ಹುಲ್ಲಾ ಹೂಪ್: ಐದರ ಬಾಲೆಯ ವಿಶ್ವದಾಖಲೆ!
Team Udayavani, Jun 8, 2019, 10:13 AM IST
ಮಂಗಳೂರು: ಐದು ವರ್ಷದ ಬಾಲೆ ಆದ್ಯಾ ಎ. ಹುಲ್ಲಾ ಹೂಪ್ ನೃತ್ಯ ಶೈಲಿಯಲ್ಲಿ ವಿಶ್ವದಾಖಲೆ ಮಾಡಿ ಅಚ್ಚರಿ ಮೂಡಿಸಿದ್ದಾಳೆ. ಇಂಡಿಯಾ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು, ಭಾರತೀಯ ದಾಖಲೆಯೂ ಈಕೆಯ ಹೆಸರಿನಲ್ಲೇ ಇದೆ.
ಮಠದ ಕಣಿಯ ಅಶ್ವಿನ್- ಪ್ರಿಯಾಂಕಾ ದಂಪತಿಯ ಪುತ್ರಿ ಆದ್ಯಾ ಎರಡೂವರೆ ವರ್ಷ ವಯಸ್ಸಿನಿಂದಲೇ ನೃತ್ಯಾಭ್ಯಾಸ ಆರಂಭಿಸಿದ್ದಳು. ಈಗ ಹುಲ್ಲಾ ಹೂಪ್‌ನಲ್ಲಿ ಮೊಣಕಾಲು ಊರಿ 34 ನಿಮಿಷಗಳಲ್ಲಿ 4 ಸಾವಿರ ಬಾರಿ ನರ್ತಿಸಿ ದಾಖಲೆ ನಿರ್ಮಿಸಿದ್ದಾಳೆ. ಪ್ರಿಯದರ್ಶಿನಿ ಮೊಂಟೆಸರಿ ಹೌಸ್ ಆಫ್ ಚಿಲ್ಡ್ರನ್ಸ್ ನ ಯುಕೆಜಿ ವಿದ್ಯಾರ್ಥಿನಿ ಆದ್ಯಾ, ಹಾಡುಗಾರಿಕೆ, ಜಿಮ್ನಾಸ್ಟಿಯನ್, ನಾಟಕ, ಸಿನೆಮಾ, ಸ್ಕೇಟಿಂಗ್‌ನಲ್ಲಿ ಸೈ ಅನಿಸಿಕೊಂಡಿದ್ದಾಳೆ. ಈಕೆಯ ಶಾಲೆಯಲ್ಲೇ ವಿಶ್ವದಾಖಲೆ ಪ್ರದರ್ಶನ 2019ರ ಎ.6ರಂದು ನಡೆದಿತ್ತು. ಪ್ರಸ್ತುತ ಚಂದ್ರಶೇಖರ್ ಅವರಲ್ಲಿ ನೃತ್ಯಭ್ಯಾಸ ಮಾಡುತ್ತಿದ್ದಾಳೆ.
ಹುಲ್ಲಾ ಹೂಪ್ ಎಂದರೇನು?
ಈ ನೃತ್ಯ ಶೈಲಿ ಪಾಶ್ಚಾತ್ಯ ಮೂಲದ್ದು. ಪ್ರಸ್ತುತ ಭಾರತದಲ್ಲೂ ಸದ್ದು ಮಾಡುತ್ತಿದೆ. ರಿಂಗ್‌ನ್ನು ಸೊಂಟದ ಭಾಗಕ್ಕೆ ಹಾಕಿ ಅದನ್ನು ಸಂಗೀತಕ್ಕೆ ತಕ್ಕಂತೆ ಅಲುಗಾಡಿಸುವುದೇ ಈ ನೃತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.