ಚಲನಚಿತ್ರಗಳಿಂದಾಗಿ ನಾಡಿನೆಲ್ಲೆಡೆ ಜನಪ್ರಿಯವಾದ ಹುಲಿವೇಷ


Team Udayavani, Sep 22, 2017, 4:03 PM IST

22-Mng-3.jpg

ಮಹಾನಗರ : ನವರಾತ್ರಿ ಪ್ರಾರಂಭವಾಯಿತೆಂದರೆ ಕರಾವಳಿ ಭಾಗದಲ್ಲಿ  ಹುಲಿವೇಷ ನೋಡುವ ಗಮ್ಮತ್ತೇ ಬೇರೆ. ಇತ್ತೀಚೆಗೆ ಹುಲಿವೇಷ ಕುಣಿತದಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಅದಕ್ಕೆ ಆಧುನಿಕ ಸ್ಪರ್ಶ ಸಿಕ್ಕಿದೆ. ಈ ಕಾರಣದಿಂದಲೇ ನವರಾತ್ರಿಯ ಈ ಹುಲಿವೇಷವೂ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.

ಇಪ್ಪತ್ತೈದು ವರ್ಷಗಳ ಹಿಂದಿದ್ದ ಟ್ರೆಂಡ್‌ ಬೇರೆಯೇ. ಕೈಯಲ್ಲೊಂದು ಗ್ಯಾಸ್‌ಲೈಟ್‌ ಹಿಡಿದುಕೊಂಡು ರಾತ್ರಿಯಾದರೂ ಮನೆ-ಮನೆಗೆ ತೆರಳಿ ಹುಲಿವೇಷ ಕುಣಿಯುತ್ತಿದ್ದ ಕಾಲವದು. ದಿನದಲ್ಲಿ 300 ರೂ. ಸಿಕ್ಕರೆ ಅದುವೇ ದೊಡ್ಡ ವಿಚಾರವಾಗಿತ್ತು. ಹತ್ತಾರು ಕಿಲೋ ಮೀಟರ್‌ ನಡೆದುಕೊಂಡೇ ಮನೆ ಮನೆಗೆ ತೆರಳುತ್ತಿದ್ದರು. ಈಗ ಹುಲಿ ವೇಷಗಳು ವಾಹನವೇರಿ ಬರುತ್ತವೆ. ಈ ವ್ಯವಸ್ಥೆಯಿಂದ ಚಿತ್ರಣ ಸಂಪೂರ್ಣ ಬದಲಾಗಿದೆ. ಮೂರು ವರ್ಷಗಳ ಹಿಂದೆ ಸಿನಿಮಾದಲ್ಲೂ ಹುಲಿವೇಷ ಕಲೆ ಪರಿಚಯವಾದಲ್ಲಿಂದ “ಟೈಗರ್‌ ಡ್ಯಾನ್ಸ್‌’ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ಕರಾವಳಿ ಪ್ರದೇಶವಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹುಲಿವೇಷ ಜನಪ್ರಿಯತೆ ಗಳಿಸಿತ್ತು. ಈಗ ಅದರ ಪರಿಧಿ ವಿಸ್ತರಿಸಿ, ಅನೇಕರು ಹುಲಿವೇಷ ಕುಣಿತ ಕಲಾವಿದರಾಗಿಯೂ ಗಮನ ಸೆಳೆಯುತ್ತಿದ್ದಾರೆ. ಹುಡುಗಿಯರೂ ಒಂದು ಕೈ ನೋಡುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಹುಲಿ ವೇಷ ತಂಡದ ಬ್ಯಾಂಡ್‌ ವಾಲಗದ ಬಾಡಿಗೆ 12 ಸಾವಿರ ರೂ. ಇತ್ತು¤. ಅದೀಗ 2 ಲಕ್ಷ ರೂ.ಗೆ ಏರಿಕೆಯಾಗಿದೆ. ಸುಮಾರು 80 ಮಂದಿಯಿರುವ ತಂಡಕ್ಕೆ ದಿನಕ್ಕೆ 9 ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ಹೀಗಿರುವಾಗ, ಮನೆ ಮನೆಗೆ ತೆರಳಿ ಒಂದು ವಾರ ಕಾಲ ಕುಣಿಯುವುದು ಕಷ್ಟ ಸಾಧ್ಯ ಎನ್ನುತ್ತಾರೆ ಬರ್ಕೆ ಫ್ರೆಂಡ್ಸ್‌ ಸ್ಥಾಪಕಾಧ್ಯಕ್ಷ ಯಜ್ನೇಶ್ವರ್  ಬಿ.

ಸಿನೆಮಾದಿಂದ ಹೆಚ್ಚಿತು ಜನಪ್ರಿಯತೆ
ಚಲನಚಿತ್ರ, ರಿಯಾಲಿಟಿ ಶೋಗಳ ಮೂಲಕ ಕರಾವಳಿಯಲ್ಲಿದ್ದ ಹುಲಿವೇಷದ ಸಂಸ್ಕೃತಿ ರಾಜ್ಯಕ್ಕೇ ಪಸರಿಸಿದೆ. ಇದಕ್ಕೆ ಮುಖ್ಯ ಕಾರಣವಾದದ್ದು ರಕ್ಷಿತ್‌ ಶೆಟ್ಟಿ ನಿರ್ದೇಶನದ “ಉಳಿದವರು ಕಂಡಂತೆ’ ಚಲನಚಿತ್ರ. ಈ ಚಿತ್ರದಲ್ಲಿ ಕರಾವಳಿಯ ಸಂಸ್ಕೃತಿ ಬಿಂಬಿತವಾಗಿದ್ದು, ಹುಲಿವೇಷದ ಝಲಕ್‌ ಕೂಡ ಇತ್ತು. ಸ್ವತಃ ನಟ ರಕ್ಷಿತ್‌ ಶೆಟ್ಟಿ ಹುಲಿ ವೇಷಗಳ ಜತೆ ನೃತ್ಯ ಮಾಡುವ ಶೈಲಿ ಕರುನಾಡಲ್ಲೇ ಜನಪ್ರಿಯತೆ ಗಳಿಸಿತ್ತು. “ಒರಿಯರೊªರಿ ಅಸಲ್‌’, “ರಂಗ್‌’ ಸಹಿತ ಕೆಲ ತುಳು ಚಿತ್ರಗಳಲ್ಲೂ ಹುಲಿವೇಷ ಗುರುತಿಸಿಕೊಂಡಿತ್ತು. ಹಲವು ರಿಯಾಲಿಟಿ ಶೋಗಳೂ ಹುಲಿ ವೇಷಕ್ಕೆ ವೇದಿಕೆ ಒದಗಿಸಿವೆ. ಕಿಚ್ಚ ಸುದೀಪ್‌, ರಮೇಶ್‌ ಅರವಿಂದ್‌ ಸಹಿತ ಹಲವು ನಟ-ನಟಿಯರು ಹುಲಿವೇಷ ನೃತ್ಯ ಸ್ಟೆಪ್‌ ಹಾಕಿದ ಉದಾಹರಣೆಗಳಿವೆ. ನಟ ಶಿವರಾಜ್‌ ಕುಮಾರ್‌ ಇತ್ತೀಚೆಗೆ ಕದ್ರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದ‌ ವೇದಿಕೆಯಲ್ಲಿ ಹುಲಿವೇಷ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದ್ದರು. ಬಹು ನಿರೀಕ್ಷಿತ “ಟಗರು’ ಚಲನಚಿತ್ರದಲ್ಲಿಯೂ ಹುಲಿವೇಷದ ಸನ್ನಿವೇಶವಿದೆ.

ಹುಲಿ ವೇಷಕ್ಕೆ ಪ್ರತ್ಯೇಕ ಸ್ಪರ್ಧೆ
ಹುಲಿವೇಷ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಈ ಬಾರಿ ಹುಲಿವೇಷಕ್ಕೆಂದೇ ನಗರದಲ್ಲಿ ಎರಡು ಸ್ಪರ್ಧೆಗಳು ಏರ್ಪಟ್ಟಿವೆ. ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ನೇತೃತ್ವದಲ್ಲಿ “ಪಿಲಿನಲಿಕೆ’ ಎಂಬ ಸ್ಪರ್ಧೆಯನ್ನು ಸೆ. 29ರಂದು ನಗರದ ಮಂಗಳಾ ಕ್ರೀಡಾಂಗಣದ ವಾಲಿಬಾಲ್‌ ಮೈದಾನದಲ್ಲಿ ಆಯೋಜಿಸಿದ್ದು, ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1 ಲಕ್ಷ ರೂ. ಇಡಲಾಗಿದೆ. ಉತ್ತಮ ಬಣ್ಣಗಾರಿಕೆ, ಚರ್ಮ ತಮಟೆ, ಮರಿ ಹುಲಿ, ಕರಿ ಹುಲಿ, ಉತ್ತಮ ಕುಣಿತಕ್ಕೆ ತಲಾ 30 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.

ಈ ಕುರಿತು “ಸುದಿನ’ಕ್ಕೆ ಪ್ರತಿಕ್ರಿಯಿಸಿದ ಮಿಥುನ್‌ ರೈ “ಜಿಲ್ಲೆಯಲ್ಲಿ ಹುಲಿಕುಣಿತದ ಸಾಂಪ್ರದಾಯಿಕ ಕಲೆ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿದ್ದೇವೆ. ಪುರಾತನ ವೈಭವವನ್ನು ಜನರಿಗೆ ಮತ್ತೂಮ್ಮೆ ತೋರಿಸುವುದು ನಮ್ಮ ಕೆಲಸ’ ಎಂದರು. 

ಪಿಲಿ ಪಜ್ಜೆ
“ಟೈಗರ್‌ ಕ್ಯಾಂಪ್‌’ ತಂಡದ 25ನೇ ವರ್ಷದ ಆಚರಣೆಗೆಂದು ಸೆ. 29ರಂದು ನಗರದ ಮಾರ್ಗನ್ಸ್‌ ಗೇಟ್‌ ಸಮೀಪದ ಕಲ್ಯಾಣೋತ್ಸವ ಮೈದಾನದಲ್ಲಿ “ಪಿಲಿಪಜ್ಜೆ ‘ಎಂಬ ಹುಲಿ ವೇಷ ಸ್ಪರ್ಧೆ ಏರ್ಪಡಿಸಿದೆ. ವಿಜೇತರಿಗೆ ಪ್ರಥಮ ಬಹುಮಾನ 1 ಲಕ್ಷ, ದ್ವಿತೀಯ 60 ಸಾವಿರ ಮತ್ತು ತೃತೀಯ ಬಹುಮಾನ 40 ಸಾವಿರ ರೂ. ಘೋಷಿಸಿದೆ. 

“ನಾನು 40 ವರ್ಷದಿಂದ ಹುಲಿವೇಷ ಹಾಕುತ್ತಿದ್ದೇನೆ. ಅಂದಿದ್ದ ಸಂಪ್ರದಾಯ ಇಂದಿಲ್ಲ. ಅಂದು ಹುಲಿವೇಷಕ್ಕೆ ಅದರದ್ದೇ ಕುಣಿತದ ಪ್ರಕಾರವಿತ್ತು. ಈಗ ಅದನ್ನು ಅನೇಕರು ಪಾಲಿಸುತ್ತಿಲ್ಲ. ಹಿಂದೆ ಹುಲಿವೇಷಗಾರರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದರು. ಮದ್ಯಪಾನ, ಮಾಂಸಾಹಾರ ಸೇವನೆ ಮಾಡುವಂತಿರಲಿಲ್ಲ. ಅಂದಿನ ಕಟ್ಟುನಿಟ್ಟಿನ ಕ್ರಮ ಇಂದಿಲ್ಲ’ ಎನ್ನುತ್ತಾರೆ ಹುಲಿ ವೇಷಧಾರಿ ಟೈಗರ್‌ ಕ್ಯಾಂಪ್‌ನ ರಾಜಾ.

ಮಹಿಳೆಯರೇನೂ ಕಮ್ಮಿ ಇಲ್ಲ!
ಒಂದು ಕಾಲದಲ್ಲಿ ಹುಲಿವೇಷ ಪುರುಷ ಪ್ರಧಾನವಾಗಿತ್ತು. ಇತ್ತೀಚೆಗೆ ಮಹಿಳೆಯರೂ ಹುಲಿವೇಷದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಅನೇಕ ಮಹಿಳೆಯರು ನವರಾತ್ರಿ ಸಮಯದಲ್ಲಿ ಮುಖಕ್ಕೆ ಬಣ್ಣ ಬಳಿದು ಹೆಜ್ಜೆ ಹಾಕುವುದುಂಟು. ಇವರು ಪುರುಷರಂತೆಯೇ ತಾಲೀಮು ನಡೆಸುತ್ತಾರೆ. ಅಷ್ಟೇಕೆ ರಿವರ್ಸ್‌ ಸ್ಲಿಪ್‌, ಸ್ಟಂಟ್‌ನಲ್ಲಿಯೂ ಮುಂದಿದ್ದಾರೆ.

ಮನೋರಂಜನೆ
ಸಾಂಪ್ರದಾಯಿಕ ಕಲೆಯಾಗಿದ್ದ ಹುಲಿವೇಷವಿಂದು ಮನೋರಂಜನೆಯ ಕಲೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ನನ್ನ ಅಪ್ಪ ಕೂಡ ಹುಲಿವೇಷಕ್ಕೆ ಬಣ್ಣ ಹಚ್ಚುತ್ತಿದ್ದರು. ದೇವರಲ್ಲಿ ಹೇಳಿದ ಹರಕೆ ಈಡೇರಲೆಂದು ಹುಲಿವೇಷಕ್ಕೆ ಬಣ್ಣ ಹಚ್ಚುವ ಕ್ರಮ ಕೆಲ ವರ್ಷಗಳ ಹಿಂದೆ ಇತ್ತು. ಹಿಂದಿದ್ದ ಹುಲಿವೇಷದ ಆಡಂಬರ ಸದ್ಯ ಮರೆಯಾಗಿದೆ. ಮುಂದಿನ ತಲೆಮಾರಿಗೆ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದನ್ನು ಪ್ರಸ್ತುತಪಡಿಸಲು ಮುಖ್ಯ ಮಾಧ್ಯಮ ಎಂದರೆ ಚಲನಚಿತ್ರ. ಸಿನಿಮಾಗಳಲ್ಲಿ ಹುಲಿವೇಷ ಬಳಸಿಕೊಳ್ಳುವುದರಿಂದ ಮುಂದಿನ ತಲೆಮಾರಿಗೆ ಪರಿಚಯಿಸಲು ಸಾಧ್ಯವಾದೀತು.
ನವೀನ್‌ ಡಿ. ಪಡೀಲ್‌, ನಟ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.