ಮಹಿಳೆಯ 4.3 ಲಕ್ಷ ರೂ. ವಾಪಸ್ಸಿಗೆ ನೆರವಾದ ಎಸ್‌ಐ

Team Udayavani, Feb 3, 2018, 7:15 AM IST

PsI-2-2.jpg

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ಕಾಮಗಾರಿ ವೇಗ ಪಡೆಯುತ್ತಿದ್ದಂತೆ ಭೂಮಿ ಬಿಟ್ಟುಕೊಟ್ಟ ಭೂಮಾಲಕರಿಗೆ ಪರಿಹಾರ ವಿತರಣೆಯಲ್ಲಿ ಬ್ರೋಕರ್‌ಗಳು ಹಸ್ತಕ್ಷೇಪ ನಡೆಸುತ್ತಿರುವುದು ದೃಢವಾಗಿದೆ. 4.30 ಲಕ್ಷ ರೂ. ವಂಚನೆಗೆ ಒಳಗಾದ ಅನಕ್ಷರಸ್ಥ ಮಹಿಳೆಯೋರ್ವರ ಮೂಲಕ ಬ್ರೋಕರ್‌ಗಳ ಹಾವಳಿ ಬೆಳಕಿಗೆ ಬಂದಿದೆ.

34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ನಿವಾಸಿಯೋರ್ವರು ಅನ್ಯಾಯಕ್ಕೆ ಒಳಗಾದ ಮಹಿಳೆ. ಕೂಲಿ ಕೆಲಸ ಮಾಡುತ್ತಿದ್ದು ಮಗನೊಡನೆ ಬೊಳ್ಳಾರಿನಲ್ಲಿ ವಾಸವಾಗಿರುವ ಮಹಿಳೆಯ ಜಾಗ, ರಾ.ಹೆ.ಗಾಗಿ ಭೂಸ್ವಾಧೀನಗೊಂಡಿತ್ತು. ಜಾಗದ ಪರಿಹಾರ ಮೊತ್ತ 5.20 ಲಕ್ಷ ರೂ.ವನ್ನು ಸರಕಾರ 2016ರ ಅ. 5ರಂದೇ ಉಪ್ಪಿನಂಗಡಿಯ ಕಾರ್ಪೊರೇಷನ್‌ ಬ್ಯಾಂಕಿನಲ್ಲಿರುವ ಮಹಿಳೆಯ ಖಾತೆಗೆ ಜಮೆ ಮಾಡಿತ್ತು. ಇದರ ಅನಂತರ ವಂಚನೆ ನಡೆದಿದೆ.

ಸಹಾಯ ನೆವದಲ್ಲಿ ವಂಚನೆ
ಈ ಅನಕ್ಷರಸ್ಥ ಮಹಿಳೆಗೆ ಬ್ಯಾಂಕಿನಿಂದ ಹಣ ಪಡೆದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗಿತ್ತು. ಇದನ್ನು ಸುಲಭವಾಗಿ ಬಳಸಿಕೊಂಡ ಸ್ಥಳೀಯ ನಿವಾಸಿ ಸತೀಶ್‌, ಮಹಿಳೆ ಜತೆಗೆ ಬ್ಯಾಂಕಿಗೆ ತೆರಳಿ 50 ಸಾವಿರ ರೂ.ಗಳನ್ನು ತೆಗೆದುಕೊಟ್ಟಿದ್ದರು. ಬಳಿಕ ಡಿ.17ರಂದು ಮತ್ತೆ 44,200 ರೂ. ತೆಗೆದುಕೊಟ್ಟಿದ್ದ. ಬಳಿಕ ಇಷ್ಟೇ ಹಣ ನಿಮಗೆ ಸೇರಿದ್ದು, ಉಳಿದ ಹಣವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬದ ಮಹಿಳೆ, ಕಳೆದ ಎರಡು ವರ್ಷಗಳಿಂದ ಹಲವರ ಬಳಿ ಈ ವಿಚಾರ ಹೇಳುತ್ತಾ ಬಂದರೂ ನ್ಯಾಯ ದೊರಕಿರಲಿಲ್ಲ. ಆಕೆ ಕೊನೆಗೆ ಬೇರೆ ದಾರಿ ಕಾಣದೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ನೆರವು ಕೋರಿದ್ದಾರೆ.

ಆಪದ್ಭಾಂಧವ ಎಸ್‌ಐ ನಂದಕುಮಾರ್‌
ಉಪ್ಪಿನಂಗಡಿಯ ಎಸ್‌ಐ ನಂದಕುಮಾರ್‌ ಅವರು ಪ್ರಕರಣವನ್ನು ಗಮನಿಸಿ, ಮಹಿಳೆಗೆ ವಂಚನೆ ನಡೆದಿರುವುದನ್ನು ಮನಗಂಡರು. ತತ್‌ಕ್ಷಣ ಸತೀಶ್‌ನನ್ನು ಬರಹೇಳಿ, ವಿಚಾರಣೆ ನಡೆಸಿದರು. ಆಗ ಪ್ರಕರಣ ಇನ್ನೊಂದು ರೂಪ ಬಯಲುಗೊಂಡಿದೆ. ಈ ಅವ್ಯವಹಾರ ಪ್ರಕರಣದಲ್ಲಿ ಸತೀಶ್‌ ಜತೆಗೆ ಅಮಾನತಿನಲ್ಲಿ ಇರುವ ರಾ.ಹೆ. ಪ್ರಾಧಿಕಾರದ ಅಧಿಕಾರಿಯೋರ್ವರು ಶಾಮೀಲಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಎಸ್‌ಐ ನಂದಕುಮಾರ್‌ ನೇತೃತ್ವದ ಪೊಲೀಸರ ತ್ವರಿತ ಕಾರ್ಯಾಚರಣೆ ಕಂಡು ದಂಗಾದ ವಂಚಕರು, ತಾವು ಇರಿಸಿಕೊಂಡಿದ್ದ ಸಂತ್ರಸ್ತ ಮಹಿಳೆಯ 4.20 ಲಕ್ಷ ರೂ. ಹಿಂದಿರುಗಿಸಿದರು. 

ಜಾಗಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿದ್ದಾನೆ ಎಂಬ ಒಂದೇ ಕಾರಣಕ್ಕೆ ಸತೀಶ್‌ ವಿರುದ್ಧ ದೂರು ದಾಖಲಿಸಲು ಸಂತ್ರಸ್ತ ಮಹಿಳೆ ಒಪ್ಪಿಕೊಂಡಿಲ್ಲ. ಆದ್ದರಿಂದ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು, ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿಕೊಡಲಾಗಿದೆ.

ಎಸ್‌ಐ ಕಾರ್ಯಕ್ಕೆ ಶ್ಲಾಘನೆ
ಪ್ರಕರಣದಲ್ಲಿ ಎಸ್‌ಐ ನಂದಕುಮಾರ್‌ ಕಾರ್ಯ ವೈಖರಿ ಶ್ಲಾಘನೆಗೆ ಪಾತ್ರವಾಗಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಕೇವಲ 24 ತಾಸುಗಳಲ್ಲಿ ಮಹಿಳೆಗೆ ಅಷ್ಟೂ ಹಣ ಮರಳಿ ಸಿಗುವುದಕ್ಕೆ ಎಸ್‌ಐ ಕೈಗೊಂಡ ಮಾದರಿ ಕಾರ್ಯಾಚರಣೆ ಕಾರಣ ಎಂಬ ಪ್ರಶಂಸೆಯ ಮಾತು ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ವೈರಲ್‌ ಆಗಿದೆ.

ಚತುಷ್ಪಥದ ಹಿಂದೆ ಇದೆ ವಂಚನೆಯ ಕರಿನೆರಳು
ಮಂಗಳೂರು- ಬೆಂಗಳೂರು ನಡುವಿನ ರಾ.ಹೆದ್ದಾರಿಯನ್ನು ಚತುಷ್ಪಥಗೊಳಿಸುವುದಕ್ಕಾಗಿ ಈಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಜಾಗವನ್ನು ಸ್ವಾಧೀನ ಪಡಿಸಲಾಗಿದೆ. ಭೂಮಾಲಕರ ನಿರೀಕ್ಷೆಯ ದುಪ್ಪಟ್ಟು ಮೊತ್ತವನ್ನು ಸರಕಾರ ನೀಡಿರುವ ಕಾರಣ, ಭೂ ಸ್ವಾಧೀನಕ್ಕೆ ಸಂಬಂಧಿಸಿ ಯಾವುದೇ ಗೊಂದಲ ಏರ್ಪಟ್ಟಿಲ್ಲ. ಆದರೆ ಪರಿಹಾರ ವಿತರಣೆಯನ್ನು ಮಧ್ಯವರ್ತಿಗಳು ವಂಚನೆಗಾಗಿ ಬಳಸಿಕೊಂಡಿರುವ ಕರಿನೆರಳು ಕಾಣಿಸಿದೆ. ಅಧಿಕಾರಿ ವರ್ಗದ ಸಹಕಾರ ಪಡೆದುಕೊಂಡು, ಮಧ್ಯವರ್ತಿಗಳು ಸಾಕಷ್ಟು ವಂಚನೆ ನಡೆಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅನಕ್ಷರಸ್ಥರು, ಜಾಗದ ದಾಖಲೆಯ ತಿಳಿವಳಿಕೆ ಇಲ್ಲದವರು ಮಧ್ಯವರ್ತಿಗಳ ಸಹಕಾರ ಪಡೆದಿರುವ ಶಂಕೆ ಇದೆ. ಇವರು ಕುಟಿಲ ತಂತ್ರ ಬಳಸಿ ಭೂಮಿಯ ಮೌಲ್ಯ ಹೆಚ್ಚಿಸಿ, ಉಪಾಯದಿಂದ ಹಣ ಕೀಳುತ್ತಿರುವ ತಂತ್ರ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ. ವಂಚನೆಯ ಒಟ್ಟು ಹೂರಣ ಹೊರಬರಬೇಕಾದರೆ ದೊಡ್ಡ ಮಟ್ಟಿನಲ್ಲಿ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಅಮಾಯಕ ಮಹಿಳೆಗೆ ವಂಚನೆ ನಡೆಸಿರುವುದು ಗಮನಕ್ಕೆ ಬರುತ್ತಿದ್ದಂತೆ, ಮಧ್ಯವರ್ತಿಯನ್ನು ಕರೆಸಿ ವಿಚಾರಣೆ ನಡೆಸಿದ್ದೇವೆ. ಒಟ್ಟು ಚಿತ್ರಣ ಸಿಗುತ್ತಿದ್ದಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಲಾಯಿತು. ಪ್ರಕರಣ ಸುಖಾಂತ್ಯಗೊಂಡಿತು. ಇಂತಹ ಅದೆಷ್ಟು ಪ್ರಕರಣ ನಡೆದಿದೆಯೋ ಗೊತ್ತಿಲ್ಲ.
– ನಂದಕುಮಾರ್‌, ಎಸ್‌ಐ, ಉಪ್ಪಿನಂಗಡಿ ಠಾಣೆ

ಟಾಪ್ ನ್ಯೂಸ್

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

1

Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್‌

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.