಾಕೆಂದರೆ ಈಗಿನ ಆರಂಭದ ಬಿಸಿಲ ತಾಪವೇ ಬರಗಾಲಕ್ಕೆ ಮುನ್ನುಡಿ ಬರೆದಂತೆ ಗೋಚರಿಸುತ್ತಿದೆ.
ಸೀಯಾಳಕ್ಕೂ ಬೇಡಿಕೆ
ಸೆಕೆ ತೀವ್ರಗೊಂಡ ಕಾರಣ ತಂಪು ಪಾನೀಯಗಳಿಗೆ ಬೇಡಿಕೆ ಕಂಡುಬಂದಿದೆ. ಕೂಲ್ ಡ್ರಿಂಕ್ಸ್ ಅಂಗಡಿಗಳಲ್ಲಿ ಹೆಚ್ಚಿನ ಜನರು ತಂಪು ಪಾನೀಯಗಳಿಗೆ ಮೊರೆ ಹೋಗುವುದು ಕಂಡುಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಬಾಟಲಿಗಳ ಮಾರಾಟವೂ ಆಗುತ್ತಿವೆ. ಸೀಯಾಳಕ್ಕೂ ಬೇಡಿಕೆ ಇದೆ ಎನ್ನುತ್ತಾರೆ ತಂಪು ಪಾನೀಯ ಅಂಗಡಿಗಳ ಮಾರಾಟಗಾರರು. ಎಳನೀರು, ಮಜ್ಜಿಗೆ, ಹಣ್ಣುಗಳ ರಸ, ಕಬ್ಬಿನ ಹಾಲು, ಎಳ್ಳು ಜ್ಯೂಸ್, ಪುನರ್ಪುಳಿ, ಕಲ್ಲಂಗಡಿ, ಐಸ್ ಕ್ಯಾಂಡಿ ಇನ್ನಿತರ ಬಾಯಾರಿಕೆ ನೀಗಿಸುವ ಉತ್ಪನ್ನಗಳಿಗೆ ಬೇಡಿಕೆ ಆರಂಭಗೊಂಡಿದೆ. ಮಾರ್ಗದ ಬದಿ ಅಲ್ಲಲ್ಲಿ ತಂಪು ಪಾನೀಯಗಳ ಅಂಗಡಿ, ಕಲ್ಲಂಗಡಿ ಹಾಗೂ ಜ್ಯೂಸ್ ಸೆಂಟರ್‌ಗಳು ತಲೆ ಎತ್ತಲಾರಂಭಿಸಿವೆ.
ಮಳೆ ಪ್ರಮಾಣದಲ್ಲಿ ವ್ಯತ್ಯಯ
ಸುಳ್ಯ ತಾಲೂಕಿನಲ್ಲಿ ಪ್ರತಿವರ್ಷ ಸರಾಸರಿ 4,490 ಮಿ.ಮೀ. ವಾಡಿಕೆ ಮಳೆ ಬೀಳುತ್ತದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಮುಂಗಾರು ಮಳೆಯಲ್ಲಿ ಶೇ. 18ರಷ್ಟು ಕೊರತೆ ಈ ಹಿಂದೆ ದಾಖಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣ ಕೇಂದ್ರ ಜಿಲ್ಲೆಯನ್ನು ಮುಂಗಾರು ಕೊರತೆ ಪಟ್ಟಿಗೂ ಸೇರಿಸಿದೆ. ಸುಳ್ಯ ತಾಲೂಕಿನಲ್ಲಿ ಹರಿಯುವ ಪ್ರಮುಖ ನದಿಗಳಾದ ಸುಬ್ರಹ್ಮಣ್ಯ, ಕುಮಾರಧಾರಾ ಹಾಗೂ ಸುಳ್ಯದ ಪಯಸ್ವಿನಿ ನದಿಗಳಲ್ಲಿ ಮಳೆ ಬಳಿಕ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ. ಹರಿದು ಹೋಗುವ ನದಿ, ಹೊಳೆಗಳ ನೀರನ್ನು ತಡೆದು ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳು ನಡೆಸಲು ಸಿದ್ಧತೆಗಳು ಇನ್ನಷ್ಟೇ ನಡೆಯಬೇಕಿದೆ.
ನಿಭಾಯಿಸಬಹುದು
ಪ್ರತಿ ವರ್ಷ ಬರುತ್ತಿರುವ ಜಲಕ್ಷಾಮವನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಆಸಕ್ತಿ ವಹಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ನೀರಿನ ಕೊರತೆಯನ್ನು ನಿಭಾಯಿಸಬಹುದು. ಬೇಸಗೆ ಅರಂಭದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಕುಡಿಯುವ ನೀರು ಸರಬರಾಜಿಗೂ ಸಮಸ್ಯೆ ಆಗುವ ದಿನಗಳು ದೂರವಿಲ್ಲ. ನೀರು ಪೂರೈಕೆಗೆ ಲೆಕ್ಕಾಚಾರವಿಡುವ ಗ್ರಾ.ಪಂ., ತಾ.ಪಂ., ಜಿ.ಪಂ. ಗಳಲ್ಲಿ ಮತ್ತು ಮನೆಗಳಲ್ಲಿ ಎಲ್ಲ ವಿಷಯಗಳಿಗೂ ಬಜೆಟ್ ಮಾಡುವಂತೆ ನೀರಿಗೂ ಬಜೆಟ್ ಮಾಡುವುದರಿಂದ ಜಲಕ್ಷಾಮದಿಂದ ಅಲ್ಪಮಟ್ಟಿಗೆ ಬಚಾವಾಗಲು ಸಾಧ್ಯವಾಗಲೂಬಹುದು.
ತಾಪ ಹೆಚ್ಚಿದೆ
ಕೆಲ ದಿನಗಳಿಂದ ಬಿಸಿಲ ತಾಪ ಹೆಚ್ಚಿದೆ. ತಂಪು ಪಾನೀಯಗಳಿಗೆ ಹೆಚ್ಚಿನ ಬೇಡಿಕೆಯನ್ನು ಸಾರ್ವಜನಿಕರು ಇಡುತ್ತಿದ್ದಾರೆ. ನೀರು, ತಂಪು ಪಾನೀಯ, ಐಸ್ ಕ್ಯಾಂಡಿ ಇನ್ನಿತರ ಬಾಯಾರಿಕೆ ನೀಗಿಸುವ ದ್ರವಾಹಾರಗಳಿಗೆ ಬೇಡಿಕೆ ಇದೆ.
– ಪ್ರಶಾಂತ್
ಜ್ಯೂಸ್ ಸೆಂಟರ್ ಮಾಲಕ, ಸುಬ್ರಹ್ಮಣ್ಯ
ವಿಶೇಷ ಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.