ದೇಹವನ್ನು 15 ತುಂಡು ಮಾಡಿ ಕಾಲುವೆಗೆ ಎಸೆದು ನಾಪತ್ತೆ ಕಥೆ ಕಟ್ಟಿದ ಭೂಪ
Team Udayavani, Apr 9, 2018, 8:40 AM IST
ಸವಣೂರು (ಪುತ್ತೂರು): ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ದೇಹವನ್ನು 15 ತುಂಡು ಮಾಡಿ ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಹೊಸಪೇಟೆಯಲ್ಲಿ ಸಂಭವಿಸಿದೆ. ಪುತ್ತೂರು ತಾಲೂಕು ಕೈಮಣ ಗ್ರಾಮದ ಅಣವುಮೂಲೆ ಚಂದ್ರ ಹಾಸ (27)ಆರೋಪಿ.ಆತನ ಪತ್ನಿ ಭಾರತಿ (24) ಕೊಲೆಯಾದವರು. 8 ವರ್ಷಗಳ ಹಿಂದೆ ಬಳ್ಳಾರಿ ಹೊಸಪೇಟೆಯ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದ ಚಂದ್ರಹಾಸ ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಂಪಿಯ ಎಂ.ಪಿ. ಪ್ರಕಾಶ್ ನಗರದ ಭಾರತಿಯನ್ನ ಪ್ರೀತಿಸಿ ಮದುವೆಯಾಗಿದ್ದನು. ನಂತರ ತಾನೇ ಒಂದು ಬಟ್ಟೆ ಅಂಗಡಿ ಪ್ರಾರಂಭಿಸಿ ವ್ಯಾಪಾರ ಕೂಡ ಆರಂಭಿಸಿದ ಚಂದ್ರಹಾಸ ನಗರದ ಸುಣ್ಣದ ಬಟ್ಟಿ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು.
ಘಟನೆಯ ವಿವರ
ಫೆ. 19ರಂದು ಕಾರು ಕೊಡಿಸು ವಂತೆ ಚಂದ್ರಹಾಸನಲ್ಲಿ ಪತ್ನಿ ಭಾರತಿ ಒತ್ತಾಯಿಸಿದ್ದರು. ಅದೇ ವಿಚಾರಕ್ಕೆ ಸಂಬಂಧಿಸಿ ಅವರೊಳಗೆ ಜಗಳ ಶುರುವಾಯಿತು. ಈ ವೇಳೆ ಚಂದ್ರಹಾಸ ಪತ್ನಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದು. ಹೊಡೆತದ ಪರಿಣಾಮ ಭಾರತಿ ತಲೆ ತಿರುಗಿ ಬಿದ್ದು ಮೃತಪಟ್ಟರು. ಅದರಿಂದ ಹೆದರಿದ ಚಂದ್ರಹಾಸ, ಪತ್ನಿಯ ದೇಹವನ್ನು ಹದಿನೈದು ತುಂಡುಮಾಡಿ, ನಾಲ್ಕು ಬ್ಯಾಗ್‌ಗಳಲ್ಲಿ ತುಂಬಿ ನಗರದ ರೈಲು ನಿಲ್ದಾಣ ರಸ್ತೆಯ ಎಲ್‌ಎಲ್‌ಸಿ ಕಾಲುವೆಯಲ್ಲಿ ಎಸೆದು ಹೋಗಿರುತ್ತಾನೆ ಎಂದು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ನಾಟಕವಾಡಿದ
ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಚಂದ್ರಹಾಸ, ಆಕೆಯ ತವರು ಮನೆಯವರಿಗೂ ಸುದ್ದಿಮುಟ್ಟಿಸಿದ್ದ. ಎಲ್ಲರೂ ಸೇರಿ ಹುಡುಕೋಣ, ಪೊಲೀಸ್ ಠಾಣೆಗೆ ದೂರು ಕೊಡುವುದು ಬೇಡ ಎಂದು ಕುಟುಂಬದವರನ್ನು ನಂಬಿಸಿ, ಕೆಲವು ದಿನಗಳ ಕಾಲ ಪತ್ನಿಯನ್ನು ಹುಡುಕಿದಂತೆ ನಟಿಸಿದ ಆತ ಬಳಿಕ ತಾನೇ ನಾಪತ್ತೆಯಾಗಿದ್ದ. ಅನುಮಾನಗೊಂಡ ಮೃತ ಮಹಿಳೆಯ ಅಣ್ಣ ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು. ಕಣ್ಮರೆಯಾಗಿದ್ದ ಚಂದ್ರಹಾಸನನ್ನ ಎ.5ರಂದು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.