ಪಿವಿಎಸ್, ಬಲ್ಮಠ ಸಹಿತ ಎಲ್ಲೆಡೆ ಗಂಟೆಗಟ್ಟಲೆ ಬ್ಲಾಕ್
Team Udayavani, Jun 19, 2018, 11:22 AM IST
ಮಹಾನಗರ : ಬಂಟ್ಸ್‌ಹಾಸ್ಟೆಲ್ ಹಾಗೂ ನಂತೂರು ಬಳಿ ಎರಡು ವಾಹನಗಳು ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತಿದ್ದ ಪರಿಣಾಮ ಹಾಗೂ ವಾಹನಗಳ ದಟ್ಟನೆಯಿಂದಾಗಿ ಸೋಮವಾರ ಮಧ್ಯಾಹ್ನದ ಅನಂತರ ನಗರದ ಬಹಳಷ್ಟು ಕಡೆ ಯಾರೂ ಊಹಿಸದಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಸಂಜೆಹೊತ್ತು ಕಚೇರಿ ಮುಗಿಸಿ ಮನೆಗೆ ತೆರಳುವವರು, ಶಾಲೆ-ಕಾಲೇಜು ಬಿಟ್ಟು ಮನೆಗೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ನಡುವೆ ಸಿಲುಕಿ ಸುಮಾರು ಎರಡರಿಂದ ಮೂರು ತಾಸು ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಆರಂಭವಾಗಿದ್ದ ಟ್ರಾಫಿಕ್ ಸಮಸ್ಯೆ ರಾತ್ರಿ 7 ಗಂಟೆಯಾದರೂ ಬಹುತೇಕ ಕಡೆಗಳಲ್ಲಿ ಮುಂದುವರಿದಿತ್ತು. ಇದು ಅನಿರೀಕ್ಷಿತವಾಗಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಏಕೆಂದರೆ, ಸೋಮವಾರ ನಗರದಲ್ಲಿ ಯಾವುದೇ ಪ್ರತಿಭಟನೆ ಅಥವಾ ದೊಡ್ಡ ಮಟ್ಟದ ಕಾರ್ಯಕ್ರಮಗಳು ಇರಲಿಲ್ಲ. ಜತೆಗೆ, ಸಂಚಾರದಲ್ಲಿ ಮಾರ್ಪಾಟು ಕೂಡ ಇರಲಿಲ್ಲ. ಹೀಗಿರುವಾಗ, ಏಕಾಏಕಿ ಪ್ರಮುಖ ರಸ್ತೆಗಳಲ್ಲಿ ಮೂರ್‍ನಾಲ್ಕು ತಾಸು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತು ಪರದಾಡುವಂತೆ ಮಾಡಿದ್ದು ನಗರವಾಸಿಗಳಿಗೂ ಆಶ್ಚರ್ಯವುಂಟುಮಾಡಿದೆ.
ರಸ್ತೆಗಳು ಬ್ಲಾಕ್!
ನಗರದ ಪಿವಿಎಸ್-ಬಂಟ್ಸ್‌ಹಾಸ್ಟೆಲ್ ರಸ್ತೆ, ಪಂಪುವೆಲ್-ಬೆಂದೂರ್‌ವೆಲ್, ಪಂಪುವೆಲ್ -ನಂತೂರು, ಪಿವಿಎಸ್-ಲಾಲ್‌ಬಾಗ್, ಕಂಕನಾಡಿ-ಪಳ್ನೀರ್, ಬಲ್ಮಠ-ಬೆಂದೂರ್‌ವೆಲ್ ಹೀಗೆ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ತೀವ್ರವಾಗಿತ್ತು.
ಪೊಲೀಸರ ಹರಸಾಹಸ
ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೋಲಿಸರು ಪರದಾಡದ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಯೊಂದೆಡೆಯೂ ಎರಡು-ಮೂರು ಪೊಲೀಸರು ನಿಂತು ಸಂಚಾರ ನಿಯಂತ್ರಿಸಿದರು. ಅಡ್ಡಾದಿಡ್ಡಿ ವಾಹನ ಚಲಾಯಿಸಿದವರಿಗೆ ಗದರಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸಿದರು. ಮಧ್ಯಾಹ್ನದಿಂದ ರಾತ್ರಿ ತನಕವೂ ಟ್ರಾಫಿಕ್ ಜಾಮ್ ಇದ್ದುದರಿಂದ ರಾತ್ರಿವರೆಗೂ ರಸ್ತೆಯಲ್ಲೇ ಬೀಡು ಬಿಟ್ಟಿದ್ದರು.
5 ನಿಮಿಷದ ದಾರಿಗೆ 1 ಗಂಟೆ
ಸಾಮಾನ್ಯವಾಗಿ ಬಸ್ಸುಗಳು ಹಂಪನಕಟ್ಟೆ, ಪಿವಿಎಸ್ ಭಾಗಗಳಿಂದ ಪಂಪುವೆಲ್ ತಲುಪಬೇಕಾದರೆ ಐದು ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಸೋಮವಾರ ಸಂಜೆ 5 ನಿಮಿಷದ ದಾರಿ ಸಾಗಲು ಒಂದು ಗಂಟೆ ತೆಗೆದುಕೊಂಡಿದ್ದವು. ಬಂಟ್ಸ್‌ಹಾಸ್ಟೆಲ್ ವೃತ್ತದಲ್ಲಿ 15 ನಿಮಿಷ, ಜ್ಯೋತಿ ವೃತ್ತ 15 ನಿಮಿಷ, ಬಲ್ಮಠ ಸರ್ಕಲ್ 15 ನಿಮಿಷ, ಕಂಕನಾಡಿಯಲ್ಲಿ 15 ನಿಮಿಷ ಹೀಗೆ ಎಲ್ಲಾ ಕಡೆಗಳಲ್ಲೂ ನಿಂತು ಸಾಗದ ಬೇಕಾದ ಸ್ಥಿತಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.