ಕಾರ್ಡ್‌ ಮಾಡಿಸುವುದು ಹೇಗೆ, ನೀಡಬೇಕಾದ ದಾಖಲೆ ಯಾವುದು?


Team Udayavani, Nov 15, 2018, 10:16 AM IST

15-november-1.gif

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ನಗರ ಆಸ್ತಿ ಮಾಲಕತ್ವದ ದಾಖಲೆ (ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್‌-ಯುಪಿಒಆರ್‌)’ ವ್ಯವಸ್ಥೆಯನ್ನು ನಗರ ಪ್ರದೇಶಗಳ ಆಸ್ತಿಗಳ ಎಲ್ಲ ವ್ಯವಹಾರಗಳಿಗೆ ಡಿಸೆಂಬರ್‌ 1ರಿಂದ ರಾಜ್ಯ ಸರಕಾರವು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಈ ಪ್ರಾಪರ್ಟಿ ಕಾರ್ಡ್‌ ನೋಂದಣಿ ಪ್ರಕ್ರಿಯೆಗೆ ನಗರವಾಸಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಪ್ರಾಯೋಗಿಕವಾಗಿ ಪ್ರಾಪರ್ಟಿ ಕಾರ್ಡ್‌ ನೋಂದಣಿ ಪ್ರಕ್ರಿಯೆಯು ನಗರದಲ್ಲಿ 2012ರಲ್ಲೇ ಪ್ರಾರಂಭಗೊಂಡಿದ್ದು, ಇಲ್ಲಿವರೆಗೆ ಅಂದರೆ ನ. 12ರ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 77,381ಆಸ್ತಿಗಳ ದಾಖಲೆಗಳನ್ನು ಪ್ರಾಪರ್ಟಿ ಕಾರ್ಡ್‌ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಒಟ್ಟು 32 ಕಂದಾಯ ಗ್ರಾಮಗಳಲ್ಲಿನ 60 ವಾರ್ಡ್‌ಗಳಲ್ಲಿ ಪ್ರಾಪರ್ಟಿ ಕಾರ್ಡ್‌ ಇದೀಗ ಕಡ್ಡಾಯವಾಗಿ ಅನುಷ್ಠಾನಗೊಳ್ಳುತ್ತಿದೆ. ಈ ಕಂದಾಯ ಗ್ರಾಮಗಳನ್ನು 6 ವಲಯಗಳಾಗಿ ಮತ್ತು 30 ಸೆಕ್ಟರ್‌ಗಳಾಗಿ ವಿಂಗಡಿಸಿದ್ದು, ಅಳತೆಗೆ ಒಳಪಟ್ಟ 1,50,581 ಆಸ್ತಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ನ. 12ರ ವರೆಗೆ 77,381 ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. 31,951 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ಗಳನ್ನು ತಯಾರಿಸಲಾಗಿದೆ. ಆ ಪೈಕಿ ಒಟ್ಟು 26,456 ಆಸ್ತಿಗಳ ಕರಡು ಪಿಆರ್‌ ಕಾರ್ಡ್‌ ವಿತರಿಸಲಾಗಿದೆ. ಇನ್ನು 23,615 ಅಂತಿಮ ಪಿಆರ್‌ ಕಾರ್ಡ್‌ಗಳು ಸಿದ್ಧಗೊಂಡಿದ್ದು, ಆ ಪೈಕಿ 18,547ಆಸ್ತಿಗಳ ಅಂತಿಮ ಪಿಆರ್‌ ಕಾರ್ಡ್‌ಗಳನ್ನು ಆಸ್ತಿ ಮಾಲಕರಿಗೆ ವಿತರಿಸಲಾಗಿದೆ.

ಆಸ್ತಿ ಮಾರಾಟಗಾರರಿಗಷ್ಟೇ ಕಡ್ಡಾಯ
ಡಿ. 1ರ ಅನಂತರ ಮನಪಾ ವ್ಯಾಪ್ತಿಯಲ್ಲಿ ಮಾಲಕರು ತಮ್ಮ ಮನೆ, ಆಸ್ತಿಗಳನ್ನು ಮಾರಾಟ ಮಾಡುವುದಿದ್ದರೆ ಅವರಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾಗಿ ಇರಬೇಕಾಗುತ್ತದೆ. ಈ ಕಾರ್ಡ್‌ ಹೊಂದಿಲ್ಲದಿದ್ದರೆ ಇನ್ನು ಮುಂದೆ ಯಾವುದೇ ಯಾವುದೇ ಆಸ್ತಿ ಪರಭಾರೆ ಅಥವಾ ವ್ಯವಹಾರ ನಡೆಸಲು ನಿಯಮಾನುಸಾರ ಸಾಧ್ಯವಾಗುವುದಿಲ್ಲ. ಆದರೆ, ಮನೆ, ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಉದ್ದೇಶಿಸದವರು ಸದ್ಯಕ್ಕೆ ಪ್ರಾಪರ್ಟಿ ಕಾರ್ಡ್‌ ಮಾಡಿಸುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸಾಮಾನ್ಯ ವೋಟರ್‌ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌ ಮಾಡಿಸುವ ರೀತಿಯಲ್ಲಿಯೇ ನಿಧಾನವಾಗಿ ತಮ್ಮ ಅನುಕೂಲ ನೋಡಿಕೊಂಡು ಪ್ರಾಪರ್ಟಿ ಕಾರ್ಡ್‌ ಮಾಡಿಸಿಕೊಳ್ಳಬಹುದು ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ. 

ಈಗ ಕಾರ್ಡ್‌ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ನಗರವಾಸಿಗಳಿಂದ ನೋಂದಣಿಗೆ ಒತ್ತಡ ಏಕಾಏಕಿ ಜಾಸ್ತಿಯಾಗುತ್ತಿದೆ. ಈ ಕಾರಣಕ್ಕೆ ನಗರದಲ್ಲಿ 12 ಹೊಸ ಭೂಮಾಪಕರನ್ನು ಈ ಕಾರ್ಯಕ್ಕಾಗಿ ನೇಮಿಸಲಾಗಿದೆ. ಇಲ್ಲಿಯವರೆಗೆ 8 ಭೂಮಾಪಕರು ಕರ್ತವ್ಯ ನಡೆಸುತ್ತಿದ್ದರು. ಇನ್ನೂ ಐವರನ್ನು ಹೆಚ್ಚುವರಿಯಾಗಿ ನೇಮಕಕ್ಕೆ ಜಿಲ್ಲಾಡಳಿತ ತೀರ್ಮಾನಿಸಿದೆ. 

ಇದುವರೆಗೆ ಸುಮಾರು 77,381 ಆಸ್ತಿಗಳಿಗೆ ಸಂಬಂಧಿಸಿದ ಎಲ್ಲ ದಾಸ್ತಾವೇಜು/ದಾಖಲೆಗಳನ್ನು ಯುಪಿಒಆರ್‌ ತಂತ್ರಾಂಶದಲ್ಲಿ ಸ್ಕ್ಯಾನ್  ಮಾಡಿ ಸಂಗ್ರಹಿಸಿ ಡೇಟಾ ಎಂಟ್ರಿ ಕಾರ್ಯ ನಡೆಯುತ್ತಿದೆ. ಈ ರೀತಿ ಡೇಟಾ ಎಂಟ್ರಿ ಮಾಡಿದ ದಾಖಲೆಗಳಿಗೆ ಯುಪಿಒಆರ್‌ ತಂತ್ರಾಂಶದ ಮೂಲಕ ಹಕ್ಕು ವಿಚಾರಣೆ ಪ್ರಕ್ರಿಯೆ ನಡೆದು ಕರ್ನಾಟಕ ಭೂಕಂದಾಯ, ನಿಯಮ 1966ರ ನಿಯಮ 83 (1) ಹಾಗೂ ನಿಯಮ 84 (4) ಪ್ರಕಾರ ಕರಡು ಪಿ.ಆರ್‌. ಕಾರ್ಡ್‌ ತಯಾರಿಸಿ ಸಂಬಂಧಪಟ್ಟ ಆಸ್ತಿಯ ಮಾಲಕರಿಗೆ ನೀಡಲಾಗುತ್ತದೆ. ಕರಡು ಪಿ.ಆರ್‌. ಕಾರ್ಡ್‌ ತಯಾರಿಸಿ ಆಸ್ತಿದಾರರಿಗೆ ಜಾರಿಯಾದ ದಿನಾಂಕದಿಂದ 30 ದಿನಗಳ ಅವಧಿಯ ಒಳಗೆ ಆಕ್ಷೇಪಣೆ ಸಲ್ಲಿಸಲು ನಿಯಮಾನುಸಾರ ಅವಕಾಶವಿದೆ.

ಆರಂಭದಲ್ಲಿ ಮಾಲಕರಿಗೆ ಕರಡು ಕಾರ್ಡ್‌ ನೀಡಲಾಗುತ್ತಿದ್ದು, ಅದರಲ್ಲಿ ಏನಾದರೂ ತಿದ್ದುಪಡಿ ಅಥವಾ ಆಕ್ಷೇಪಣೆ ಗಳಿದ್ದಲ್ಲಿ, ಅವಶ್ಯಕ ದಾಖಲೆ ಯೊಂದಿಗೆ ಅಂಚೆ ಮೂಲಕ ಅಥವಾ ಕಚೇರಿ ಅವಧಿ ಯಲ್ಲಿ ಖುದ್ದು ಸಲ್ಲಿಸಬಹುದು. ವಿಚಾರಣೆಯಾದ ಅನಂತರದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಪ್ರಾಪರ್ಟಿ ಕಾರ್ಡ್‌ ಪ್ರಮಾಣಪತ್ರ ವಿತರಿಸ ಲಾಗುತ್ತದೆ. ಆಸ್ತಿಯ ಮಾಲಕತ್ವದಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ, ವಿವರಗಳೊಂದಿಗೆ ಹಾಗೂ ಅಗತ್ಯ ದಸ್ತಾವೇಜು/ದಾಖಲೆಗಳೊಂದಿಗೆ ಯುಪಿಒಆರ್‌ ಪ್ರಾಧಿಕಾರದ ಗಮನಕ್ಕೆ ತರಬಹುದು. ಒಂದುವೇಳೆ ಆಸ್ತಿದಾರರು ಆಸ್ತಿಯ ಮೇಲೆ ಬ್ಯಾಂಕ್‌ನಿಂದ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಲ್ಲಿ ಅಥವಾ ಭೋಗ್ಯಕ್ಕೆ ಒಳಪಡಿಸಿದಲ್ಲಿ ಅಥವಾ ಸಾಲ ತೀರಿಸಿದ ಮಾಹಿತಿಯನ್ನು ಪ್ರಾಪರ್ಟಿ ಕಾರ್ಡ್‌ ಪ್ರಮಾಣಪತ್ರದಲ್ಲಿ ಕಾಲೋಚಿತಗೊಳಿ ಸುವುದಕ್ಕೆ ಯುಪಿ ಒಆರ್‌ ಕಚೇರಿಯನ್ನು ಸಂಪರ್ಕಿಸಬಹುದು.

ವಿಚಾರಣಾಧಿಕಾರಿಯು ಆಸ್ತಿಯ ಮಾಲಕತ್ವದ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಅಂತಿಮಗೊಳಿಸಿದ ಬಳಿಕ ದೃಢೀಕರಣಕ್ಕಾಗಿ ಬೆರಳಚ್ಚುಗಳನ್ನು ನೋಂದಾಯಿಸಲು ಯುಪಿಒಆರ್‌ ಕಚೇರಿಗೆ ಹಾಜರಾಗಿ ಯಾವುದಾದರೂ ಒಂದು (ಆಧಾರ್‌ ಕಾರ್ಡ್‌/ಪಾನ್‌ ಕಾರ್ಡ್‌ ಅಥವಾ ಸರಕಾರದಿಂದ ವಿತರಿಸಿದ ಗುರುತಿನ ಚೀಟಿ) ದಾಖಲೆಯಾಗಿ ನೀಡುವುದು ಕಡ್ಡಾಯ.

ನಿಗದಿಪಡಿಸಿದ ಶುಲ್ಕವನ್ನು ಯುಪಿಒಆರ್‌ ತಂತ್ರಾಂಶದಲ್ಲಿಯೇ ಪಾವತಿ ಮಾಡುವುದರೊಂದಿಗೆ ಅಂತಿಮ ಪಿ.ಆರ್‌. ಕಾರ್ಡ್‌ ಪ್ರಮಾಣಪತ್ರವನ್ನು ಪಡೆಯಬೇಕು. ಪಿ.ಆರ್‌. ಕಾರ್ಡ್‌ ಪ್ರಮಾಣಪತ್ರವು ಅಂತಿಮಗೊಂಡ ಅನಂತರ ಯುಪಿಒಆರ್‌ ತಂತ್ರಾಂಶವು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜನೆಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ನೋಂದಾವಣಿಗೆ ಇದು ಕಡ್ಡಾಯ. ಕಾವೇರಿ ತಂತ್ರಾಂಶದಲ್ಲಿ ನೋಂದಣಿಯಾದ ಬಳಿಕ ನಿಯಮಾನುಸಾರ ಮ್ಯುಟೇಷನ್‌ ಪ್ರಕ್ರಿಯೆಯಂತೆ ಆಸ್ತಿಯ ಮಾಲಕತ್ವದಲ್ಲಿ ಬದಲಾವಣೆಯಾದಂತೆ ಇದರಲ್ಲೂ ಬದಲಾವಣೆ ಮಾಡಲಾಗುತ್ತದೆ.  

2012ರಿಂದ ಈ ಯೋಜನೆ ಪ್ರಾರಂಭಗೊಂಡು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ಆಸ್ತಿಗೂ ಸಂಬಂಧಿಸಿದಂತೆ ನಗರಾಸ್ತಿ ಮಾಲಕತ್ವ ನಿರ್ಧರಿಸಲು ಕರ್ನಾಟಕ ಭೂಕಂದಾಯ ನಿಯಮ 1966ರ ನಿಯಮ 84 (4)ರ ಪ್ರಕಾರ ನೋಟಿಸ್‌ ಈಗಾಗಲೇ ಜಾರಿಗೊಳಿಸಲಾಗಿದೆ. ಕಾರ್ಡ್‌ ನೋಂದಣಿಗೆ ಅರ್ಜಿ ನೀಡಿದ ಬಳಿಕ ಸ್ಥಳ ಅಳತೆಗೆ ಸರ್ವೆಯರ್‌ಗಳು ಬಂದ ಸಮಯದಲ್ಲಿ ಈ ಎಲ್ಲ ದಾಖಲೆಗಳ ಪ್ರತಿಗಳನ್ನು ಸಂಬಂಧಪಟ್ಟ ಆಸ್ತಿಯ ಮಾಲಕ ನೀಡಬೇಕಾಗುತ್ತದೆ.

ವಸತಿ ಸಮುಚ್ಚಯದವರ ಗಮನಕ್ಕೆ
ಪ್ರೋಪರ್ಟಿ ಕಾರ್ಡ್‌ ಮಾಡಬೇಕಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದಿಂದ ನಗರದ ಎಲ್ಲ ಅಪಾರ್ಟ್‌ಮೆಂಟ್‌ಗಳ ಮಾಲಕರು, ಅಧ್ಯಕ್ಷರಿಗೆ ಪತ್ರ ಕಳುಹಿಸಲಾಗಿದೆ. ವಸತಿ ಸಮುಚ್ಚಯದ ಮುಖ್ಯ ನಿವೇಶನಕ್ಕೆ ಒಂದು ಪ್ರಾಪರ್ಟಿ ಕಾರ್ಡ್‌, ಉಳಿದಂತೆ ನಿವೇಶನದಲ್ಲಿ ವಾಸವಾಗಿರುವವರಿಗೆ ಪ್ರತ್ಯೇಕ ಪ್ರಾಪರ್ಟಿ ಕಾರ್ಡ್‌ ಮಾಡಲಾಗುತ್ತದೆ. ಮುಖ್ಯ ನಿವೇಶನದಾರರು ಪ್ರಾಪರ್ಟಿ ಕಾರ್ಡ್‌ಗಾಗಿ ಮದರ್‌ ಡೀಡ್‌, ಡೀಡ್‌ ಆಫ್‌ ಡಿಕ್ಲರೇಷನ್‌, ಬಿಲ್ಡಿಂಗ್‌ ಅಪ್ರೂವುಡ್‌ ಪ್ಲ್ಯಾನ್‌, ಬಿಲ್ಡಿಂಗ್‌ ಪರ್ಮಿಷನ್‌ ಸರ್ಟಿಫಿಕೇಟ್‌, ಬಿಲ್ಡಿಂಗ್‌ ಕಂಪ್ಲೀಷನ್‌ ಸರ್ಟಿಫಿಕೇಟ್‌, ಕನ್ವರ್ಶನ್‌ ಸರ್ಟಿಫಿಕೇಟ್‌, ಆರ್‌ಟಿಸಿ/ಖಾತಾ ದಾಖಲೆಗಳನ್ನು ನೀಡಬೇಕು.

ಒಂದು ವಸತಿ ಸಮುಚ್ಚಯದವರು ಒಮ್ಮೆ ಈ ದಾಖಲೆಗಳನ್ನು ಯು.ಪಿ.ಒ.ಆರ್‌. ಯೋಜನ ಘಟಕಕ್ಕೆ ನೀಡಿದ ಬಳಿಕ, ಆ ವಸತಿ ಸಮುಚ್ಚಯದಲ್ಲಿ ವಾಸವಾಗಿರುವವರು ಮತ್ತೊಮ್ಮೆ ಈ ದಾಖಲೆಗಳನ್ನು ನೀಡಬೇಕಾಗಿಲ್ಲ. ಬದಲಾಗಿ, ಫ್ಲ್ಯಾಟ್‌ನಲ್ಲಿ ವಾಸವಾಗಿರುವವರು ತಮ್ಮ ಸೇಲ್‌ ಡೀಡ್‌, ಆರ್‌ಟಿಸಿ/ಖಾತಾ, ಟ್ಯಾಕ್ಸ್‌ ಪೈಯ್ಡ ರಿಸಿಪ್ಟ್ನೀ ಡಬೇಕಾಗುತ್ತದೆ ಎಂದು ಯು.ಪಿ.ಒ.ಆರ್‌.ಯೋಜನ ಘಟಕದ ಮೂಲಗಳು ತಿಳಿಸಿವೆ.

ಪ್ರಾಪರ್ಟಿ ಕಾರ್ಡ್‌ ಮಾಡಿಸುವುದು ಹೇಗೆ?
ನಗರದ ಹಳೆ ತಾಲೂಕು ಕಚೇರಿ ಆವರಣದಲ್ಲಿರುವ ಯು.ಪಿ.ಒ.ಆರ್‌. ಯೋಜನ ಘಟಕ್ಕೆ ಹೋಗಿ ಪ್ರಾಪರ್ಟಿ ಕಾರ್ಡ್‌ ಮಾಡಿಸಲು ಸಂಬಂಧಪಟ್ಟ ಆಸ್ತಿದಾರರು ತಮ್ಮ ದಾಖಲೆಗಳನ್ನು ನಿಯೋಜನೆಗೊಂಡಿರುವ ಯುಪಿಒಆರ್‌ ಅಧಿಕಾರಿಗಳಿಗೆ ನೀಡಬೇಕು. ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಆ ಬಳಿಕ ಸ್ಥಳ ಸರ್ವೆಗೆ ಬರುವ ಬಗ್ಗೆ ದಿನಾಂಕ ತಿಳಿಸುತ್ತಾರೆ. ಅಂದು ಸರ್ವೆಯರ್‌ ಸ್ಥಳ ಸರ್ವೆಗೆ ಆಗಮಿಸುತ್ತಾರೆ. ಆ ದಿನ ಪೂರಕ ಮೂಲ ದಾಖಲೆಗಳನ್ನು ಅವರಿಗೆ ನೀಡಬೇಕಾಗುತ್ತದೆ. ಬಳಿಕ ಎಲ್ಲ ಮಾಹಿತಿ-ದಾಖಲೆ ಪರಿಶೀಲಿಸಿ ಕರಡು ಪ್ರಾಪರ್ಟಿ ಕಾರ್ಡ್‌ ನೀಡಲಾಗುತ್ತದೆ. ಅನಂತರ ಆಕ್ಷೇಪಣೆ-ತಿದ್ದುಪಡಿಗಳಿದ್ದರೆ ಸರಿಪಡಿಸಿ ಅಂತಿಮವಾಗಿ ಪ್ರಾಪರ್ಟಿ ಕಾರ್ಡ್‌ ವಿತರಿಸಲಾಗುವುದು.

ಅಗತ್ಯವಿರುವ ದಾಖಲೆಗಳು 
 ಕ್ರಯಪತ್ರ / ಖರೀದಿ ಪತ್ರ
 ಕಂದಾಯ ಕಟ್ಟಿದ ರಸೀದಿ/ ಕಂದಾಯ ಸಲ್ಲಿಸಿರುವ ಬಗ್ಗೆ ರಸೀದಿ
 ಆಸ್ತಿ ಋಣಭಾರ ಪತ್ರ (ಇ.ಸಿ.)
 ಮುನ್ಸಿಪಲ್‌ ಖಾತೆ ಪತ್ರದ ನಕಲು/ ಪಹಣಿ ಪತ್ರಿಕೆ.
 ನಿವೇಶನ ಹಂಚಿಕೆ ಪತ್ರ
 ನಿವೇಶನ ಸ್ವಾದೀನ ಪತ್ರ
 ಭೂಪರಿವರ್ತನೆ (ಅಲಿನೇಶನ್‌) ಆದೇಶ ನಕಲು-ಲೇಔಟ್‌ ನಕಾಶೆ ಪ್ರತಿ ನಕಲು.

ಆತಂಕ ಬೇಡ- ಸಮಯ ಇನ್ನೂ ಇದೆ
ಡಿಸೆಂಬರ್‌ ಬಳಿಕವೂ ಕಾರ್ಡ್‌ ನೋಂದಣಿ ಮಾಡಲು ಅವಕಾಶವಿದೆ. ಹಾಗಾಗಿ ಎಲ್ಲರೂ ಒಮ್ಮೆಲೇ ಕಾರ್ಡ್‌ ನೋಂದಣಿಗೆ ದೌಢಾಯಿಸುವ ಅಗತ್ಯವಿಲ್ಲ. ಈಗಾಗಲೇ ನೋಂದಣಿ ಕಚೇರಿ ಮುಂಭಾಗ ಭಾರೀ ಸಂಖ್ಯೆಯಲ್ಲಿ ನಾಗರಿಕರು ನೋಂದಣಿಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಗೊಂದಲ ಕೂಡ ಉಂಟಾಗುತ್ತಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಆಸ್ತಿ/ಮನೆ ಮಾರಾಟ ಮಾಡುವವರು ಮಾತ್ರ ಕಾರ್ಡ್‌ ನೋಂದಣಿ ಪ್ರಥಮವಾಗಿ ಮಾಡಿದರೆ ಉತ್ತಮ.
 – ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಕೆಲವೇ ದಿನದಲ್ಲಿ ವೆಬ್‌ಸೈಟ್‌/ ಆ್ಯಪ್‌ ರೆಡಿ
ಪಿ.ಆರ್‌.ಕಾರ್ಡ್‌ ನೋಂದಣಿ/ವಿತರಣೆಗೆ ಪೂರಕವಾಗಿ ನಾಗರಿಕರ ಸೌಲಭ್ಯಕ್ಕಾಗಿ ನೂತನ ವೆಬ್‌ಸೈಟ್‌  www.upormangaluru.com ಪ್ರಾರಂಭಿಸಲಾಗುತ್ತದೆ. ಸದ್ಯ ಈ ವೆಬ್‌ಸೈಟ್‌ ಚಾಲನೆಯಲ್ಲಿದ್ದು, ಸದ್ಯ ಕಾರ್ಡ್‌ ನೋಂದಣಿಯ ಅಗತ್ಯದ ಮಾಹಿತಿ ನೀಡುತ್ತಿದೆ. ಆದರೆ, ಅರ್ಜಿಯ ವಿವರ, ದೂರು ಸಲ್ಲಿಕೆ ಹಾಗೂ ನೋಂದಣಿಗೆ ದಿನಾಂಕ ನಿಗದಿ ಸಹಿತ ಇತರ ವಿಚಾರಗಳು ಕೆಲವೇ ದಿನದ ಬಳಿಕ ಈ ವೆಬ್‌ಸೈಟ್‌ ಮೂಲಕ ದೊರೆಯಲಿದೆ. ವೆಬ್‌ಸೈಟ್‌ ಪೂರ್ಣಮಟ್ಟದಲ್ಲಿ ಆರಂಭವಾದ ಬಳಿಕ ಜನರು ಅದರಲ್ಲಿನ ಮಾಹಿತಿ ಪಡೆದುಕೊಂಡು ಕಾರ್ಡ್‌ ನೋಂದಣಿ ನಡೆಸಬಹುದು. ಯುಪಿಒಆರ್‌ ನೋಂದಣಿಗೆ ಬೇಕಾದ ದಾಖಲೆಗಳನ್ನು ಮನೆಯಿಂದಲೇ ಅಪ್‌ಲೋಡ್‌ ಮಾಡುವುದಕ್ಕೆ ಬೇಕಾದ ‘ಆ್ಯಪ್‌’ ಕೂಡ ರೆಡಿಯಾಗುತ್ತಿದ್ದು, ಕೆಲವೇ ದಿನದಲ್ಲಿ ಇದು ಸೇವೆಗೆ ಲಭ್ಯವಾಗಲಿದೆ. ಯುಪಿಒಆರ್‌ ಕುರಿತು ಬರುವ ದೂರುಗಳ ತ್ವರಿತ ವಿಲೇವಾರಿಗೆ ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿದೆ. ವಾರಕ್ಕೆ ಎರಡು ಬಾರಿ ಸಭೆ ನಡೆಸುವ ಈ ಸಮಿತಿಯು ದೂರುಗಳನ್ನು ವಿಚಾರಣೆ ನಡೆಸಲಿದೆ. 

ಆತಂಕ ಬೇಡ- ಸಮಯ ಇನ್ನೂ ಇದೆ
ಡಿಸೆಂಬರ್‌ ಬಳಿಕವೂ ಕಾರ್ಡ್‌ ನೋಂದಣಿ ಮಾಡಲು ಅವಕಾಶವಿದೆ. ಹಾಗಾಗಿ ಎಲ್ಲರೂ ಒಮ್ಮೆಲೇ ಕಾರ್ಡ್‌ ನೋಂದಣಿಗೆ ದೌಢಾಯಿಸುವ ಅಗತ್ಯವಿಲ್ಲ. ಈಗಾಗಲೇ ನೋಂದಣಿ ಕಚೇರಿ ಮುಂಭಾಗ ಭಾರೀ ಸಂಖ್ಯೆಯಲ್ಲಿ ನಾಗರಿಕರು ನೋಂದಣಿಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಗೊಂದಲ ಕೂಡ ಉಂಟಾಗುತ್ತಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಆಸ್ತಿ/ಮನೆ ಮಾರಾಟ ಮಾಡುವವರು ಮಾತ್ರ ಕಾರ್ಡ್‌ ನೋಂದಣಿ ಪ್ರಥಮವಾಗಿ ಮಾಡಿದರೆ ಉತ್ತಮ.
 – ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಪ್ರಾಪರ್ಟಿ ಕಾರ್ಡ್‌: ಸಂಪರ್ಕಿಸಬೇಕಾದ ವಿಳಾಸ
ಯು.ಪಿ.ಒ.ಆರ್‌. ಯೋಜನ ಘಟಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ), 1ನೇ ಮಹಡಿ, ಹಳೆ ತಾಲೂಕು ಕಚೇರಿ ಆವರಣ ಹಂಪನಕಟ್ಟೆ, ಮಂಗಳೂರು-575001 ಇ ಮೈಲ್‌: [email protected]  

‡ದಿನೇಶ್‌ ಇರಾ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.