ಗುಡ್ಡೆಯಂಗಡಿ: ಎಚ್‌ಪಿಸಿಎಲ್ ಸಿಬಂದಿ ಪ್ರತಿಭಟನೆ
Team Udayavani, May 4, 2019, 6:00 AM IST
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಕಂಪೆನಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.
ಬಂಟ್ವಾಳ : ಎಚ್‌ಪಿಸಿಎಲ್ ಕಂಪೆನಿ 11 ಮಂದಿ ಭದ್ರತಾ ಸಿಬಂದಿಯನ್ನು ಯಾವುದೇ ಪೂರ್ವ ಸೂಚನೆ ನೀಡದೆ ಕರ್ತವ್ಯದಿಂದ ತೆರವು ಮಾಡಿದ ಕ್ರಮದ ವಿರುದ್ಧ ಬಡಗ ಬೆಳ್ಳೂರು ಗುಡ್ಡೆಯಂಗಡಿ ಘಟಕದಲ್ಲಿ ಸಿಬಂದಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅಧಿಕಾರಿ ಗಳ ಜತೆ ಮಾತುಕತೆ ನಡೆಸಿ ಸೇವೆಯಲ್ಲಿ ಮುಂದುವರಿಸಲು ಕ್ರಮ ಕೈಗೊಂಡಿದ್ದಾರೆ.
ಕಂಪೆನಿಯ ಗುಡ್ಡೆಯಂಗಡಿ, ಮಳಲಿ, ಕೈಕಂಬ, ಕಂದಾವರ ಘಟಕದ ಸ್ಥಳೀಯ 11 ಮಂದಿ ನೌಕರರನ್ನು ಸಂಸ್ಥೆ ಕೆಲಸದಿಂದ ತೆಗೆದು ಹಾಕಿತ್ತು. ಕಳೆದ 6 ವರ್ಷಗಳಿಂದ ಅವರು ಪಾಳಿಯಲ್ಲಿ ಕಾವಲುಗಾರ ಸೇವೆ ನಿರ್ವಹಿಸುತ್ತಿದ್ದರು. ಕೆಲಸ ಕಳೆದುಕೊಂಡ ಸಿಬಂದಿ ಮೇ 3ರಂದು ಬೆಳಗ್ಗೆ ಗುಡ್ಡೆಯಂಗಡಿ ಕಂಪೆನಿ ಗೇಟಿನ ಮುಂದೆ ಪ್ರತಿಭಟನೆ ನಡೆಸಿದರು.
ಶಾಸಕರಿಂದ ಮನವರಿಕೆ
ಮಾಹಿತಿ ತಿಳಿದ ಶಾಸಕರು ಸ್ಥಳಕ್ಕೆ ಬಂದಾಗ ಕೆಲಸ ಕಳೆದು ಕೊಂಡ ಭದ್ರತಾ ಸಿಬಂದಿ ತಮ್ಮ ಅಳಲನ್ನು ತೋಡಿ ಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಂಸ್ಥೆಯ ಆಡಳಿತ ವರ್ಗವನ್ನು ಪ್ರತಿ ಭಟನ ಸ್ಥಳಕ್ಕೆ ಕರೆಯಿಸಿ ಕಷ್ಟದ ಕಾಲ ದಲ್ಲಿ ಸ್ಥಳೀಯ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಿದ್ದಾರೆ. ಆದರೆ ಕಂಪೆನಿ ಸಮರ್ಥವಾಗಿ ಕಾರ್ಯ ನಡೆಸಿ ಕೊಂಡು ಹೋಗುವ ಈ ಸಂದರ್ಭ ಕಾರ್ಮಿಕರ ಮೇಲೆ ಯಾವುದೇ ದೂರುಗಳಿಲ್ಲದೆ, ಪೂರ್ವ ಮಾಹಿತಿ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸುವುದು ಸರಿಯಲ್ಲ. ಆರಂಭದಿಂದ ಕಂಪೆನಿಯ ಏಳಿಗೆಗೆ ದುಡಿದ ಸ್ಥಳೀಯ ಸಿಬಂದಿಗೆ ಅನ್ಯಾಯ ಮಾಡಬೇಡಿ ಎಂದರು.
ಈ ಕಂಪೆನಿ ನಿರ್ಮಿಸಲು ತಾವು ನೀಡಿದ ಜಮೀನಿಗೆ ಯಾವುದೇ ದರವನ್ನು ಪಡೆಯದೆ ಅವರು ಕಂಪೆನಿಯಲ್ಲಿ ಕೆಲಸ ಪಡೆದು ದುಡಿಯುತ್ತಿದ್ದು, ಮಾನವೀಯತೆ ನೆಲೆ ಯಲ್ಲಿ ಅವರನ್ನು ಕರ್ತವ್ಯದಲ್ಲಿ ಉಳಿಸಿ ಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಮಾತುಕತೆ ಸಂದರ್ಭ ಕಂಪೆನಿಯ ಡಿ.ಜಿ.ಎಂ. ಬಿಶ್ವಾಸ್ ಕುಮಾರ್ ಶರ್ಮ, ಮ್ಯಾನೇಜರ್ ಕಿರಣ್ ಕುಮಾರ್, ಪ್ರಮುಖರಾದ ದೇವಪ್ಪ ಪೂಜಾರಿ, ಚಂದ್ರಹಾಶ ಶೆಟ್ಟಿ ನಾರ್ಲ, ಭುಜಂಗ ಕುಲಾಲ್, ಉಮೇಶ್ ಅರಳ, ಉಮೇಶ್ ಶೆಟ್ಟಿ, ನಂದರಾಮ್ ರೈ, ವಸಂತ ಕುಮಾರ್ ಅಣ್ಣಳಿಕೆ, ಗಂಜಿಮಠ ಗ್ರಾ.ಪಂ. ಸದಸ್ಯ ದುರ್ಗಾದಾಸ ಶೆಟ್ಟಿ, ಸಂದೀಪ್ ಶೆಟ್ಟಿ ಮೊಗರು, ಪವನ್ ಕುಮಾರ್ ಶೆಟ್ಟಿ, ಮಂಜುನಾಥ್ ಶೆಟ್ಟಿಗಾರ್, ಪುರುಷೋತ್ತಮ ಶೆಟ್ಟಿ ವಾಮದಪದವು, ಬಾಸ್ಕರ್ ಕುಲಾಲ್ ಮೊಗರು, ರಮೇಶ್ ಭಟ್ಟಾಜೆ, ರಂಜನ್ ಶೆಟ್ಟಿ, ವೇದಾನಂದ ಕಾರಂತ, ಅರಳ ಗ್ರಾ.ಪಂ. ಸದಸ್ಯ ಅಶ್ರಫ್ ಮತ್ತಿತರರರಿದ್ದರು. ಬಂಟ್ವಾಳ ಗ್ರಾ. ಠಾಣಾ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಮಾಡಿದ್ದರು.
ಮೇಲಧಿಕಾರಿ ಸೂಚನೆವರೆಗೆ ಕೆಲಸದಲ್ಲಿ ಮುಂದುವರಿಕೆ
ಸ್ಥಳಕ್ಕೆ ಅಗಮಿಸಿದ ಕಂಪೆನಿಯ ಜನರಲ್ ಮ್ಯಾನೇಜರ್ ರಾಜಶೇಖರನ್ ಮಾತನಾಡಿ, ಪ್ರಸ್ತುತ ಎಲ್ಲ ಕಂಪೆನಿಗಳಲ್ಲೂ ಮಾಜಿ ಸೈನಿಕರನ್ನು ಪಹರೆ ಕೆಲಸಕ್ಕೆ ನೇಮಿಸುವಂತೆ ಸರಕಾರದ ಆದೇಶವಿದೆ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಕಂಪೆನಿಯ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಮುಂದಿನ ಕ್ರಮಗಳ ಬಗ್ಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.