ಸುಬ್ರಹ್ಮಣ್ಯ: ಮಗನ ಮಡಿಲಿಗೆ ವೃದ್ದೆ ತಾಯಿಯನ್ನು ಸೇರಿಸಿದ ಎಸ್ ಐ
Team Udayavani, May 16, 2021, 12:43 PM IST
ಸುಬ್ರಹ್ಮಣ್ಯ: ಲಾಕ್‍ಡೌನ್ ನೆಪದಲ್ಲಿ ಪೊಲೀಸರು ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸಿ ವಾಹನಗಳನ್ನು ಜಪ್ತಿ ಮಾಡಿಕೊಳ್ಳುತ್ತಾರೆ ಎನ್ನುವ ಸಾರ್ವಜನಿಕ ದೂರುಗಳ ಮದ್ಯೆಯೂ ಮಾನವೀಯತೆಯುಳ್ಳ ಪೊಲೀಸರು ನಮ್ಮ ನಡುವೆ ಕಾಣಬರುತ್ತಿರುತ್ತಾರೆ.
ಪೊಲೀಸರ ಮಾನವೀಯ ಹಲವು ಕಾರ್ಯಗಳು ನಡೆಯುತ್ತಿರುವ ಮದ್ಯೆ ಇಲ್ಲೊಬ್ಬು ಮಹಿಳಾ ಪಿಎಸ್ ಐ ಮಾನವೀಯತೆ ಜತೆಗೆ ಸಮಯೋಚಿತ ಕೆಲಸದಿಂದ ಮಗನ ಮಡಿಲಿಗೆ ವೃದ್ದೆ ತಾಯಿಯನ್ನು ಸೇರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಮೆಚ್ಚುಗೆಗೆ ಪಾತ್ರರಾದವರು ಸುಬ್ರಹ್ಮಣ್ಯ ಠಾಣೆ ಎಸ್ ಐ ಸಹಿತ ಠಾಣೆಯ ಸಿಬಂದಿಗಳು.
ಸುಬ್ರಹ್ಮಣ್ಯ ನಗರದ ಆಸುಪಾಸಿನಲ್ಲಿ ಲಾಕ್ ಡೌನ್ ನಡುವೆಯೂ ವೃದ್ದೆಯೊಬ್ಬರು ಕೆಲದಿನಗಳಿಂದ ಅಲೆದಾಡುತ್ತಿರುವುದು ಸುಬ್ರಹ್ಮಣ್ಯ ಠಾಣೆಯ ಎಸ್ಐ ಓಮನರವರ ಗಮನಕ್ಕೆ ಬಂದಿತ್ತು.
ಕೋವಿಡ್ ನಿಂದಾಗಿ 24 ಗಂಟೆಗಳ ಕಾಲ ಕರ್ತವ್ಯ ಜತೆಯಲ್ಲಿ ಠಾಣೆಯಲ್ಲಿ ಬೇರೆ ಬೇರೆ ಪ್ರಕರಣಗಳು ಬಿಡುವಿಲ್ಲದ ಕೆಲಸ ಕಾರ್ಯಗಳ ಮದ್ಯೆ ಸುಬ್ರಹ್ಮಣ್ಯ ಠಾಣಾಧಿಕಾರಿಗಳು ವ್ರದ್ದೆಗೆ ರಕ್ಷಣೆ ನೀಡಿ ಊಟ ತಿಂಡಿ ಎಲ್ಲವನ್ನು ನೀಡಿ ವ್ರದ್ದೆಯೊಬ್ಬರು ಕಂಡು ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಬಂಧಿಕರ ಪತ್ತೆಗೆ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ : ನರಿಮೊಗರು : ಜಡಿ ಮಳೆಗೆ ಜಾರಿದ ಕಂಪೌಂಡ್ ವಾಲ್ ಮನೆ ಕುಸಿತದ ಭೀತಿಯಲ್ಲಿ ಕುಟುಂಬ
ಸಾಮಾಜಿಕ ಜಾಲತಾಣದ ಸಂದೇಶ ಬೆಂಗಳೂರಿಗೂ ತಲುಪಿ ಬೆಂಗಳೂರು ನಿಂದ ಸುಬ್ರಹ್ಮಣ್ಯ ಠಾಣೆಗೆ ಬಂದ ಕರೆಯ ಆದಾರದಲ್ಲಿ ವ್ರದ್ದೆ ಬೆಂಗಳೂರಿನ ಕುರುಬನ ಹಳ್ಳಿ ದೊಡ್ಡ ಬಳ್ಳಾಪುರದವರು ಎಂಬುದು ಪತ್ತೆಯಾಯಿತು. ವ್ರದ್ದೆಯ ಮಗನ ಸಂಪರ್ಕ ದೊರೆತು ಬೆಂಗಳೂರುನಿಂದ ಮಗನನ್ನು ಕರೆಸಿ ಮಗನ ಮಡಿಲಿಗೆ ತಾಯಿ ವ್ರದ್ದೆಯನ್ನು ಒಪ್ಪಿಸಿದ್ದಾರೆ. ವೃದ್ದೆಯ ಮಗ ಬರುವವರೆಗೂ ಅವರಿಗೆ ಊಟ ತಿಂಡಿ ನೀಡಿ ಪ್ರೀತಿಯಿಂದ ಅವರನ್ನು ನೋಡಿಕೊಂಡಿದ್ದಾರೆ ಎಸ್ಐ ಓಮನರವರು.ಇವರಿಗೆ ಠಾಣೆಯ ಸಿಬಂದಿಗಳಾದ ನಾರಾಯಣ ಪಾಟಾಳಿ, ಭೀಮನಗೌಡ, ಬಸವರಾಜ್, ಲಕ್ಷ್ಮಿ, ಇಕ್ಬಾಲ್ ಸಹಕರಿಸಿದ್ದರು.
ಬೆಂಗಳೂರು ನಿಂದ ಕಣ್ತಪ್ಪಿ ಅದೇಗೋ ಸುಬ್ರಹ್ಮಣ್ಯ ಬಂದು ತಲುಪಿದ್ದ ವೃದ್ದೆ. ಒಂದೇಡೆ ನೆಟ್ಟಣ ರೈಲ್ವೆ ಸ್ಟೇಶನ್ ನಿಂದ ಸುಬ್ರಹ್ಮಣ್ಯ ಪೇಟೆ ತಲುಪಿದ್ದರು. ಅಮ್ಮ ಕಾಣುತಿಲ್ಲ ಮನೆಯಿಂದ ಕಾಣೇಯಾಗಿದ್ದಾರೆ ಎಂದು ಪರಿತಪಿಸುತಿದ್ದ ಮಗ ತಾಯಿ ದೊರೆತ ಖುಷಿಯಲ್ಲಿ ಸುಬ್ರಹ್ಮಣ್ಯ ಎಸ್ ಐ ಹಾಗೂ ಪೊಲೀಸರ ಕಾರ್ಯಕ್ಕೆ ಮನತುಂಬಿ ಕೃತಜ್ಞತೆ ಸಲ್ಲಿಸಿದ್ದಾನೆ. ಒಟ್ಟಿನಲ್ಕಿ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.